ಮುಂಬೈ(ಜು.30): ಮಂಗಳವಾರ ಮುಂಜಾನೆ ಜಾರ್ಖಂಡ್‌ನ ಟಾಟಾನಗರ ಬಳಿ ದೊಡ್ಡ ರೈಲು ಅಪಘಾತ ಸಂಭವಿಸಿದೆ. ಇಲ್ಲಿ, ಹೌರಾದಿಂದ ಮುಂಬೈಗೆ ಹೋಗುತ್ತಿದ್ದ 12810 ಹೌರಾ-CSMT ಮೇಲ್‌ನ ಹಲವಾರು ಕೋಚ್‌ಗಳು ಟಾಟಾನಗರ ಬಳಿಯ ಚಕ್ರಧರಪುರದಲ್ಲಿ ಹಳಿತಪ್ಪಿದವು. ಈ ಅವಘಡದಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ, ಇದನ್ನು ರೈಲ್ವೇ ಅಧಿಕೃತವಾಗಿ ಖಚಿತಪಡಿಸಿಲ್ಲ. ಪರಿಹಾರ ಮತ್ತು ರಕ್ಷಣೆಗಾಗಿ ಪಾಟ್ನಾದಿಂದ NDRF ತಂಡವನ್ನು ಕಳುಹಿಸಲಾಗಿದೆ.
ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಈ ಹಿಂದೆ ರಾಜ್‌ಖರ್ಸ್ವಾನ್ ವೆಸ್ಟ್ ಔಟರ್ ಮತ್ತು ಬಾರಾಬಾಂಬು ನಡುವೆ ಗೂಡ್ಸ್ ರೈಲು ಹಳಿತಪ್ಪಿತ್ತು, ಅದರ ವ್ಯಾಗನ್‌ಗಳು ಇನ್ನೂ ಟ್ರ್ಯಾಕ್‌ನಲ್ಲಿದ್ದವು. ಹೌರಾ-ಮುಂಬೈ ಮೇಲ್ ಮತ್ತೊಂದು ಟ್ರ್ಯಾಕ್‌ನಿಂದ ಬರುತ್ತಿತ್ತು ಮತ್ತು ಆ ವ್ಯಾಗನ್‌ಗಳಿಗೆ ಡಿಕ್ಕಿ ಹೊಡೆದ ನಂತರ ಅದರ ಬೋಗಿಗಳೂ ಹಳಿತಪ್ಪಿದವು. ರೈಲ್ವೇ ಅಪಘಾತದಿಂದಾಗಿ ಹಲವು ರೈಲುಗಳು ರದ್ದಾಗಿವೆ, ಹಲವು ರೈಲುಗಳನ್ನು ಅಲ್ಪಾವಧಿಗೆ ನಿಲ್ಲಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಚಕ್ರಧರಪುರ ರೈಲ್ವೆ ವಿಭಾಗದ ಅಧಿಕಾರಿಗಳು, ಪರಿಹಾರ ರೈಲು ಮತ್ತು ಹಲವಾರು ಆಂಬ್ಯುಲೆನ್ಸ್‌ಗಳನ್ನು ಜಿಲ್ಲಾಡಳಿತದಿಂದ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಚಕ್ರಧರಪುರ ರೈಲ್ವೆ ವಿಭಾಗದ ಹಿರಿಯ ಡಿಸಿಎಂ ಆದಿತ್ಯ ಕುಮಾರ್ ಚೌಧರಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post