• About us
  • Contact us
  • Disclaimer
Sunday, September 20, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆಗೆ ಒತ್ತಾಯಿಸಿ ಡಿವೈಎಫ್ಐ ರಸ್ತೆ ತಡೆ, 30ಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ

Coastal Times by Coastal Times
November 29, 2024
in ಕರಾವಳಿ
ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆಗೆ ಒತ್ತಾಯಿಸಿ ಡಿವೈಎಫ್ಐ ರಸ್ತೆ ತಡೆ, 30ಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ
53
VIEWS
WhatsappTelegramShare on FacebookShare on Twitter

ಮಂಗಳೂರು: ಜನಪರ ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌ ರನ್ನು ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.

ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಕೈ ಬಿಡಬೇಕು ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು. ಅಲ್ಲದೆ ಪೊಲೀಸ್ ಆಯುಕ್ತರು ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನೆಕಾರರು, ಪೊಲೀಸರು ಸಂಘಿಗಳಂತೆ ವರ್ತಿಸಬಾರದು, ಕೇಸುಗಳ ಮೇಲೆ ಕೇಸು ಹಾಕಿದರೂ ನಾವು ಹೆದರುವುದಿಲ್ಲ, ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕಿದರು.

ಆದರೆ ಅಲ್ಲಿ ಸೇರಿದ್ದ ಕಾರ್ಯಕರ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾವಣೆಗೊಂಡಿದ್ದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್ ನೇತೃತ್ವದಲ್ಲಿ ಮಹಿಳೆಯರನ್ನು ಒಳಗೊಂಡಿದ್ದ 40ಕ್ಕೂ ಮಿಕ್ಕಿ ಕಾರ್ಯಕರ್ತರು ಸೇರಿದ್ದರು. ಪೊಲೀಸರು ಬಲವಂತವಾಗಿ ರಸ್ತೆಯಿಂದ ಎಬ್ಬಿಸಿ ಬಸ್ಸಿಗೆ ತುಂಬಿಸಿದ್ದಾರೆ. ಈ ವೇಳೆ, ಪೊಲೀಸ್ ಕಮಿಷನರ್ ಮತ್ತು ಸ್ಪೀಕರ್ ಯುಟಿ ಖಾದರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.  ಆನಂತರ, ಅವರನ್ನೆಲ್ಲ ವಶಕ್ಕೆ ಪಡೆದು ಪಾಂಡೇಶ್ವರ ಠಾಣೆಗೆ ಒಯ್ದಿದ್ದಾರೆ. ಕಾರ್ಯಕರ್ತರ ನಡುವೆ ತಳ್ಳಾಟ ಸಂದರ್ಭದಲ್ಲಿ ಕದ್ರಿ ಠಾಣೆ ಎಎಸ್ಐ ಮುತ್ತಪ್ಪ‌ ಅಸ್ವಸ್ಥರಾಗಿದ್ದು ನೆಲಕ್ಕೆ ಬಿದ್ದಿದ್ದು ಅವರನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ಒಯ್ದ ಪ್ರಸಂಗವೂ ನಡೆಯಿತು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಪೊಲೀಸ್ ಕಮಿಷನರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದ.ಕ.ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗು ವುದು ಎಂದು ಎಚ್ಚರಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬೆಳ್ತಂಗಡಿ : ಪ್ರೇಮ ವೈಫಲ್ಯ, ವಿಷ ಕುಡಿದು ಸಾವಿಗೆ ಶರಣಾದ ಕಾಲೇಜು ವಿದ್ಯಾರ್ಥಿನಿ

Next Post

ಪ್ರಿಯಕರನಿಂದ ಪ್ರಿಯತಮೆಯ ಬರ್ಬರ ಹತ್ಯೆ, ಕಣ್ಣೂರು ಕೇರಳ ಮೂಲದ ಪ್ರಿಯಕರನ ಬಂಧನ

Related Posts

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ
ಕರಾವಳಿ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
60
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ
ಕರಾವಳಿ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
56
Next Post
ಪ್ರಿಯಕರನಿಂದ ಪ್ರಿಯತಮೆಯ ಬರ್ಬರ ಹತ್ಯೆ, ಕಣ್ಣೂರು ಕೇರಳ ಮೂಲದ ಪ್ರಿಯಕರನ ಬಂಧನ

ಪ್ರಿಯಕರನಿಂದ ಪ್ರಿಯತಮೆಯ ಬರ್ಬರ ಹತ್ಯೆ, ಕಣ್ಣೂರು ಕೇರಳ ಮೂಲದ ಪ್ರಿಯಕರನ ಬಂಧನ

Discussion about this post

Recent News

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
60
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
56
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
ಮಂಗಳೂರು: ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ – ಸಿಎಂ ಘೋಷಣೆ, ಮಂಗಳೂರಿನಲ್ಲಿ ಸಂಭ್ರಮಾಚರಣೆ

ಮಂಗಳೂರು: ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ – ಸಿಎಂ ಘೋಷಣೆ, ಮಂಗಳೂರಿನಲ್ಲಿ ಸಂಭ್ರಮಾಚರಣೆ

September 18, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d