• About us
  • Contact us
  • Disclaimer
Friday, October 10, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

HERO VIDA VX2: ಮಾರುಕಟ್ಟೆಗೆ ಬರಲಿದೆ ‘ಹೀರೋ ವಿಡಾ ವಿಎಕ್ಸ್2’ ಎಲೆಕ್ಟ್ರಿಕ್ ಸ್ಕೂಟರ್

Coastal Times by Coastal Times
June 28, 2025
in ಗ್ಯಾಜೆಟ್
HERO VIDA VX2: ಮಾರುಕಟ್ಟೆಗೆ ಬರಲಿದೆ ‘ಹೀರೋ ವಿಡಾ ವಿಎಕ್ಸ್2’ ಎಲೆಕ್ಟ್ರಿಕ್ ಸ್ಕೂಟರ್
38
VIEWS
WhatsappTelegramShare on FacebookShare on Twitter

Hero Vida vx2: ಹೀರೋ ಮೋಟೋಕಾರ್ಪ್ ಎಲೆಕ್ಟ್ರಿಕ್ ಕಂಪನಿ ದ್ವಿಚಕ್ರ ವಾಹನ ವಿಭಾಗದಲ್ಲಿ ಹೊಸ ಮಾದರಿಯ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸುತ್ತಿದ್ದು, ಜುಲೈ 1ರಂದು ಮಾರುಕಟ್ಟೆಗೆ ಬರಲಿದೆ.ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಎಕ್ಸ್ ಶೈಲಿಯನ್ನು ಮುಂದುವರೆಸಿದ್ದು, ಹೆಚ್ಚು ಕೈಗೆಟುಕುವಂತೆ ಮಾಡಲಾಗಿದೆ.

ಮಧ್ಯಮ ವರ್ಗಕ್ಕಾಗಿ ವಿಡಾ ವಿಎಕ್ಸ್2 ಮಾದರಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. 65,000 ರಿಂದ ರೂ.70,000 (ಎಕ್ಸ್-ಶೋರೂಂ) ನಡುವೆ ಬೆಲೆ ನಿಗದಿಪಡಿಸಲಾಗಿದೆ. ಅಂದರೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರ ದೈನಂದಿನ ಪ್ರಯಾಣದ ಅಗತ್ಯತೆಗಳನ್ನು ಪೂರೈಸಲಿದೆ.

ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆಯಡಿಯಲ್ಲಿ ಲಭ್ಯ. ಇದರರ್ಥ ಸ್ಕೂಟರ್ ಖರೀದಿಸಿದ ನಂತರ ಬಳಕೆದಾರರು ಬ್ಯಾಟರಿಯನ್ನು ನೇರವಾಗಿ ಖರೀದಿಸದೆ ಮಾಸಿಕ ಶುಲ್ಕಕ್ಕೆ ಬ್ಯಾಟರಿಯನ್ನು ಬಾಡಿಗೆಗೆ ಪಡೆಯಬಹುದು. ಖರೀದಿದಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವಲ್ಲಿ ನಿರ್ಣಾಯಕವಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಅರೆ-ನಗರ ಪ್ರದೇಶಗಳಲ್ಲಿಯೂ ಇದನ್ನು ಉತ್ತಮವಾಗಿ ಸ್ವೀಕರಿಸುವ ಸಾಧ್ಯತೆಯಿದೆ.

ಬಳಕೆದಾರರು ಖಾಲಿ ಬ್ಯಾಟರಿಯನ್ನು ಹೀರೋ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಬಿಡಬಹುದು ಮತ್ತು ಮುಂಚಿತವಾಗಿ ಸಂಪೂರ್ಣವಾಗಿ ಚಾರ್ಜ್ ಮಾಡಲಾದ ಮತ್ತೊಂದು ಬ್ಯಾಟರಿ ಪ್ಯಾಕ್ ತೆಗೆದುಕೊಳ್ಳಬಹುದು. ಬಳಕೆದಾರರು ಇದಕ್ಕಾಗಿ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಒಂದೆಡೆ ಖರೀದಿ ಬೆಲೆಯನ್ನು ಕಡಿಮೆ ಮಾಡುತ್ತದೆ, ಮತ್ತೊಂದೆಡೆ ಚಾರ್ಜಿಂಗ್‌ನ ಒತ್ತಡವಿಲ್ಲದೆ ಸ್ಕೂಟರ್ ಅನ್ನು ನಿರಂತರವಾಗಿ ಬಳಸಬಹುದು. ವಿನ್ಯಾಸದ ವಿಷಯದಲ್ಲಿ ವಿಡಾ VX2 ತುಂಬಾ ಸ್ಟೈಲಿಶ್ ಮತ್ತು ಟ್ರೆಂಡಿಯಾಗಿದೆ.

ಈ ಸ್ಕೂಟರ್ ಅನ್ನು ಈಗಾಗಲೇ ಕೆಲವು ಶೋ ರೂಂಗಳಲ್ಲಿ ಲೈವ್​ ಮಾಡಲಾಗಿದೆ ಮತ್ತು ಅದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಈ ಸ್ಕೂಟರ್ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದು ಸ್ಪಷ್ಟ. ಸ್ಟೈಲಿಶ್ LED ಹೆಡ್‌ಲ್ಯಾಂಪ್‌ಗಳು, ಸಿಗ್ನೇಚರ್ LED ಟೈಲ್ ಲ್ಯಾಂಪ್‌ಗಳು, ಸುಧಾರಿತ LED ಟರ್ನ್ ಇಂಡಿಕೇಟರ್‌ಗಳು, ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೊಸ ಸೌಂದರ್ಯ ತರುವ ರೀತಿಯಲ್ಲಿ ಆಕರ್ಷಕವಾಗಿವೆ.

ಪರ್ಫಾರ್ಮೆನ್ಸ್​ ವಿಷಯಕ್ಕೆ ಬಂದರೆ, ಹೀರೋ ವಿಡಾ ವಿಎಕ್ಸ್ 2 ಎಲೆಕ್ಟ್ರಿಕ್ ಸ್ಕೂಟರ್‌ನ ಸಂದರ್ಭದಲ್ಲಿ ಶಕ್ತಿಯುತ ತಂತ್ರಜ್ಞಾನ ಮತ್ತು ಬಳಕೆದಾರರಿಗೆ ಅಗತ್ಯವಿರುವ ಕಾರ್ಯನಿರ್ವಹಣೆ ಎರಡೂ ಸಾಮರಸ್ಯದಿಂದ ಕೂಡಿರುತ್ತವೆ ಎಂದು ಸೂಚಿಸುತ್ತದೆ. ಈ ಸ್ಕೂಟರ್ ಶಕ್ತಿಯುತ ಪವರ್‌ಟ್ರೇನ್‌ನೊಂದಿಗೆ ಲಭ್ಯವಿರುತ್ತದೆ. ವಿವರಗಳ ಪ್ರಕಾರ, ವಿಡಾ ವಿಎಕ್ಸ್ 2 ಎರಡು ಪರಸ್ಪರ ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ.

ಮಧ್ಯಮ ವರ್ಗದ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಸ್ಕೂಟರ್ ತಂತ್ರಜ್ಞಾನ, ವಿನ್ಯಾಸ ಮತ್ತು ಸುರಕ್ಷತೆಯ ಎಲ್ಲಾ ಅಂಶಗಳಲ್ಲಿ ಆಕರ್ಷಕವಾಗಿದೆ. ಇದು ಸುಮಾರು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಬ್ಲೂಟೂತ್ ಕನೆಕ್ಟ್​, ಆಫ್-ರೋಡ್ ಪ್ರಯಾಣಕ್ಕಾಗಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.

ಒಂದು 2.2 kWh ಸಾಮರ್ಥ್ಯದೊಂದಿಗೆ ಮತ್ತು ಇನ್ನೊಂದು 3.4 kWh ಸಾಮರ್ಥ್ಯದೊಂದಿಗೆ ಬರಲಿದೆ. ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಮನೆಯಲ್ಲಿ ಅಥವಾ ಬ್ಯಾಟರಿ ಸ್ಟೇಷನ್‌ನಲ್ಲಿ ಪ್ರತ್ಯೇಕ ಬ್ಯಾಟರಿಗಳಾಗಿ ಚಾರ್ಜ್ ಮಾಡಬಹುದು ಅಥವಾ ಇನ್ನೊಂದನ್ನು ಬಳಸುವಾಗ ಒಂದನ್ನು ಚಾರ್ಜ್ ಮಾಡುವ ಮೂಲಕ ಪ್ರಯಾಣವನ್ನು ನಿರಂತರವಾಗಿ ಮುಂದುವರಿಸಬಹುದು. ಈ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ 100 ಕಿಲೋಮೀಟರ್ ವ್ಯಾಪ್ತಿಯನ್ನು ಒದಗಿಸುವ ನಿರೀಕ್ಷೆಯಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ 2013ರಲ್ಲಿ ನಡೆದ ಮಾರಾಟ ಪ್ರಕರಣ: 12 ವರ್ಷಗಳ ಬಳಿಕ ಮೂವರ ಮೇಲಿನ ಅಪರಾಧ ಸಾಬೀತು, ಸೋಮವಾರ ಶಿಕ್ಷೆ ಪ್ರಕಟ

Next Post

ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

Related Posts

ಸ್ಯಾಮ್‌ಸಂಗ್ ತನ್ನ ಹೊಸ ‘Samsung Galaxy F17 5G’ ಸ್ಮಾರ್ಟ್​ಫೋನ್ ಅನ್ನು​ ಮಾರುಕಟ್ಟೆಗೆ ಪರಿಚಯಿಸಿದೆ
ಗ್ಯಾಜೆಟ್

ಸ್ಯಾಮ್‌ಸಂಗ್ ತನ್ನ ಹೊಸ ‘Samsung Galaxy F17 5G’ ಸ್ಮಾರ್ಟ್​ಫೋನ್ ಅನ್ನು​ ಮಾರುಕಟ್ಟೆಗೆ ಪರಿಚಯಿಸಿದೆ

September 15, 2025
31
XIAOMI ENTRY IN AUTOMOBILE SECTOR- ಆಟೋಮೊಬೈಲ್​ ವಲಯಕ್ಕೆ ಎಂಟ್ರಿ ಕೊಟ್ಟ ಶಿಯೋಮಿ!
ಗ್ಯಾಜೆಟ್

XIAOMI ENTRY IN AUTOMOBILE SECTOR- ಆಟೋಮೊಬೈಲ್​ ವಲಯಕ್ಕೆ ಎಂಟ್ರಿ ಕೊಟ್ಟ ಶಿಯೋಮಿ!

July 10, 2025
37
Next Post
ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

Discussion about this post

Recent News

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

October 10, 2025
14
ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

October 10, 2025
106
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

October 10, 2025
ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

October 10, 2025
ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​

ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​

October 9, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d