ಮಂಗಳೂರು: ಮಂಗಳೂರಿನ ಬಿಸಿ ರೋಡ್ ನಲ್ಲಿ ಕಳೆದ ರಾತ್ರಿ ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ಪತ್ನಿಯ ಜೊತೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನೈತಿಕ ಪೊಲೀಸ್ ಗಿರಿ ಮಾಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಕುಡಿದ ಅಮಲಿನಲ್ಲಿದ್ದ ಆರೋಪಿ ಮನೀಶ್ ಮತ್ತು ಮಂಜುನಾಥ್ ‘ಮುಸ್ಲಿಂ; ಎಂದು ಭಾವಿಸಿ ಪೊಲೀಸ್ ಸಿಬ್ಬಂದಿ ಕುಮಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬಂಟ್ವಾಳ ನಗರ ಠಾಣೆಯ ಸಿಬಂದಿ ಆಗಿರುವ ಕುಮಾರ್ ತನ್ನ ಪತ್ನಿ ಮತ್ತು ನಾದಿನಿಯ ಜೊತೆ ನಿನ್ನೆ ರಾತ್ರಿ ಬಿಸಿ ರೋಡಿನಲ್ಲಿ ಊಟಕ್ಕೆಂದು ಹೊಟೇಲ್ ಬಂದಿದ್ದರು. ಊಟ ಮುಗಿಸಿ ಹೆದ್ದಾರಿ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಯುವಕರು ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ಹೆದ್ದಾರಿಯಿಂದ ಒಳಹೋದ ಕೂಡಲೇ ಬೈಕಿನಲ್ಲಿ ಅಡ್ಡಗಟ್ಟಿದ ಯುವಕರು, ಪೊಲೀಸ್ ಎಂದು ತಿಳಿಯದೆ ಅವರನ್ನು ವಿಚಿತ್ರವಾಗಿ ಪ್ರಶ್ನೆ ಮಾಡಿದ್ದಾರೆ. ಹಿಂದು ಯುವತಿಯರ ಜೊತೆಗೆ ಎಲ್ಲಿ ಹೋಗ್ತಿದ್ದೀಯಾ.. ಇಲ್ಲಿ ಹಾಗೆಲ್ಲ ನಡೆಯೋದಿಲ್ಲ ಗೊತ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಆರೋಪಿಗಳ ಮೇಲೆ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿದ್ದು ಸೆಕ್ಷನ್ 341(ತಪ್ಪು ಸಂಯಮ), 504(ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 354(ಡಿ)(ಹಿಂಬಾಲಿಸುವಿಕೆ), 354(ಎ)( ಭಾರತೀಯ ದಂಡ ಸಂಹಿತೆಯ ದೈಹಿಕ ಸಂಪರ್ಕ ಮತ್ತು ಇಷ್ಟವಿಲ್ಲದ ಮತ್ತು ಸ್ಪಷ್ಟವಾದ ಲೈಂಗಿಕ ಪ್ರಲೋಭನೆಗಳನ್ನು ಒಳಗೊಂಡ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇವರಿಬ್ಬರು ಯಾವುದೇ ಬಲಪಂಥೀಯ ಸಂಘಟನೆಗೆ ಸೇರಿದ್ದಾರೆಯೇ ಇಲ್ಲವೇ ಎಂಬುದರ ತನಿಖೆ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಹೇಳಿದ್ದಾರೆ.
Cop, family become victims of 'moral policing'!
DK police have arrested Manish & Manjunath for harrassing and attempting to assault a cop,his wife at B C Road. Cop was mistaken for a Muslim. Accused also misbehaved with cop's wife @XpressBengaluru @ramupatil_TNIE @vinndz_TNIE pic.twitter.com/bvt9Riev0a
— Divya Cutinho_TNIE (@cutinha_divya) July 28, 2023
Discover more from Coastal Times Kannada
Subscribe to get the latest posts sent to your email.
Discussion about this post