• About us
  • Contact us
  • Disclaimer
Saturday, September 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಂಗೀತವನ್ನೇ ಉಸಿರನ್ನಾಗಿರಿಸಿಕೂಂಡ ಮುಸ್ಲಿಂ ಕುಟುಂಬ!.

Coastal Times by Coastal Times
August 30, 2022
in ರಾಜಕೀಯ
ಸಂಗೀತವನ್ನೇ ಉಸಿರನ್ನಾಗಿರಿಸಿಕೂಂಡ ಮುಸ್ಲಿಂ ಕುಟುಂಬ!.
60
VIEWS
WhatsappTelegramShare on FacebookShare on Twitter

ಕೋಝಿಕೋಡ್: ಕೇರಳದ ಕೋಝಿಕೋಡ್ ವಿನ ಮುಸ್ಲಿಂ ಕುಟುಂಬವೊಂದು ಸಂಗೀತವನ್ನೇ ಉಸಿರನ್ನಾಗಿಸಿಕೊಂಡಿದೆ. ಸಂಗೀತ ಹಾಗೂ ಮೃದಂಗ ಕಲಾವಿದರಾಗಿರುವ ಸಲೀಂ ಅವರ ಮೂವರು ಹೆಣ್ಣು ಮಕ್ಕಳು ಕೂಡಾ ಇದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಹೆಣ್ಣುಮಕ್ಕಳಿಗೆ ಅದರಲ್ಲೂ ಕಲಾ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ನೀಡಬೇಕೆ? ಮುಕ್ಕಂ ಸಲೀಂಗೆ ಆಗಾಗ ಕೇಳಲಾಗುವ ಪ್ರಶ್ನೆಯಿದು, ಆದರೆ, ಅವರು ಈ ವಿಚಾರದಲ್ಲಿ ಅಚಲ ನಿರ್ಧಾರ ಹೊಂದಿದ್ದಾರೆ. ಸಲೀಂ, ಇದೀಗ ಲಯನಂ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಕಲಾ ಕೇಂದ್ರದ ನಿರ್ವಹಣೆ ಮಾಡುತ್ತಿದ್ದಾರೆ. ಇದನ್ನು ಅವರ ತಂದೆಯವರು ತಮ್ಮ ಊರಿನಲ್ಲಿ ಸ್ಥಾಪಿಸಿದ್ದರು. ಇದು 60 ವರ್ಷಗಳಿಂದ ಸಂಗೀತ, ನೃತ್ಯ ಮತ್ತು ವಾದ್ಯಗಳಲ್ಲಿ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಅವರ ಮೂವರು ಹೆಣ್ಣುಮಕ್ಕಳು ಈಗಾಗಲೇ ಕಲಾ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತಿರುವನಂತಪುರಂನ ಸ್ವಾತಿ ತಿರುನಾಳ್ ಕಾಲೇಜ್ ನಲ್ಲಿ ಒಂದು ವರ್ಷದ ಹಿಂದೆ ಗಾನ ಪ್ರವೀಣ (ಡಿಪ್ಲೋಮಾ ಕೋರ್ಸ್) ಪದವಿ ಪಡೆದಾಗ, ನನ್ನ ಸಮುದಾಯದಿಂದ ಮೃದಂಗದಲ್ಲಿ ತರಬೇತಿ ಪಡೆದ ಏಕೈಕ ಕಲಾವಿದೆ ನಾನು ‘ಎಂದು ನೆನಪಿಸಿಕೊಳ್ಳುತ್ತಾರೆ ಸಲೀಂ. ಇವರು ಕಳೆದ 28 ವರ್ಷಗಳಿಂದ ಸಂಗೀತದ ತರಬೇತಿ ನೀಡುತ್ತಿದ್ದಾರೆ. ಈಗಲೂ, ನಾವು ಇತರರಿಗೆ ಹೋಲಿಸಿದರೆ ಕಡಿಮೆ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನಡೆಸುತ್ತೇವೆ. ನನ್ನನ್ನು ಸಂಗೀತ ಕಚೇರಿಗೆ ಕರೆದರೆ ಯಾರಾದರೂ ತೊಂದರೆ ನೀಡುತ್ತಾರೆ ಎಂದು ಅನೇಕ ಆಯೋಜಕರು ಹೆದರುತ್ತಾರೆ. ಈ ಕ್ಷೇತ್ರದಲ್ಲಿ ಹುಡುಗಿಯರು  ಸಕ್ರಿಯರಾಗಿದ್ದಾರೆಯೇ, ಹಾಗಿದ್ದಲ್ಲಿ ಸಮುದಾಯದಿಂದ ಉತ್ತಮ ಒಡನಾಟ ಸಿಗುತ್ತದೆಯೇ ಎಂದು ಹಲವರು ಕೇಳುತ್ತಾರೆ ಎಂದು ಸಲೀಂ ಹೇಳುತ್ತಾರೆ.

ಅಂತಹ ಎಲ್ಲಾ ಪ್ರಶ್ನೆಗಳನ್ನು ಸ್ವತಃ ಎದುರಿಸಿದ ಸಲೀಂ ಅವರ ಹಿರಿಯ ಮಗಳು ಸುಹಾನಾ ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯ ಸ್ನಾತಕೋತ್ತರ ಕೋರ್ಸ್‌ನಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಅವರು ಇತ್ತೀಚೆಗೆ ಸಂಸ್ಕೃತಿ ಸಚಿವಾಲಯದಿಂದ ಸ್ಥಾಪಿಸಲಾದ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಅಂಡ್ ಟ್ರೈನಿಂಗ್ (CCRT) ಯುವ ಕಲಾವಿದರ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ಸಲೀಂ ಅವರ ಎರಡನೆಯ ಮಗಳು, ನಾಶಿಧಾ ಕೂಡ ಕೇರಳ ವಿಶ್ವವಿದ್ಯಾಲಯದ ಅಡಿಯಲ್ಲಿ ಸ್ವಾತಿ ತಿರುನಾಳ್ ಕಾಲೇಜಿನಿಂದ ವೀಣಾದಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಕಿರಿಯ ಮಗಳು ಲಿಯಾನಾ, ತ್ರಿಪುಣಿತುರಾದ ಆರ್‌ಎಲ್‌ವಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿಎ (ಪಿಟೀಲು) ವಿದ್ಯಾರ್ಥಿನಿಯಾಗಿದ್ದಾರೆ.  “ನನ್ನ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯ ಗುರುತಿಸಲು ಮತ್ತು ಅವರಿಂದಲೇ ವೃತ್ತಿಯನ್ನು ಮಾಡಲು ನಾನು ಯಾವಾಗಲೂ ಪ್ರೋತ್ಸಾಹಿಸುತ್ತೇನೆ ಎಂದು ಸಲೀಮ್ ಹೇಳುತ್ತಾರೆ. ಪಾಲಕ್ಕಾಡ್‌ನ ಚೆಂಬೈ ಸ್ಮಾರಕ ಸರ್ಕಾರಿ ಸಂಗೀತ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಸಲೀಂ ಅವರು ಗಾನಭೂಷಣಂ ಶೀರ್ಷಿಕೆಯೊಂದಿಗೆ ತಮ್ಮ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪಿ ಲೀಲಾ ಮತ್ತು ಕಲಾಮಂಡಲಂ ಹೈದರಾಲಿ ಅವರಂತಹ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದಾರೆ. ಆಲ್ ಇಂಡಿಯನ್ ರೇಡಿಯೊದಲ್ಲಿ ಗ್ರೇಡ್ ‘ಬಿ’ ಕಲಾವಿದ ಆಗಿರುವ ಸಲೀಂ ಅವರು ಮಲಪ್ಪುರಂನ ಕ್ರೆಸೆಂಟ್ ಎಚ್‌ಎಸ್‌ಎಸ್‌ನಲ್ಲಿ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಲಾಕ್‌ಡೌನ್‌ನ ನಂತರ ಕಲಾ ಪ್ರದರ್ಶನ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ. ನಮಗೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳಿಗೆ ಆಫರ್‌ಗಳು ಬರುತ್ತಿವೆ ಎಂದು ಹೇಳುವ ಸಲೀಂ,  ಹೆಚ್ಚಿನ ಮಹಿಳೆಯರು ಕಲಾ ಕ್ಷೇತ್ರಕ್ಕೆ ಕಾಲಿಡುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸುತ್ತಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಿಲ್ಲವ ಸಂಘದ ಮಂಗಳೂರು ತಾಲ್ಲೂಕು ಘಟಕ ಅಸ್ತಿತ್ವಕ್ಕೆ

Next Post

ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಹಿಳೆಯ ಚಿನ್ನಾಭರಣ ದರೋಡೆ ; ಹಾರಿ ತಪ್ಪಿಸಿಕೊಂಡ ದುಷ್ಕರ್ಮಿ

Related Posts

ನಿತಿನ್ ನಬಿನ್ ಅವರ ನೇತೃತ್ವದ ಬಿಜೆಪಿಯ ಹೊಸ ತಂಡ ರೆಡಿ: ರಾಮ್ ಮಾಧವ್, ಸ್ಮೃತಿ ಇರಾನಿಗೆ ಪ್ರಮುಖ ಹೊಣೆ, ಯುವಮೋರ್ಚಾಕ್ಕೆ ಹೊಸ ಸಾರಥಿ ನೇಮಕ
ರಾಜಕೀಯ

ನಿತಿನ್ ನಬಿನ್ ಅವರ ನೇತೃತ್ವದ ಬಿಜೆಪಿಯ ಹೊಸ ತಂಡ ರೆಡಿ: ರಾಮ್ ಮಾಧವ್, ಸ್ಮೃತಿ ಇರಾನಿಗೆ ಪ್ರಮುಖ ಹೊಣೆ, ಯುವಮೋರ್ಚಾಕ್ಕೆ ಹೊಸ ಸಾರಥಿ ನೇಮಕ

August 18, 2026
35
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ
ರಾಜಕೀಯ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

May 28, 2026
26
Next Post
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಹಿಳೆಯ ಚಿನ್ನಾಭರಣ ದರೋಡೆ ; ಹಾರಿ ತಪ್ಪಿಸಿಕೊಂಡ ದುಷ್ಕರ್ಮಿ

ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಹಿಳೆಯ ಚಿನ್ನಾಭರಣ ದರೋಡೆ ; ಹಾರಿ ತಪ್ಪಿಸಿಕೊಂಡ ದುಷ್ಕರ್ಮಿ

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
40
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d