ಮಂಗಳೂರು: ಐಸ್‍ಕ್ರೀಮ್ ಎಂದ್ರೆ ಎಲ್ಲರಿಗೂ ಇಷ್ಟ. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ನೆಚ್ಚಿನದ್ದು. ಈಗ ವಿಶ್ವಮಟ್ಟದಲ್ಲಿ ಮಂಗಳೂರಿನ 2 ಐಸ್‍ಕ್ರೀಮ್ ಸಂಸ್ಥೆಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಐಸ್‍ಕ್ರೀಮ್ ಎಂದ್ರೆ ಎಲ್ಲರಿಗೂ ಇಷ್ಟ. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ನೆಚ್ಚಿನದ್ದು. ಈಗ ವಿಶ್ವಮಟ್ಟದಲ್ಲಿ ಮಂಗಳೂರಿನ 2 ಐಸ್‍ಕ್ರೀಮ್ ಸಂಸ್ಥೆಗಳು ಸ್ಥಾನ ಗಿಟ್ಟಿಸಿಕೊಂಡಿವೆ.
ಟೇಸ್ಟ್ ಅಟ್ಲಾಸ್ ಎನ್ನುವ ಸಂಸ್ಥೆ ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್‍ಕ್ರಿಮ್‍ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದೇಶದ 5 ಐಸ್ ಕ್ರೀಮ್ ಸಂಸ್ಥೆಗಳು ಸ್ಥಾನ ಪಡೆದುಕೊಂಡಿವೆ. ದೇಶದ 5 ಐಸ್‍ಕ್ರೀಮ್ ಸಂಸ್ಥೆಗಳಲ್ಲಿ ಮುಂಬೈ, ಬೆಂಗಳೂರು ಮತ್ತು ಮಂಗಳೂರು ಸಂಸ್ಥೆಗಳು ಸೇರಿವೆ. 2 ಮಂಗಳೂರಿನದ್ದು ಎನ್ನುವುದು ಕನ್ನಡಿಗರ ಹೆಮ್ಮೆಯಾಗಿದೆ. ನಮ್ಮ ಮಂಗಳೂರಿನ ಐಸ್‍ಕ್ರೀಮ್ ಜಗತ್ತಿನ ಗಮನ ಸೆಳೆದಿರುವುದು ಎಲ್ಲರಿಗೂ ಖುಷಿಯಾಗಿದೆ.
ಸ್ಥಾನ ಗಿಟ್ಟಿಸಿಕೊಂಡ ದೇಶದ 5 ಐಸ್‌ಕ್ರೀಮ್ ಸಂಸ್ಥೆಗಳು :
ಬೆಂಗಳೂರಿನ ಕಾರ್ನರ್ ಹೌಸ್‍ನಲ್ಲಿ ತಯಾರಿಸಲಾಗುವ ‘ಡೆತ್ ಬೈ ಚಾಕಲೇಟ್’ ಐಸ್‍ಕ್ರೀಮ್
ಮುಂಬೈನ ಕೆ. ರುಸ್ತೋಮ್ ಆ್ಯಂಡ್ ಕೋನಲ್ಲಿ ಸಿಗುವ “ಮ್ಯಾಂಗೋ” ಐಸ್‍ಕ್ರೀಮ್ ಸ್ಯಾಂಡ್‍ವಿಚ್ -ಮುಂಬೈನ ಅಪ್ಸರಾ ಐಸ್‍ಕ್ರೀಮ್ ಸಂಸ್ಥೆಯವರು ‘ಗ್ವಾವಾ” ಐಸ್‍ಕ್ರೀಮ್
ಮುಂಬೈ ನ್ಯಾಚುರಲ್ಸ್ ಸಂಸ್ಥೆಯ ‘ಟೆಂಡರ್ ಕೋಕನಟ್’ ಐಸ್‍ಕ್ರೀಮ್(ಮೂಲತಃ ಮಂಗಳೂರು ಮೂಲದವರಿಂದ ಹುಟ್ಟಿ ಬೆಳೆದ ಸಂಸ್ಥೆ) ಮಂಗಳೂರಿನ ಪಬ್ಬಾಸ್‍ನಲ್ಲಿ ಸಿಗುವ ‘ಗಡ್‍ಬಡ್’ ಐಸ್‍ಕ್ರೀಮ್. ಮಂಗಳೂರಿನ ಜನತೆ ಖುಷಿಯಾಗಿದ್ದಾರೆ.
ಕರ್ನಾಟಕದ ಮೂರು ಐಸ್‍ಕ್ರೀಮ್ ಸಂಸ್ಥೆಗಳು ಟೇಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಸ್ಥಾನ ಪಡೆಕೊಂಡಿದ್ದು ಜನ ಖುಷಿಯಾಗಿದ್ದಾರೆ. ನಮ್ಮ ರಾಜ್ಯ ವಿಶ್ವದಲ್ಲೇ ಫೇಮಸ್ ಎಂದು ಹೇಳ್ತಾ ಇದ್ದಾರೆ. ಇದು ಐಸ್‍ಕ್ರೀಮ್ ವಿಷ್ಯ ಆದ್ರೆ, ಮೊನ್ನೆಯಷ್ಟೇ ಮೈಸೂರ್ ಪಾಕ್ 4.4 ರೇಟಿಂಗ್ ಪಡೆಯುವ ಮೂಲಕ ಆನ್‍ಲೈನ್ ಮಾರ್ಕೆಟ್‍ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಅದು 14ನೇ ಸ್ಥಾನ ಪಡೆದಿತ್ತು.
Discussion about this post