ಮಂಗಳೂರು, ಆ.29: ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ಮರುತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೆ.11ರಿಂದ 13ರವರೆಗೆ ದ.ಕ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಲಾಗುವುದು ಎಂದು ‘ಸೌಜನ್ಯ ಪ್ರಕರಣ- ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ’ಯ ಪ್ರಧಾನ ಸಂಚಾಲಕ ಬಾಲಕೃಷ್ಣ ಡಿ.ಬಿ. ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಬೆಳ್ತಂಗಡಿ ತಾಲೂಕಿನ ಕು| ಸೌಜನ್ಯ ವರುಷಗಳು ಕಳೆದರೂ ನೈಜ ಆರೋಪಿಗಳು ಸಿಗದಿರುವುದರಿಂದ ಪ್ರಕರಣದ ಕೊಲೆ ಪ್ರಕರಣವು ನಡೆದು 12 ತನಿಖೆಯನ್ನು ಸರಕಾರವು ವಿಶೇಷ ಮುತುವರ್ಜಿ ವಹಿಸಿ ಸೂಕ್ತವಾದ ಮರು ತನಿಖೆ ನಡೆಸುವಂತೆ, ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ ಒತ್ತಾಯಿಸುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಮೂರು ದಿನಗಳ ದರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುತ್ತೇವೆ. ಈ ದರಣಿ ಸತ್ಯಾಗ್ರಹವು ದಿನಾಂಕ 11-09-2023 ರಂದು ಪ್ರಾರಂಭಗೊಂಡು ದಿನಾಂಕ 13-09- 2023 ವರೆಗೆ ನಡೆಯಲಿದೆ. ದಿನಾಂಕ 11-09-2023 ರಂದು ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕಿನವರು, ಹಾಗೆಯೇ 12-09-2023 ವಿಟ್ಲ ಮತ್ತು ಪುತ್ತೂರು ತಾಲೂಕಿನವರು ಮತ್ತು 13-09-2023 ರಂದು ಸುಳ್ಯ ಮತ್ತು ಕಡಬ ತಾಲೂಕಿನವರು ಈ ದರಣಿಯಲ್ಲಿ ಭಾಗವಹಿಸಲಿದ್ದಾರೆ. ಕು| ಸೌಜನ್ಯ ಮತ್ತು ಅವಳ ಕುಟುಂಬದವರಿಗೆ ನ್ಯಾಯ ಒದಗಿಸಿ ಕೊಡುವ ಈ ಹೋರಾಟದಲ್ಲಿ ತದನಂತರ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಮರು ತನಿಖೆ ನಡೆಸುವಂತೆ ಮನವಿ ನೀಡಲಿದ್ದೇವೆ ಎಂದು ಬಾಲಕೃಷ್ಣ ಡಿ.ಬಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ., ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಪುತ್ತೂರು ಘಟಕದ ಅಧ್ಯಕ್ಷ ಪ್ರವೀಣ್ ಮುಂಗ್ಲಿಮನೆ, ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಕೊಲ್ಚಾರ್, ಕಡಬ ಘಟಕದ ಅಧ್ಯಕ್ಷ ಸುರೇಶ್ ಬೈಲು, ಸಮಿತಿಯ ಸಹ ಸಂಚಾಲಕ ರಕ್ಷಿತ್ ಪುತ್ತಿಲ, ವಿಟ್ಲ ಘಟಕದ ಅಧ್ಯಕ್ಷ ಮೋನಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post