ಮಂಗಳೂರು: ಬಿಲ್ಲವ ಸಂಘದ ಮಂಗಳೂರು ತಾಲ್ಲೂಕು ಘಟಕ ಅಸ್ತಿತ್ವಕ್ಕೆ ಬಂದಿದ್ದು ಸೆಪ್ಟೆಂಬರ್ 4ರಂದು ಬೆಳಿಗ್ಗೆ 10 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಶ್ರೀ ಕೊರಗಪ್ಪ ಸ್ಮಾರಕ ಸಭಾಂಗಣದಲ್ಲಿ ಉದ್ಘಾಟನೆಯಾಗಲಿದೆ. ಕಾಂಗ್ರೆಸ್ ಮುಖಂಡರಾದ ಬಿ.ಜನಾರ್ದನ ಪೂಜಾರಿ ಮತ್ತು ವಸಂತ ಬಂಗೇರ ಉದ್ಘಾಟನೆ ಮಾಡಲಿದ್ದು ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಕುಮಾರ್, ಎಸ್‌ಎನ್‌ಡಿಪಿ ರಾಜ್ಯ ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ್, ರಾಜ್ಯ ಹಿಂದುಳಿದ ವರ್ಗಗಳ ಸಮತಿ ಸದಸ್ಯ ಕೆ.ಟಿ.ಸುವರ್ಣ, ಮುಖಂಡರಾದ ವಿನಯ ಕುಮಾರ್ ಸೊರಕೆ, ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಹರಿಕೃಷ್ಣ ಬಂಟ್ವಾಳ್, ರವಿಶಂಕರ್ ಮಿಜಾರ್, ಮೂಲ್ಕಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೊಮಯ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸಾಯಿರಾಮ್, ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿ ಸಮಿತಿ ಅಧ್ಯಕ್ಷ ಕೆ.ಚಿತ್ತರಂಜನ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಪಾಲ್ಗೊಳ್ಳುವರು ಎಂದು ಸಂಘದ ಅಧ್ಯಕ್ಷ ಜಿತೇಂದ್ರ ಜೆ.ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕೊ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ. ರಾಮಚಂದ್ರ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಶ್ರೀ ಗುರು ಚಾರಿಟಬಲ್ ಟ್ರಸ್ಟ್ ಧ್ಯಕ್ಷ ಜಯಾನಂದ, ವಕೀಲ ಟಿ.ನಾರಾಯಣ ಪೂಜಾರಿ, ವೆನ್‌ಲಾಕ್ ಆಸ್ಪತ್ರೆಯ ವೈದ್ಯ ಸದಾನಂದ ಸುವರ್ಣ, ನಾರಾಯಣ ಗುರು ಅಧ್ಯಯನ ಪೀಠದ ಅಧ್ಯಕ್ಷ ಗಣೇಶ್ ಅಮೀನ್ ಸಂಕಮಾರ್, ಜಿಲ್ಲಾ ಯುವ ಜಾತ್ಯತೀತ ಜನತಾದಳದ ಅಧ್ಯಕ್ಷ ಅಕ್ಷಿತ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು, ಬಿರ್ವೆರ್ ಕುಡ್ಲದ ಅಧ್ಯಕ್ಷ ಉದಯ ಪೂಜಾರಿ, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಎಂ.ಎಸ್ ಕೋಟ್ಯಾನ್, ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ, ಗುತ್ತಿಗೆದಾರರ ಮಹಾಬಲ ಪೂಜಾರಿ ಕಡಂಬೋಡಿ, ಬಿಲ್ಲವ ಶಕ್ತಿ ಅಧ್ಯಕ್ಷ ಸುರೇಶ್ ಚಂದರ್ ಕೋಟ್ಯಾನ್, ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಅವಿನಾಶ್ ಸುವರ್ಣ ಅವರೂ ಭಾಗವಹಿಸುವರು ಎಂದು ವಿವರಿಸಿದರು.
ತಾಲ್ಲೂಕು ಬಿಲ್ಲವ ಸಂಘದಲ್ಲಿ ಮಂಗಳೂರು ತಾಲ್ಲೂಕು ವ್ಯಾಪ್ತಿಯ ಐವತ್ತಕ್ಕೂ ಹೆಚ್ಚು ಸಂಘಟನೆಗಳು ಇರಲಿವೆ. ಶಿಕ್ಷಣ, ಸಂಘಟನೆ, ನಿರುದ್ಯೋಗ ನಿವಾರಣೆ ಕಾರ್ಯಕ್ರಮಗಳು, ಬಡವರಿಗೆ ಸಹಾಯ, ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ತಲುಪಿಸುವ ಕಾರ್ಯವನ್ನು ಮಾಡಲಾಗುವುದು. ಯುವಕರಲ್ಲಿ ಧಾರ್ಮಿಕ ಮತ್ತು ರಾಜಕೀಯ ಪ್ರಜ್ಞೆ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು. ಬಿಲ್ಲವ ಸಂಘಟನೆಗಳು ಸಾಕಷ್ಟು ಇದ್ದರೂ ಪರಸ್ಪರ ಸಂಪರ್ಕದ ಕೊರತೆ ಇದೆ. ತಾಲ್ಲೂಕಿನಲ್ಲಿ ಸಂಪರ್ಕ ಮತ್ತು ಸಂವಹನದ ದೃಷ್ಟಿಯಿಂದ ಸಂಘ ರಚಿಸಲಾಗಿದೆ. ನಾರಾಯಣ ಗುರುಗಳ ತತ್ವಗಳನ್ನು ಪಸರಿಸುವುದು ಸಂಘದ ಪ್ರಮುಖ ಉದ್ದೇಶ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿತೇಂದ್ರ ಜೆ.ಸುವರ್ಣ ಮಾತನಾಡಿದರು. ಪುರುಷೋತ್ತಮ ಪೂಜಾರಿ, ರಂಜನ್ ಮಿಜಾರ್, ಸುರೇಶ್ಚಂದ್ರ ಕೋಟ್ಯಾನ್, ಲೋಕನಾಥ ಪೂಜಾರಿ, ಪಾರ್ವತಿ ಅಮೀನ್, ಅವಿನಾಶ್ ಬಂಗೇರ, ಗಣೇಶ ಪೂಜಾರಿ ಮತ್ತಿತರರು ಇದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post