• About us
  • Contact us
  • Disclaimer
Friday, June 20, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು| ಸೆ.3ರಿಂದ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಗಣೇಶೋತ್ಸವ ಆಚರಣೆ

Coastal Times by Coastal Times
August 31, 2023
in ಕರಾವಳಿ
ಮಂಗಳೂರು| ಸೆ.3ರಿಂದ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಗಣೇಶೋತ್ಸವ ಆಚರಣೆ
35
VIEWS
WhatsappTelegramShare on FacebookShare on Twitter

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಹಾಗೂ ಸಿದ್ಧಿ ವಿನಾಯಕ ಪ್ರತಿಷ್ಠಾನದ ಮ್ಯಾಸೆಂಜಿಂಗ್ ಟ್ರಸ್ಟಿ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ಮಂಗಳೂರಿನಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಈ ವರ್ಷದ ಸಾರ್ವಜನಿಕ ಗಣೇಶೋತ್ಸವದ ಕಾರ್ಯಕ್ರಮವಗಳನ್ನು ವಿವರಿಸಿದರು.

ಈ ವರ್ಷದ ಸಾರ್ವಜನಿಕ ಗಣೇಶೋತ್ಸವವು ಬಂಟರ ಯಾನೆ ನಾಡವರ ಮಾತೃಸಂಘದ ಓಂಕಾರ ನಗರದಲ್ಲಿ ಮಾತೃಸಂಘ, ಸಿದ್ಧಿವಿನಾಯಕ ಪ್ರತಿಷ್ಠಾನ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಎಲ್ಲಾ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ನಡೆಯಲಿದೆ. ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಹಾಗೂ ಪೂರ್ವಭಾವಿಯಾಗಿ ಅನೇಕ ಮಹತ್ವ ಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳೂ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಜರಗಲಿವೆ.

ಸೆಪ್ಟೆಂಬರ್ 3ನೇ ತಾರೀಕಿನಂದು ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಇಡೀ ದಿನ ಬಂಟ ಕಲಾ ಸಂಭ್ರಮ” ಜರಗಲಿದ್ದು, ಮೂರು ಜಿಲ್ಲೆಗಳ ಸುಮಾರು ಹದಿನೆಂಟು ಪ್ರಮುಖ ತಂಡಗಳು ಭಾಗವಹಿಸಲಿದ್ದು ಒಂದೊಂದು ತಂಡದಲ್ಲಿ ಕನಿಷ್ಠ 25 ಕಲಾವಿದರು ಪಾಲ್ಗೊಳ್ಳಲ್ಲಿದ್ದಾರೆ. ಭಾರತ ದರ್ಶನ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಕವಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ಕಲೆ, ಜನಪದ, ಜನಜೀವನ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ಜರುಗಲಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಈ ಸ್ಪರ್ಧೆಗಾಗಿ ಮೂರು ಜಿಲ್ಲೆಗಳ ವಿವಿಧ ತಂಡಗಳು ಈಗಾಗಲೇ ತಾಲೀಮು ನಡೆಸುತ್ತಿವೆ.

ಸೆಪ್ಟೆಂಬರ್ 10ನೇ ತಾರೀಕಿನಂದು ಆದಿತ್ಯವಾರ ಬೆಳಿಗ್ಗೆ ಗಂಟೆ 8 ರಿಂದ ಇಡೀ ದಿನ ಬಂಟ ಕ್ರೀಡಾ ಸ್ಪರ್ಧೆ ಜರಗಲಿವೆ. ಈ ಕ್ರೀಡಾ ಸ್ಪರ್ಧೆಯಲ್ಲಿ 3 ಜಿಲ್ಲೆಗಳ ಬಂಟ ಕ್ರೀಡಾ ಪಟುಗಳು ಹಾಗೂ ತಂಡಗಳು ಭಾಗವಹಿಸಲಿದೆ. ವಾಲಿಬಾಲ್, ಬಾಲ್, ಹಗ್ಗಜಗ್ಗಾಟಗಳಲ್ಲದೇ ವಿವಿಧ ಕ್ರೀಡಾ ಸ್ಪರ್ಧೆಗಳು 3 ವರ್ಷದಿಂದ 90 ವರ್ಷದವರೆಗಿನ ವಯೋಮಾನದವರಿಗೆ ನಡೆಯಲಿದೆ.

ಸೆಪ್ಟೆಂಬರ್ ಹದಿನೆಂಟರಂದು ಸೋಮವಾರ ಮಧ್ಯಾಹ್ನ 3.30 ರಿಂದ ರಾಧಾಕೃಷ್ಣ ಮಂದಿರ(ಬಾಳಂ ಭಟ್ಟರ ಮನೆ)ದಿಂದ ಗಣೇಶನ ವಿಗ್ರಹವನ್ನು ವಿಶೇಷ ಮೆರವಣಿಗೆಯ ಮುಖಾಂತರ ಓಂಕಾರ ನಗರಕ್ಕೆ ತರಲಾಗುವುದು. ಈ ಕಾರ್ಯಕ್ರಮಕ್ಕೆ ಸಮಾಜಬಾಂಧವರೆಲ್ಲರೂ ಆಗಮಿಸಬೇಕೆಂದು ವಿನಂತಿಸಿದರು.

ಸೆಪ್ಟೆಂಬರ್ 19 ನೇ ತಾರೀಕು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದ್ದು ಬೆಳಿಗ್ಗೆ 9 ಗಂಟೆಗೆ ತೆನೆ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಧ್ವಜಾರೋಹಣಗೈದು, ಕಾರ್ಯಕ್ರಮ ಉದ್ಘಾಟಿಸಲಿದ್ದು ತೆನೆ ವಿತರಿಸಲಿದ್ದು, ಮಂಗಳೂರು ಮತ್ತು ಸುತ್ತಮುತ್ತಲ ಎಲ್ಲ ಗ್ರಾಮಗಳ ಸಮಸ್ತರು ಆಗಮಿಸಿ ತೆನೆ ಪಡೆದುಕೊಂಡು ಹೋಗಬೇಕೆಂದು ವಿನಂತಿಸಿದರು. ಸೆಪ್ಟೆಂಬರ್ 19 ನೇ ತಾರೀಕು ಮಂಗಳವಾರ ಸಂಜೆ 5.00 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದು ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಹಿರಿಯರನ್ನು ಸನ್ಮಾನಿಸಲಾಗುವುದು. ಸೆಪ್ಟೆಂಬರ್ 20ನೇ ತಾರೀಕು ಬೆಳಿಗ್ಗೆ ಗಂಟೆ 9.30 ರಿಂದ ಧಾರ್ಮಿಕ ಗೋಷ್ಠಿ ಹಾಗೂ ಧಾರ್ಮಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಗೋಷ್ಠಿಯಲ್ಲಿ ಮೂರು ಜಿಲ್ಲೆಗಳಲ್ಲಿ ಧಾರ್ಮಿಕ ವಿಧಿವಿಧಾನಗಳು, ದೇವಸ್ಥಾನಗಳ ಆಚರಣೆಗಳು ಹಾಗೂ ದೇವಸ್ಥಾನ ಆಡಳಿತ ಶೈಲಿಯ ಬಗ್ಗೆ ಧಾರ್ಮಿಕ ಪಂಡಿತರು ವಿಚಾರ ಮಂಡಿಸಲಿದ್ದು, ಧಾರ್ಮಿಕ ಹಾಗೂ ಜನಪದ ಕ್ಷೇತ್ರದ ಹಿರಿಯರು ಸಮನ್ವಯಕಾರರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧ ಪ್ರಮುಖ ದೇವಸ್ಥಾನಗಳ ಬಂಟ ಆಡಳಿತ ಮೊಸರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ವಿವಿಧ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯ ಬಂಟ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು, ಸುಮಾರು 200 ಕ್ಕೂ ಮಿಕ್ಕಿ ಬಂಟ ಆಡಳಿತ ಮೊತ್ತೇಸರರು ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಸನ್ಮಾನವನ್ನು ಹಮ್ಮಿಕೊಳ್ಳಲಾಗುವುದು.

ಅದೇ ದಿನ ಸಂಜೆ ಗಂಟೆ 5,00 ರಿಂದ ಧಾರ್ಮಿಕ ಸಭೆ ನಡೆಯಲಿದ್ದು ವಿವಿಧ ಕ್ಷೇತ್ರಗಳ ಗಣ್ಯರು, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಬಂಟ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 21ನೇ ತಾರೀಕಿನಂದು ಬೆಳಿಗ್ಗೆಯಿಂದ ಸಹಸ್ರನಾರಿಕೇಳ ಗಣಯಾಗ ನಡೆಯಲಿದ್ದು ಮುಂಚಿತವಾಗಿ ಗಣಯಾಗಕ್ಕೆ ಹೆಸರು ನೋಂದಾಯಿಸಿದವರಿಗೆ ಈ ಗಣ ಯಾಗದಲ್ಲಿ ಭಾಗವಹಿಸುವ ಅವಕಾಶವಿದೆ.

ದಿನಾಂಕ 20 ರಂದು ಸಂಜೆ ಸಾಮೂಹಿಕ ರಂಗಪೂಜೆ ಜರಗಲಿದ್ದು, ರಂಗಪೂಜೆಯಲ್ಲಿ ಮುಂಚಿತವಾಗಿ ಹೆಸರು ನೋಂದಾಯಿಸಿದವರೆಲ್ಲರಿಗೂ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 21 ನೇ ತಾರೀಕಿನಂದು ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರಗಲಿದ್ದು, ಸಾರ್ವಜನಿಕರು ಜಾತಿಭೇದವಿಲ್ಲದೆ ಪ್ರತಿಯೊಬ್ಬರು ಪ್ರಸಾದ ಸ್ವೀಕರಿಸಬೇಕೆಂದು ವಿನಂತಿಸಿದರು.

ಸೆಪ್ಟೆಂಬರ್ 21 ನೇ ತಾರೀಕು ಗುರುವಾರದಂದು ಮಧ್ಯಾಹ್ನ ಅನ್ನಸಂತರ್ಪಣೆಯ ನಂತರ, 4 ಗಂಟೆಗೆ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ಸಮಾಜದ ಹಿರಿಯರು ಚಾಲನೆ ನೀಡಲಿದ್ದು, ವೈಭವದ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಮೆರವಣಿಗೆ ವಠಾರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು ಮೆರವಣಿಗೆಯಲ್ಲಿ ಕರಾವಳಿಯ ಪ್ರಮುಖ ಭಜನಾ ತಂಡಗಳು ಭಾಗವಹಿಸಲಿವೆ. ಈ ವೈಭವದ ಆಕರ್ಷಕ ಮೆರವಣಿಗೆಯಲ್ಲಿ ಸಮಾಜ ಬಾಂಧವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.

ಸಾರ್ವಜನಿಕ ಗಣೇಶೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಿ ಗಣೇಶನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪದಾಧಿಕಾರಿಗಳಾದ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರು, ಶ್ರೀ ಹೇಮನಾಥ ಶೆಟ್ಟಿ ಕಾವು ಉಪಾಧ್ಯಕ್ಷರು, ಶ್ರೀ ಕೆ.ಎಂ. ಶೆಟ್ಟಿ ಪ್ರಧಾನ ಕಾರ್ಯದರ್ಶಿ, ಸಿಎ, ರಾಮ್‌ ಮೋಹನ್ ರೈ ಕೋಶಾಧಿಕಾರಿ, ಶ್ರೀ ಸಂಜೀವ ಶೆಟ್ಟಿ ಸಂಪಿಗೇಡಿ ಜೊತೆ ಕಾರ್ಯದರ್ಶಿ, ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಶ್ರೀ ರವಿರಾಜ್ ಶೆಟ್ಟಿ, ಶ್ರೀ ಕೃಷ್ಣ ಪ್ರಸಾದ್ ರೈ, ಬೆಳ್ಳಿಪ್ಪಾಡಿ, ಡಾ.ಆಶಾಜ್ಯೋತಿ ರೈ, ಗಣೇಶೋತ್ಸವ ಸಮಿತಿಯ ಸಂಚಾಲಕರಾದ ಶ್ರೀ ಬಿ. ನಾಗರಾಜ ಶೆಟ್ಟಿ, ಶ್ರೀ ಉದಯ ಕುಮಾರ್ ಶೆಟ್ಟಿ, ಶ್ರೀ ಸಂಜೀವ ಶೆಟ್ಟಿ, ಶ್ರೀ ಮಿಥುನ್ ರೈ, ಶ್ರೀ ಸುಧಾಕರ ಪೂಂಜ, ಶ್ರೀ ಪ್ರೇಮಾನಂದ ಶೆಟ್ಟಿ, ಸಿಎ. ಸುದೇಶ್ ರೈ, ಶ್ರೀಮತಿ ಭಾರತಿ ಜಿ. ಶೆಟ್ಟಿ ಮತ್ತು ಶ್ರೀಮತಿ ಅರುಣಾ ಶೆಟ್ಟಿ ಹಾಗೂ ವಿವಿಧ ಉಪ ಸಮಿತಿಯ ಸಂಚಾಲಕರು ಭಾಗವಹಿಸಿದ್ದರು.

Share this:

  • Facebook
  • X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಸೌಜನ್ಯ ಕೊಲೆ ಪ್ರಕರಣ: ಸೆ.11ರಿಂದ13ರವರೆಗೆ ದ.ಕ. ಡಿಸಿ ಕಚೇರಿ ಮುಂದೆ ಒಕ್ಕಲಿಗರ ದರಣಿ ಸತ್ಯಾಗ್ರಹ

Next Post

ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ಪ್ರಯಾಣ ವಿರುದ್ಧ ಮಂಗಳೂರಿನಲ್ಲಿ ಪೊಲೀಸರ ಅಭಿಯಾನ; 123 ಕೇಸ್ !

Related Posts

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 56 ಸಿಬ್ಬಂದಿಯ ವರ್ಗಾವಣೆ
ಕರಾವಳಿ

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 56 ಸಿಬ್ಬಂದಿಯ ವರ್ಗಾವಣೆ

June 19, 2025
45
16 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿ, ಸೀಮಂತ ನಿಗದಿಯಾಗಿದ್ದ ಮನೆಯಲ್ಲಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ
ಕರಾವಳಿ

16 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿ, ಸೀಮಂತ ನಿಗದಿಯಾಗಿದ್ದ ಮನೆಯಲ್ಲಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ

June 19, 2025
139
Next Post
ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ಪ್ರಯಾಣ ವಿರುದ್ಧ ಮಂಗಳೂರಿನಲ್ಲಿ ಪೊಲೀಸರ ಅಭಿಯಾನ; 123 ಕೇಸ್ !

ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ಪ್ರಯಾಣ ವಿರುದ್ಧ ಮಂಗಳೂರಿನಲ್ಲಿ ಪೊಲೀಸರ ಅಭಿಯಾನ; 123 ಕೇಸ್ !

Discussion about this post

Recent News

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 56 ಸಿಬ್ಬಂದಿಯ ವರ್ಗಾವಣೆ

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 56 ಸಿಬ್ಬಂದಿಯ ವರ್ಗಾವಣೆ

June 19, 2025
45
16 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿ, ಸೀಮಂತ ನಿಗದಿಯಾಗಿದ್ದ ಮನೆಯಲ್ಲಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ

16 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿ, ಸೀಮಂತ ನಿಗದಿಯಾಗಿದ್ದ ಮನೆಯಲ್ಲಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ

June 19, 2025
139
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 56 ಸಿಬ್ಬಂದಿಯ ವರ್ಗಾವಣೆ

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 56 ಸಿಬ್ಬಂದಿಯ ವರ್ಗಾವಣೆ

June 19, 2025
16 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿ, ಸೀಮಂತ ನಿಗದಿಯಾಗಿದ್ದ ಮನೆಯಲ್ಲಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ

16 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿ, ಸೀಮಂತ ನಿಗದಿಯಾಗಿದ್ದ ಮನೆಯಲ್ಲಿ ಪತ್ನಿಯ ಕೊಂದು ಪತಿ ಆತ್ಮಹತ್ಯೆ

June 19, 2025
ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು 43 ಸಾವಿರ ಲಂಚ ; ಸರ್ವೆಯರ್ ನಂದೀಶ್, ಬ್ರೋಕರ್ ದಿವಾಕರ್ ಬಂಧನ

ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು 43 ಸಾವಿರ ಲಂಚ ; ಸರ್ವೆಯರ್ ನಂದೀಶ್, ಬ್ರೋಕರ್ ದಿವಾಕರ್ ಬಂಧನ

June 19, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d