ದೀಪಾ ಮಲಿಕ್ರೊಂದಿಗೆ ಭವೀನಾ ಬೇನ್ ಪಟೇಲ್
ಅಹಮದಾಬಾದ್: ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ಟೇಬಲ್ ಟೆನಿಸ್ ಆಟಗಾರ್ತಿ ಭಾವೀನಾ ಪಟೇಲ್ ಅವರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅಭಿನಂದಿಸಿದ್ದಾರೆ.
ಅಲ್ಲದೆ ರಾಜ್ಯ ಸರ್ಕಾರದಡಿ ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೊತ್ಸಾಹನ್ ಪುರಸ್ಕಾರ್ ಯೋಜನೆಯಡಿ ಭಾವೀನಾ ಪಟೇಲ್ ಗೆ 3 ಕೋಟಿ ರೂ. ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗುಜರಾತ್ ನ ವಡ್ ನಗರ್ ಭಾವಿನಾ ಸ್ವಂತ ಊರು. ಆಕೆ 12 ತಿಂಗಳು ಮಗುವಾಗಿದ್ದಾಗ ಪೋಲಿಯೊ ಪೀಡಿತರಾಗಿದ್ದರು. ಆದರೂ ಇದರಿಂದ ಸ್ಥೈರ್ಯ ಕಳೆದುಕೊಳ್ಳದ ಪದವಿ ವ್ಯಾಸಂಗ ಸಮಯದಲ್ಲಿ ಭಾವೀನಾ ಟೇಬಲ್ ಟೆನಿಸ್ ಆಡಲು ಪ್ರಾರಂಭಿಸಿದಳು.
ಇಲ್ಲಿಯವರೆಗೂ ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿರುವ ಭಾವೀನಾ ಐದು ಚಿನ್ನದ ಪದಕ ಹಾಗೂ 13 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅವರು ಆಡಿದ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಭವೀನಾ, ಅತ್ಯಂತ ಕಡಿಮೆ ಸಮಯದಲ್ಲಿ ನಡೆಯುವಂತಹ ಟೇಬಲ್ ಟೆನ್ನಿಸ್ ಆಟದಲ್ಲಿ ಪೂರ್ಣ ತಲ್ಲೀನತೆಯಿಂದ ಭಾಗವಹಿಸಬೇಕು. ಇದಕ್ಕೆ ಧ್ಯಾನ ಮಾಡುವ ಅಭ್ಯಾಸವನ್ನು ತಾವು ರೂಢಿಸಿಕೊಂಡಿರುವುದಾಗಿ ಹೇಳಿದ್ದಾರೆ. ತಮ್ಮ ಕೋಚ್ ನಿಕುಲ್ ಪಟೇಲ್ ಅವರು ಟೋಕಿಯೋಗೆ ಬಾರದಿದ್ದರೂ, ವಿಡಿಯೋ ಕಾಲ್ನ ಮೂಲಕ ತಮಗೆ ಪಂದ್ಯಾವಳಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರೆಂದು ಸ್ಮರಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post