ಮಂಗಳೂರು; ದಿನಾಂಕ 22-10-2026 ರಂದು ರಾತ್ರಿ ಸುಮಾರು 7:50 ಗಂಟೆಗೆ ಜಪ್ಪಿನಮೊಗರು ಎ.ಕೆ. ಲಾಡ್ಜ್ ಎದುರು, ಮಹಾಕಾಳಿ ಪಡ್ಪು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-66ರ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಯುವಕನಿಗೆ KA-19-AA-8499 ನೋಂದಣಿ ಸಂಖ್ಯೆಯ ಬಸ್ ಡಿಕ್ಕಿ ಹೊಡೆದು, ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿತ್ತು.
ಅಪಘಾತದ ಪರಿಣಾಮ ಪಾದಚಾರಿ ರಸ್ತೆಯ ಬದಿಯಲ್ಲಿ ಬಿದ್ದು, ತಲೆಗೆ ತೀವ್ರ ರಕ್ತಗಾಯವಾಗಿತ್ತು. ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಗಾಯಾಳುವನ್ನು ಉಪಚರಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ಸಂಬಂಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ. 285/2026, ಕಲಂ 281, 106(1) BNS ಹಾಗೂ ಕಲಂ 134(a) ಮತ್ತು (b) IMV ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಪ್ರಕರಣದ ತನಿಖೆಯಲ್ಲಿ ಸಿಸಿಟಿವಿಯನ್ನು ಪರಿಶೀಲಿಸಿದಾಗ ಅಪಘಾತಕ್ಕೆ 42 ನೇ ರೂಟ್ನಲ್ಲಿ ಸಂಚರಿಸುವ ‘SRI KATEEL’ ಹೆಸರಿನ KA-19-AA-8499 ನೋಂದಣಿ ಸಂಖ್ಯೆಯ ಬಸ್ ಕಾರಣವಾಗಿರುವುದನ್ನು ಪತ್ತೆಹಚ್ಚಿ ಬಸ್ಸನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಪಘಾತ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಿಳಿಸಿರುವಂತೆ ಬಸ್ಸಿನ್ನು ಚಾಲಕ ಸುಧೀರ್ ಕೆ. (40), (ತಂದೆ ಸುಂದರ, ವಾಸ: ಕಾಸರಗೋಡು) ಎಂಬಾತನನ್ನು ಚಲಾಯಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುತ್ತದೆ. ಆತನ ಚಾಲನಾ ಅನುಜ್ಞಾಪತ್ರವು ಚಾಲ್ತಿಯಲ್ಲಿರುವುದು ಸಹ ಕಂಡು ಬಂದಿರುತ್ತದೆ. ಮುಂದಿನ ತನಿಖೆಯಲ್ಲಿ ಬಸ್ಸು ಚಾಲಕನ ಮತ್ತು ಪ್ರಯಾಣಿಸುತ್ತಿದ್ದ ಬಸ್ಸು ಪ್ರಯಾಣಿಸುತ್ತಿದ್ದ ಪ್ರಯಾಣಿಕರ (ಸಾಕ್ಷಿ) ಮೊಬೈಲ್ ಲೋಕೇಶನ್ ವಿವರ ಹಾಗೂ ಇತರೆ ಸಾಕ್ಷ್ಯಾಧಾರಗಳನೊಳಗೊಂಡು ಎಲ್ಲಾ ಅಯಾಮದಿಂದ ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post