• About us
  • Contact us
  • Disclaimer
Thursday, November 20, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸುಟ್ಟಗಾಯದಿಂದ ಪದ್ಮಶ್ರೀವರೆಗೆ: ‘ಬೆಂಕಿಯಲ್ಲಿ ಅರಳಿದ ಹೂವು’ ಡಾ.ಪ್ರೇಮಾ ಧನರಾಜ್ ಅವರ ಬದುಕೇ ಒಂದು ರೋಚಕ ಕಥೆ

Coastal Times by Coastal Times
January 30, 2024
in ರಾಷ್ಟ್ರೀಯ ಸುದ್ದಿ
ಸುಟ್ಟಗಾಯದಿಂದ ಪದ್ಮಶ್ರೀವರೆಗೆ: ‘ಬೆಂಕಿಯಲ್ಲಿ ಅರಳಿದ ಹೂವು’ ಡಾ.ಪ್ರೇಮಾ ಧನರಾಜ್ ಅವರ ಬದುಕೇ ಒಂದು ರೋಚಕ ಕಥೆ
25
VIEWS
WhatsappTelegramShare on FacebookShare on Twitter
ಬೆಂಗಳೂರು: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಡಾ.ಪ್ರೇಮಾ ಧನರಾಜ್ ಅವರ ಬದುಕೇ ಒಂದು ರೋಚಕ ಕಥೆ. ಸುಟ್ಟ ದೇಹದಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುವವರೆಗಿನ ಪ್ರೇಮಾ ಅವರ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ. 72 ವರ್ಷ ವಯಸ್ಸಿನ ಪ್ರೇಮಾ ಅವರ ಸಾಹಸಗಾಥೆ ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಕಿ ಅವಘಡದಿಂದ ಸುಮಾರು ಶೇ. 50ರಷ್ಟು ಸುಟ್ಟ ಗಾಯಗಳಾಗಿದ್ದ ಪ್ರೇಮಾ ಬಳಿಕ ಆತ್ಮಸ್ಥೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಸುಟ್ಟ ಗಾಯಗಳಿಗೆ ತುತ್ತಾದ 25,000ಕ್ಕೂ ಅಧಿಕ ಮಂದಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಕುರಿತು ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಅದು 1965ರ ಇಸವಿ. ಆಗ ಪ್ರೇಮಾ ಅವರಿಗೆ ಎಂಟು ವರ್ಷದ ಬಾಲಕಿ. ಅವರ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿತ್ತು. ಅಂದು ಪ್ರೇಮಾ ಅವರ ಕುಟುಂಬಕ್ಕೆ ಆಘಾತವೊಂದು ಅಗ್ನಿ ಅವಘಡದ ರೂಪದಲ್ಲಿ ಎದುರಾಗಿತ್ತು.

ಬಾಲ್ಯದಲ್ಲಿ ನಡೆದ ಅವಘಡ : ಅದು 1965ರ ಇಸವಿ. ಆಗ ಪ್ರೇಮಾ ಅವರಿಗೆ ಎಂಟು ವರ್ಷ. ಅವರ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿತ್ತು. ಅಂದು ಪ್ರೇಮಾ ಅವರ ಕುಟುಂಬಕ್ಕೆ ಆಘಾತವೊಂದು ಅಗ್ನಿ ಅವಘಡದ ರೂಪದಲ್ಲಿ ಎದುರಾಗಿತ್ತು. ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ಆಕಸ್ಮಿಕ ಪುಟ್ಟ ಪ್ರೇಮಾ ಅವರ ದೇಹದ ಮೇಲೆ ವ್ಯಾಪಿಸಿತ್ತು. ಶೇ. 50ರಷ್ಟು ಸುಟ್ಟ ಗಾಯಗಳೊಂದಿಗೆ ಪ್ರೇಮಾ ನೋವಿನಿಂದ ಒಡ್ಡಾಡುತ್ತಿದ್ದರು. ಸ್ಟವ್‌ ಸಿಡಿದು ಅವರ ಮುಖ, ಕುತ್ತಿಗೆ ಹಾಗೂ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಅಂದಾಜು ಒಂದು ತಿಂಗಳ ಚಿಕಿತ್ಸೆಯ ಬಳಿಕ ಪ್ರೇಮಾ ಅವರನ್ನು ಅವರ ತಂದೆ ಸಿಎಸ್‌ ಧನರಾಜ್‌ ಹಾಗೂ ತಾಯಿ ರೋಸಿ ಧನರಾಜ್‌ ತಮಿಳುನಾಡಿನ ವೆಲ್ಲೂರ್‌ನಲ್ಲಿರುವ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿಗೆ ದಾಖಲಿಸಿದ್ದರು. ಪವಾಡ ಸದೃಶ ಎಂಬಂತೆ ಪ್ರೇಮಾ ಅವರು ಚೇತರಿಸಿಕೊಳ್ಳತೊಡಗಿದರು. ಆತ್ಮ ವಿಶ್ವಾಸದಿಂದ, ಮನೋಧೈರ್ಯದಿಂದ ಪರಿಸ್ಥಿತಿಯನ್ನು ಮೆಟ್ಟಿನಿಂತು ಬದುಕಿನತ್ತ ಹೊರಳಿದರು.

ಮನೆಯಲ್ಲಿ ನಾನು ಹಿರಿಯ ಮಗಳಾಗಿದ್ದು, ನನಗೆ ಅಡುಗೆ ಮಾಡಲು ತಿಳಿದಿತ್ತು. ಪಂಪ್ ಸ್ಟೌವ್ ಆಗಿದ್ದರಿಂದ ಬೆಂಕಿ ಹತ್ತಿಸಲು ಕಷ್ಟವಾಗುತ್ತಿತ್ತು. ಸೀಮೆಎಣ್ಣೆ ಖಾಲಿಯಾಗಿರಬಹುದು ಎಂದು ಎಣ್ಣೆಯನ್ನು ಹಾಕಿದ್ದೆ. ಆದರೆ, ಈ ವೇಳೆ ಸ್ಟೌವ್ ಸ್ಫೋಟಗೊಂಡಿತ್ತು. ಕ್ಷಣಾರ್ಧರದಲ್ಲಿ ಬೆಂಕಿ ದೇಹವನ್ನು ಹೊತ್ತಿಕೊಂಡಿತ್ತು. ನೆರೆಮನೆಯವರು ಬೆಂಕಿ ನಂದಿಸಿದರು. ಘಟನೆ ಬಳಿಕ ನನ್ನ ತುಟಿ ಎದೆಗೆ ತಾಗುತ್ತಿತ್ತು, ಕುತ್ತಿಗೆ ನಿಲ್ಲುತ್ತಿರಲಿಲ್ಲ. ಬೆಂಗಳೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದೆ. ನಂತರ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (CMC) ನಲ್ಲಿ ಚಿಕಿತ್ಸೆ ಪಡೆದುಕೊಂಡೆ. ಪ್ರತಿ ಶಸ್ತ್ರಚಿಕಿತ್ಸೆಯ ಮೊದಲ ಹಾಗೂ ನಂತರ ಮೂರು ದಿನಗಳು ಕಣ್ಣೀರಿನಲ್ಲಿ ಮುಳುಗುತ್ತಿದ್ದೆ. ಮೂರು ಶಸ್ತ್ರಚಿಕಿತ್ಸೆಗಳು ವಿಫಲವಾಗಿತ್ತು. ನಾಲ್ಕನೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ಇದು ನನ್ನ ಹಣೆಬರಹವನ್ನೇ ಬದಲಿಸಿತ್ತು. 12 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಇದಾಗಿತ್ತು. ನಂತರ ಚಿಕಿತ್ಸೆ ನೀಡಿದ ಆಸ್ಪತ್ರೆಯಲ್ಲಿಯೇ ನಾನು ವೈದ್ಯೆಯಾಗಬೇಕೆಂದು ನನ್ನ ತಾಯಿ ಬಯಸಿದ್ದರು.

ಪ್ಲಾಸ್ಟಿಕ್‌ ಸರ್ಜನ್‌ : ಬಳಿಕ ಪ್ರೇಮಾ ತಮ್ಮ ತಾಯಿಯ ಆಶಯದಂತೆ ಸಮಾಜ ಸೇವೆಗಾಗಿ ಜೀವನವನ್ನೇ ಮುಡಿಪಿಟ್ಟರು. ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಶಿಕ್ಷಣಕ್ಕೆ ಸೀಟು ಗಿಟ್ಟಿಸಿಕೊಂಡರು. ಮುಂದೆ ಅವರ ಆಸಕ್ತಿಯ ಸರ್ಜರಿ ವಿಭಾಗವನ್ನು ಅಧ್ಯಯನ ಮಾಡಿ ಪ್ಲಾಸ್ಟಿಕ್ ಸರ್ಜನ್ (Plastic Surgeon) ಆಗಿ ಹೊರ ಹೊಮ್ಮಿದರು. ಅಮೆರಿಕಾದಲ್ಲಿ, ಗ್ಲಾಸ್ಗೋದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕನಸಿನಂತೆ ದೇಶದ ಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಆಗಿ ಗುರುತಿಸಿಕೊಂಡರು.

ವೆಲ್ಲೋರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಸೇವೆ ಆರಂಭಿಸಿದ ಪ್ರೇಮಾ ಮುಂದೆ ಅದೇ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದರು. ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಕೂಡ ಸೇವೆ ಸಲ್ಲಿಸಿದರು. ಪ್ರೇಮಾ 1999ರಲ್ಲಿ ಅಗ್ನಿ ರಕ್ಷಾ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ ಸ್ಥಾಪಿಸಿ ಸುಟ್ಟ ಗಾಯಾಳುಗಳ ಚಿಕಿತ್ಸೆಗೆ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡುತ್ತಿದ್ದಾರೆ. ಇದುವರೆಗೆ ಅವರು ಸುಮಾರು 25,000ಕ್ಕೂ ಹೆಚ್ಚು ಸುಟ್ಟಗಾಯಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿ ಹುಟ್ಟಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರ ನಿಸ್ವಾರ್ಥ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಬೆಂಗಳೂರಿನ ಮಹಾಲಕ್ಷ್ಮಿ ಜ್ಯುವೆಲರ್ಸ್ ಶಾಪ್ ಗೆ ನಕಲಿ ಅಧಿಕಾರಿಗಳ ದಾಳಿ, 1 ಕೇಜಿ ಚಿನ್ನ ತೆಗೆದುಕೊಂಡು ಪರಾರಿಯಾಗುತ್ತಿದ್ದ ಕಳ್ಳರು ಪೊಲೀಸರ ಬಲಗೆ

Next Post

ಕಾಸರಗೋಡು: ಯುವಕನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ವಿದ್ಯಾರ್ಥಿನಿ ಮೃತ್ಯು, ಇಬ್ಬರು ಆರೋಪಿಯ ಬಂಧನ

Related Posts

ಉಗ್ರರಿಂದ ವಶಪಡಿಸಿಕೊಂಡ ಸ್ಫೋಟಕ ಶ್ರೀನಗರ ಪೊಲೀಸ್‌ ಠಾಣೆಯಲ್ಲಿ ಸ್ಫೋಟ, 7 ಸಾವು, 27 ಮಂದಿಗೆ ಗಾಯ
ರಾಷ್ಟ್ರೀಯ ಸುದ್ದಿ

ಉಗ್ರರಿಂದ ವಶಪಡಿಸಿಕೊಂಡ ಸ್ಫೋಟಕ ಶ್ರೀನಗರ ಪೊಲೀಸ್‌ ಠಾಣೆಯಲ್ಲಿ ಸ್ಫೋಟ, 7 ಸಾವು, 27 ಮಂದಿಗೆ ಗಾಯ

November 15, 2025
34
3800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಮಾಡಿದ ‘ಏನಮ್ಮಿ ಏನಮ್ಮಿ’ ಗಾಯಕಿ ಪಲಕ್ ಮುಚ್ಚಲ್
ರಾಷ್ಟ್ರೀಯ ಸುದ್ದಿ

3800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಮಾಡಿದ ‘ಏನಮ್ಮಿ ಏನಮ್ಮಿ’ ಗಾಯಕಿ ಪಲಕ್ ಮುಚ್ಚಲ್

November 12, 2025
46
Next Post
ಕಾಸರಗೋಡು: ಯುವಕನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ವಿದ್ಯಾರ್ಥಿನಿ ಮೃತ್ಯು, ಇಬ್ಬರು ಆರೋಪಿಯ ಬಂಧನ

ಕಾಸರಗೋಡು: ಯುವಕನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ವಿದ್ಯಾರ್ಥಿನಿ ಮೃತ್ಯು, ಇಬ್ಬರು ಆರೋಪಿಯ ಬಂಧನ

Discussion about this post

Recent News

ರಚನಾ ಕ್ರೈಸ್ತ ವಾಣಿಜ್ಯ ಮಂಡಳಿಗೆ ನೂತನ ಸಮಿತಿ ಆಯ್ಕೆ, ರಚನಾ – ಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿಯ ಅಧ್ಯಕ್ಷರಾಗಿ ರೊಯ್ ಕ್ಯಾಸ್ತೆಲಿನೊ

ರಚನಾ ಕ್ರೈಸ್ತ ವಾಣಿಜ್ಯ ಮಂಡಳಿಗೆ ನೂತನ ಸಮಿತಿ ಆಯ್ಕೆ, ರಚನಾ – ಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿಯ ಅಧ್ಯಕ್ಷರಾಗಿ ರೊಯ್ ಕ್ಯಾಸ್ತೆಲಿನೊ

November 19, 2025
52
ಧರ್ಮಸ್ಥಳ ಲಕ್ಷ ದೀಪೋತ್ಸವ ; ಧರ್ಮಸ್ಥಳ ಸರ್ವ ಧರ್ಮೀಯರಿಗೂ ಶ್ರದ್ಧಾ ಕೇಂದ್ರ: ಎಂ.ಬಿ.ಪಾಟೀಲ್

ಧರ್ಮಸ್ಥಳ ಲಕ್ಷ ದೀಪೋತ್ಸವ ; ಧರ್ಮಸ್ಥಳ ಸರ್ವ ಧರ್ಮೀಯರಿಗೂ ಶ್ರದ್ಧಾ ಕೇಂದ್ರ: ಎಂ.ಬಿ.ಪಾಟೀಲ್

November 19, 2025
19
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಚನಾ ಕ್ರೈಸ್ತ ವಾಣಿಜ್ಯ ಮಂಡಳಿಗೆ ನೂತನ ಸಮಿತಿ ಆಯ್ಕೆ, ರಚನಾ – ಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿಯ ಅಧ್ಯಕ್ಷರಾಗಿ ರೊಯ್ ಕ್ಯಾಸ್ತೆಲಿನೊ

ರಚನಾ ಕ್ರೈಸ್ತ ವಾಣಿಜ್ಯ ಮಂಡಳಿಗೆ ನೂತನ ಸಮಿತಿ ಆಯ್ಕೆ, ರಚನಾ – ಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿಯ ಅಧ್ಯಕ್ಷರಾಗಿ ರೊಯ್ ಕ್ಯಾಸ್ತೆಲಿನೊ

November 19, 2025
ಧರ್ಮಸ್ಥಳ ಲಕ್ಷ ದೀಪೋತ್ಸವ ; ಧರ್ಮಸ್ಥಳ ಸರ್ವ ಧರ್ಮೀಯರಿಗೂ ಶ್ರದ್ಧಾ ಕೇಂದ್ರ: ಎಂ.ಬಿ.ಪಾಟೀಲ್

ಧರ್ಮಸ್ಥಳ ಲಕ್ಷ ದೀಪೋತ್ಸವ ; ಧರ್ಮಸ್ಥಳ ಸರ್ವ ಧರ್ಮೀಯರಿಗೂ ಶ್ರದ್ಧಾ ಕೇಂದ್ರ: ಎಂ.ಬಿ.ಪಾಟೀಲ್

November 19, 2025
300ಕ್ಕೂ ಹೆಚ್ಚು ಬ್ಯಾಂಕ್ ಖಾತೆ, 250ಕ್ಕೂ ಹೆಚ್ಚು ಸಿಮ್ ಕಾರ್ಡ್​ ಬಳಸಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಮಂಗಳೂರಿನ ಸೆನ್​ ಪೊಲೀಸ್​ ಠಾಣೆಯ ಸಿಬ್ಬಂದಿ

300ಕ್ಕೂ ಹೆಚ್ಚು ಬ್ಯಾಂಕ್ ಖಾತೆ, 250ಕ್ಕೂ ಹೆಚ್ಚು ಸಿಮ್ ಕಾರ್ಡ್​ ಬಳಸಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಮಂಗಳೂರಿನ ಸೆನ್​ ಪೊಲೀಸ್​ ಠಾಣೆಯ ಸಿಬ್ಬಂದಿ

November 17, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d