ಇಸ್ಲಾಮಾಬಾದ್, ಜುಲೈ. 29: ಪಾಕಿಸ್ತಾನ- ಭಾರತದ ನಡುವೆ ಒಂದಲ್ಲ ಒಂದು ವಿಷಯದಲ್ಲಿ ಜಗಳ ನಡೆಯುತ್ತಿದ್ದರೂ ಕೂಡ, ಈ ಗಡಿಗಳ ಆಚೆಗೆ ಹುಟ್ಟುವ ಪ್ರೇಮ ಕತೆಗಳು ಮಾತ್ರ ಕಡಿಮೆಯಾಗಿಲ್ಲ. ಈಗ ಮತ್ತೊಂದು ಪ್ರೇಮಕಥೆ ವರದಿಯಾಗಿದೆ. ರಾಜಸ್ಥಾನದಲ್ಲಿ ಇರುವ ತನ್ನ ಪ್ರೇಮಿಯನ್ನು ಭೇಟಿಯಾಗಲು ಪಾಕ್ ಯುವತಿ ಗಡಿ ದಾಟಿದ ಕಥೆ ಇಲ್ಲಿದೆ.
25 ವರ್ಷದ ಪಾಕಿಸ್ತಾನಿ ಯುವತಿ ಕಳೆದ ವಾರ ರಾಜಸ್ಥಾನದ ತನ್ನ ಪ್ರೇಮಿಯನ್ನು ಭೇಟಿಯಾಗಲು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಬಂದಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸ್ನೇಹ ಬೆಳೆಸಿ ನಂತರ ಇವರ ಪ್ರೇಮ ಆರಂಭವಾಗಿತ್ತು. ಈಗ ವಿಡಿಯೋ ಕಾಲ್‌ನಲ್ಲಿಯೇ ಮದುವೆ ಕೂಡ ಆಗಿದ್ದಾರೆ!.
ಇಸ್ಲಾಮಾಬಾದ್‌ನಲ್ಲಿ ನೆಲೆಸಿರುವ ಮೆಹ್ವಿಶ್ ಎಂಬ ಯುವತಿ ಪಾಕಿಸ್ತಾನದಿಂದ ಬಂದವರು. 2018 ರಲ್ಲಿ ತನ್ನ ಮೊದಲ ಮದುವೆಯಾಗಿದ್ದ ಅವರು, ಗಂಡನಿಂದ ಬೇರೆಯಾಗಿದ್ದಾರೆ. ಇದಾದ ನಂತರ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಿಂದ ಬಂದ ಮತ್ತು ಕುವೈತ್‌ನಲ್ಲಿ ಟ್ರಾನ್ಸ್‌ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ರೆಹಮಾನ್ ಎಂಬುವವರೊಂದಿಗೆ ಸ್ನೇಹ ಬೆಳೆಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರು ಪರಿಚಯವಾಗಿದ್ದಾರೆ. ಹಲವಾರು ವರ್ಷಗಳ ಸ್ನೇಹದ ನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮಾರ್ಚ್ 13, 2022 ರಂದು ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮೂರು ದಿನಗಳ ನಂತರ ವೀಡಿಯೊ ಕಾನ್ಫರೆನ್ಸ್ ಮೂಲಕ ಮದುವೆಯಾಗಿದ್ದಾರೆ. ನಂತರ, 2023 ರಲ್ಲಿ ಮೆಹ್ವಿಶ್‌ನ ಉಮ್ರಾ ತೀರ್ಥಯಾತ್ರೆಯ ಮೆಕ್ಕಾದಲ್ಲಿ ಇಬ್ಬರೂ ಔಪಚಾರಿಕ, ವೈಯಕ್ತಿಕ ವಿವಾಹ ಸಮಾರಂಭವನ್ನು ಮಾಡಿದ್ದಾರೆ. ಮೆಹ್ವಿಶ್ ಈ ಹಿಂದೆ ಲಾಹೋರ್‌ನ ಬಾದಾಮಿ ಬಾಗ್‌ನ ಪಾಕಿಸ್ತಾನಿ ವ್ಯಕ್ತಿಯೊಂದಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೊದಲ ಮದುವೆಯಿಂದ 12 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಪತಿಯಿಂದ 2018 ರಲ್ಲಿ ಬೇರೆಯಾಗಿದ್ದಾರೆ.
ವಿಚ್ಛೇದನದ ನಂತರ ಆಕೆ ರೆಹಮಾನ್‌ನೊಂದಿಗೆ ಸ್ನೇಹ ಬೆಳೆಸಿದ್ದಾರೆ. ನಂತರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದಾಗ ಮೊದಲು ವೀಡಿಯೊ ಕಾನ್ಫರೆನ್ಸ್ ಮೂಲಕ ಮತ್ತು ನಂತರ ಎದುರು ಬದುರಾಗಿ ವಿವಾಹವಾಗಿದ್ದಾರೆ. ಮೆಹ್ವಿಶ್ ಜುಲೈ 25 ರಂದು ಇಸ್ಲಾಮಾಬಾದ್‌ನಿಂದ ಲಾಹೋರ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ ವಾಘಾ ಗಡಿಯ ಮೂಲಕ ಭಾರತಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಪಾಕಿಸ್ತಾನಿ ಮತ್ತು ಭಾರತೀಯ ಅಧಿಕಾರಿಗಳು ಮಾಡಿದ ಸಂಪೂರ್ಣ ದಾಖಲೆ ಪರಿಶೀಲನೆಯ ನಂತರ ಆಕೆ 45 ದಿನಗಳ ಪ್ರವಾಸಿ ವೀಸಾವನ್ನು ಪಡೆದಿದ್ದಾರೆ. ಮೆಹ್ವಿಶ್ ಅವರನ್ನು ರೆಹಮಾನ್ ಕುಟುಂಬದವರು ಬರಮಾಡಿಕೊಂಡಿದ್ದು, ಅವರೊಂದಿಗೆ ರಾಜಸ್ಥಾನದ ಚುರುವಿನ ಪಿತಿಸರ್ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post