• About us
  • Contact us
  • Disclaimer
Monday, February 9, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ: ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರು ಪಪಂ ಸದಸ್ಯರ ಪ್ರತಿಭಟನೆ

Coastal Times by Coastal Times
January 30, 2026
in ಕರಾವಳಿ
ಉಳ್ಳಾಲ: ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರು ಪಪಂ ಸದಸ್ಯರ ಪ್ರತಿಭಟನೆ
27
VIEWS
WhatsappTelegramShare on FacebookShare on Twitter

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಕರಣಿಕ ಗೈರು ಹಾಜರಿ ಹಾಗೂ ನಿವೇಶನ ನೀಡುವುದರಲ್ಲಿ ಬಡವರಿಗೆ ಆಗಿರುವ ಅನ್ಯಾಯ ವಿರೋಧಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ಗ್ರಾಮ ಕರಣಿಕರಿಗೆ ಧಿಕ್ಕಾರ ಕೂಗಿದ ಘಟನೆ ನಡೆದಿದೆ.

ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು,ಗ್ರಾಮಕರಣಿಕ ಸಭೆಗೆ ಬಂದು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.ವಸತಿ ಯೋಜನೆಗೆ ಸರ್ಕಾರಿ ಜಾಗ ಒದಗಿಸದೇ ಬಡವರಿಗೆ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್, ಗ್ರಾಮಕರಣಿಕರಿಗೆ ಧಿಕ್ಕಾರ ಕೂಗಿದರು. ಸರ್ಕಾರಿ ಜಾಗ ಗಡಿ ಗುರುತು ಮಾಡುತ್ತೇವೆ ಎಂದು ಸಭೆಯಲ್ಲಿ ಚರ್ಚೆ ಮಾತ್ರ ಆಗಿದೆ.ಈ ವರೆಗೆ ಕೆಲಸ ಆಗುತ್ತಿಲ್ಲ. ಇದರಿಂದ ಬಡವರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದ ಅವರು,ಬಡವರಿಗೆ ವಸತಿಗೆ ಜಾಗ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು 2011 ರಿಂದ ಈವರೆಗೆ ನೀಡದೇ ವಂಚನೆ ಮಾಡುತ್ತಾ ಬಂದಿದ್ದಾರೆ. ಈ ವಿಚಾರದಲ್ಲಿ ಯಾಕೆ ಕ್ರಮ ಆಗುತ್ತಿಲ್ಲ, ಯಾಕೆ ನಿವೇಶನ ನೀಡುತ್ತಿಲ್ಲ,2011 ರಿಂದ ಈವರೆಗೆ ಅರ್ಜಿ ಹಾಕಿದ ಬಡವರಿಗೆ ಯಾಕೆ ನ್ಯಾಯ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೇ ಈ ವಿಚಾರದಲ್ಲಿ ನಿರಂತರ ಹೋರಾಟ ಇದೆ ಎಂದು ಎಚ್ಚರಿಸಿದರು.

ಪಕ್ಷೇತರ ಸದಸ್ಯ ಹರೀಶ್ ರಾವ್ ಮಾತನಾಡಿ ಯಾರ್ಯಾರೋ ಬಂದವರು ಸರಕಾರಿ ಜಾಗವನ್ನ ಕಬಳಿಸಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಬಡವರಿಗೆ ನಿವೇಶನಗಳನ್ನ ಕೊಡುವ ಕೆಲಸ ಮಾಡುತ್ತಿಲ್ಲ. ಪಟ್ಟಣ ಪಂಚಾಯತ್ ಅಧ್ಯಕ್ಷರೇ ಮುಂದೆ ನಿಂತು ಬಡವರಿಗೆ ನಿವೇಶನ ಕೊಡಿಸುವ ಕಾರ್ಯ ನಡೆಸಬೇಕಿದೆ ಎಂದರು. ಇದಕ್ಕುತ್ತರಿಸಿದ ಅಧ್ಯಕ್ಷೆ ದಿವ್ಯ ಶೆಟ್ಟಿ, ಸರಕಾರಿ ನಿವೇಶನಗಳ ಸರ್ವೆ ನಂಬರ್ ಹಾಕಿ ಪಟ್ಟಣ ಪಂಚಾಯತ್ ಹೆಸರಿಗೆ ವರ್ಗಾವಣೆ ಮಾಡುವಂತೆ ತಹಸೀಲ್ದಾರ್ ಗೆ ಅರ್ಜಿ ಕೊಟ್ಟಿದ್ದೇವೆ. ಈ ಬಗ್ಗೆ ಯಾವುದೇ ಪ್ರಗತಿ‌ ಕಂಡುಬಂದಿಲ್ಲ. ಎಲ್ಲಾ ಪಟ್ಟಣ ಸದಸ್ಯರ ಸಭೆಯನ್ನು ಕರೆದು ಚರ್ಚಿಸುವ ಭರವಸೆ ನೀಡಿದ ಮೇರೆಗೆ ಪಂಚಾಯತ್ ಸದಸ್ಯರು ಪ್ರತಿಭಟನೆ ಹಿಂಪಡೆದರು.

ನಡುಕುಮೇರುವಿನ ಸರಕಾರಿ ಜಾಗವನ್ನ ಅತಿಕ್ರಮಿಸಿ ಕಟ್ಟಿರುವ ಮನೆಗಳನ್ನ ನೆಲಸಮಗೊಳಿಸಲು ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಸರಕಾರಿ ಜಾಗದ ಅಕ್ರಮ ಕಟ್ಟಡಗಳನ್ನ ನೆಲಸಮಗೊಳಿಸಿಲ್ಲ ಎಂದು ಸಭೆಯಲ್ಲಿ ಆಕ್ಷೇಪ ಕೇಳಿಬಂತು. ಸರಕಾರಿ ಜಾಗದ ಅತಿಕ್ರಮಣ ಬಗ್ಗೆ ಧ್ವನಿ ಎತ್ತಿದರೆ ಆ ವಿಚಾರವನ್ನ ಸೋರಿಕೆ ಮಾಡಲಾಗುತ್ತದೆ. ಪಂಚಾಯತ್ಗೆ ಮೀಸಲಿಟ್ಟ ಸರಕಾರಿ ನಿವೇಶನವನ್ನು ಉಳಿಸುವುದು ನಮ್ಮ ಜವಾಬ್ದಾರಿಯೇ ಹೊರತು ವೈಯಕ್ತಿಕ ಹಿತಾಸಕ್ತಿ ಇಲ್ಲವೆಂದು ಸುಜಿತ್ ಹೇಳಿದರು.

ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಮಾಲಿನಿ, ನಾವು ಪಂಚಾಯತ್ ನಿರ್ಣಯ ಅಥವಾ ಅರ್ಜಿಗಳ‌ ಬಗ್ಗೆ ಹೊರಗಿನವರಿಗೆ ಮಾಹಿತಿ ಸೋರಿಕೆ ಮಾಡುವುದಿಲ್ಲ. ಅಧಿಕಾರಿಗಳ ಹಾಜರಾತಿ ಕೊರತೆಯಿಂದ ನಡುಕುಮೇರಿನ ಅಕ್ರಮ ಕಟ್ಟಡಗಳ ತೆರವು ಕಾರ್ಯ ನಡೆದಿಲ್ಲವೆಂದು ಅಸಹಾಯಕತೆ ತೋಡಿಕೊಂಡರು.

ಪಂಚಾಯತ್ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕೊಂಡಾಣ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಮಾದಕ ವ್ಯಸನಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ

Next Post

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ

Related Posts

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು
ಕರಾವಳಿ

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

February 5, 2026
20
ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ
ಕರಾವಳಿ

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ

February 4, 2026
39
Next Post
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ

Discussion about this post

Recent News

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

February 8, 2026
38
ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

February 6, 2026
84
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

February 8, 2026
ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

February 6, 2026
ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

February 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d