ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಕಡಿವಾಣ ಹಾಕಿ, ವಿಶ್ವವನ್ನು ಸಹಜ ಸ್ಥಿತಿಗೆ ತರುವ ಭರವಸೆ ಹುಟ್ಟಿಸುವ ಲಸಿಕೆಗಾಗಿ ಇಡೀ ವಿಶ್ವ ಕಾತುರದಿಂದ ಕಾಯುತ್ತಿದೆ. ಈ ಸಂದರ್ಭದಲ್ಲೇ ಹಲವು ರಾಷ್ಟ್ರಗಳು ತಮ್ಮದೇ ಆದ ಲಸಿಕೆಗಳನ್ನು ಸಿದ್ಧಪಡಿಸಿ, ತುರ್ತುಬಳಕೆಗೆ ಅನುಮತಿ ಪಡೆದಿದೆ. ಇದರಂತೆ ಭಾರತದಲ್ಲಿಯೂ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್’ನ ಕೋವ್ಯಾಕ್ಸಿನ್ ಎರಡು ಲಸಿಕೆಗಳಿಗೆ ಮಾತ್ರ ಅನುಮತಿ ಸಿಕ್ಕಿದೆ.
ಲಸಿಕೆ ಸಂಶೋಧನೆಯಲ್ಲಿ ವಿಶ್ವದ ಸುಮಾರು 165 ಸಂಸ್ಥೆಗಳು ತೊಗಡಿಸಿಕೊಂಡಿವೆ. ಆದರೆ, ಕೋವಿಶೀಲ್ಡ್, ಫೈಜರ್, ಸ್ಪೂಟ್ನಿಕ್ ಸೇರಿದಂತೆ ಕೆಲವು ಮಾತ್ರವೇ ಬಳಕೆಗೆ ಅನುಮತಿ ಪಡೆದಿವೆ.
ಪ್ರಸ್ತುತ ಅಭಿವೃದ್ಧಿಪಡಿಸಲಾಗಿರುವ ಎರಡು ಲಸಿಕೆಗಳನ್ನು ಮಾನವ ಪ್ರಯೋಗಕ್ಕೂ ಮುನ್ನ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಕೋವಿಶೀಲ್ಡ್ 3ನೇ ಹಂತದಲ್ಲಿ ಯಾವುದೇ ರೀತಿ ಅಡ್ಡಪರಿಣಾಮಗಳೂ ಕಂಡು ಬಂದಿಲ್ಲ. ಲಸಿಕೆಯ ಪರಿಣಾಮ ಶೇ.70ರಷ್ಟಿದೆ ಎಂಬುದು ಪ್ರಯೋಗಗಳಲ್ಲಿ ಸಾಬೀತಾಗಿದೆ. ಆದರೆ, ಸುರಕ್ಷತೆ ಅವಧಿ ಎಷ್ಟಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಇನ್ನು ಕೋವ್ಯಾಕ್ಸಿನ್ ಕೂಡ ಶೇ.60-70ರಷ್ಟು ಪರಿಣಾಮಕಾರಿಯಾಗಿದ್ದು, ಎರಡೂ ಲಸಿಕೆಗಳಿಗೂ ಭಾರತದಲ್ಲಿ ತುರ್ತುಬಳಕೆಗೆ ಅನುಮೋದನೆ ದೊರೆತಿದೆ.
ಹಾಲುಣಿಸುವ, ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯಬಹುದೇ?
ಗರ್ಭಿಣಿಯರು ಹಾಗೂ ಹಾಲುಣಿಸುವ ಮಹಿಳೆಯರ ಮೇಲೆ ಲಸಿಕೆಯ ಪ್ರಯೋಗ ನಡೆಸಿರುವ ಯಾವುದೇ ಅಧ್ಯಯನಗಳು ಲಭ್ಯವಾಗಿಲ್ಲ. ಇಂತಹವರು ಲಸಿಕೆ ಪಡೆಯುವುದು ನಿಯಂತ್ರಿಸುವುದೇ ಒಳಿತು ಎಂದು ಹೇಳಲಾಗುತ್ತಿದೆ.
ಯಾರು ಲಸಿಕೆಯನ್ನು ಪಡೆಯಬಾರದು?
ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು, ತೀವ್ರ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು, ಕೊರೋನಾ ಸೋಂಕಿನಿಂದ ಬಳಲುತ್ತಿರುವವರು, ಪ್ಲಾಸ್ಮಾ ಥೆರಪಿ ಪಡೆದುಕೊಳ್ಳುತ್ತಿರವವರು ಲಸಿಕೆ ಪಡೆಯುವುದರಿಂದ ತಾತ್ಕಾಲಿಕವಾಗಿ ದೂರ ಇರುವುದು ಒಳ್ಳೆಯದು.
ಕೊರೋನಾದಿಂದ ಚೇತರಿಸಿಕೊಂಡಿರುವವರು ಲಸಿಕೆ ಪಡೆಯಬಹುದೇ?
ಖಂಡಿತ ಹೌದು. ಅಂತಹವರೂ ಕೂಡ ಲಸಿಕೆಯನ್ನು ಪಡೆಯಬಹುದಾಗಿದೆ. ಚೇತರಿಸಿಕೊಂಡ ಬಳಿಕ 14 ದಿನಗಳ ಬಳಿಕ ಲಕ್ಷಣಗಳಾವುದೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆಯುವುದು ಉತ್ತಮ.
Discover more from Coastal Times Kannada
Subscribe to get the latest posts sent to your email.
Discussion about this post