ಬೆಂಗಳೂರು: ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ರೂಪದರ್ಶಿ ವಿದ್ಯಾಶ್ರೀ (25) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಜಿಮ್ ತರಬೇತುದಾರ ಅಕ್ಷಯ್‌ನನ್ನು (27) ಪೊಲೀಸರು ಬಂಧಿಸಿದ್ದಾರೆ.
ಮಾಡೆಲ್ ಆತ್ಮಹತ್ಯೆ ಹಿಂದೆ ಫೇಸ್ಬುಕ್ ಪ್ರಿಯಕರನಿಂದ ಲವ್ ಸೆಕ್ಸ್ ದೋಖಾ ಬೆಳಕಿಗೆ ಬಂದಿದೆ. 21/07/23ರಂದು ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಪ್ರಿಯಕರನೇ ಕಾರಣ ಎನ್ನುವ ಅಂಶ ಡೈರಿ ಹೇಳುತ್ತಿದೆ. ಡೈರಿಯಲ್ಲಿ ಆತ್ಮಹತ್ಯೆಗೂ ಮುನ್ನ ವಿದ್ಯಾಶ್ರೀ ಡೈರಿಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಪ್ರಿಯಕರ ಅಕ್ಷಯ್ ಕಾರಣ ಎಂದು ಉಲ್ಲೇಖಿಸಿದ್ದಾರೆ.
ನನ್ನ ಸಾವಿಗೆ ಅಕ್ಷಯ್ ಕಾರಣ ಅವನು ನನ್ನ ನಾಯಿ ಥರ ಟ್ರೀಟ್ ಮಾಡ್ತಾ ಇದ್ದಾನೆ. ನನಗೆ ಕೊಡಬೇಕಾದ 1.76 ಲಕ್ಷ ದುಡ್ಡು ಕೇಳಿದಾರೆ ನನಗೆ ನನ್ನ ಪ್ಯಾಮಿಲಿಗೆ ಕೆಟ್ಟ ಕೆಟ್ಟ ಮಾತಲ್ಲಿ ಬೈದು ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನನ್ನ ಡಿಪ್ರೆಷನ್ಗೆ ಅಡಿಕ್ಟ್ ಮಾಡಿದ್ದಾನೆ. ಹೀಗಾಗಿ ನನಗೆ ಬದುಕಲು ಆಗುತ್ತಿಲ್ಲ. ಡೇ ಬೈ ಡೇ ನನಗೆ ತುಂಬಾ ಸ್ಟ್ರೈನ್ ಆಗುತ್ತಿದೆ. ಅಮ್ಮ ಗುರು ಮನು I am Sorry ದಯವಿಟ್ಟು ನನ್ನ ಕ್ಷಮಿಸಿ. ಎಲ್ಲಾ ಹುಡುಗಿಯಲ್ಲಿ ವಿನಂತಿ ದಯವಿಟ್ಟು ಯಾರು ಲವ್ ಮಾಡಬೇಡಿ. Good bye this World ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎಂಸಿಎ ಬಳಿಕ ಮಾಡೆಲ್ ಜೊತೆಗೆ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ವಿದ್ಯಾಶ್ರೀಗೆ ಫೇಸ್ಬುಕ್ನಲ್ಲಿ ಅಭಿಮಾನಿಯ ಥರ ಜಿಮ್ ಕೋಚ್ ಅಕ್ಷಯ್ ಪರಿಚಯವಾಗಿದ್ದ. ಬಳಿಕ ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿತ್ತು. ನಂತರ ಇಬ್ಬರು ಪರಸ್ಪರ ಪ್ರೀತಿಸಿದ್ದು, ಹಲವೆಡೆ ಜೊತೆ ಜೊತೆಯಾಗಿ ಸುತ್ತಾಡಿದ್ದರು. ಅಲ್ಲದೇ ಅಕ್ಷಯ್ ಮಾಡೆಲ್ ಬಳಿ ಸಾಕಷ್ಟು ಹಣ ಪೀಕಿದ್ದ. ಬಳಿಕ ಅದೇನಾಯ್ತೊ ಏನೋ ಮೂರು ತಿಂಗಳ ಹಿಂದೆ ಪ್ರೀತಿಯಲ್ಲಿ ಬಿರುಕು ಉಂಟಾಗಿದ್ದು, ಅಕ್ಷಯ್ ಫೋನ್ ಕಾಲ್ ಗೂ ಸಿಗದೆ ನಾಟ್ ರೀಚಬಲ್ ಆಗಿದ್ದ. ಇದರಿಂದ ಮಾನಸಿಕವಾಗಿ ನೊಂದು ಮಾಡೆಲ್ ವಿದ್ಯಾಶ್ರೀ ಜುಲೈ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಮೀಸ್ ಆಂಧ್ರ ಕಾಂಪಿಟೇಷನ್ ನಲ್ಲಿ ವಿಜೇತಳಾಗಿದ್ದ ಮೃತ ವಿದ್ಯಾಶ್ರೀ ಬಸವೇಶ್ವರ ನಗರದಲ್ಲಿ ಜೀಮ್ ಟ್ರೈನರ್ ಆಗಿದ್ದ ಆರೋಪಿ ಅಕ್ಷಯ್‌ಗೆ ಹಣ ಕೊಟ್ಟಿದ್ದರ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.
Discover more from Coastal Times Kannada
Subscribe to get the latest posts sent to your email.
Discussion about this post