• About us
  • Contact us
  • Disclaimer
Thursday, March 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿಯ ಮೃತದೇಹ ಪತ್ತೆ

Coastal Times by Coastal Times
October 30, 2023
in ಕರಾವಳಿ
ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿಯ ಮೃತದೇಹ ಪತ್ತೆ
232
VIEWS
WhatsappTelegramShare on FacebookShare on Twitter

ಮಂಗಳೂರು, ಅ.30: ರಾ.ಹೆ.66ರ ಉಳ್ಳಾಲದ ಸೇತುವೆಯಿಂದ ಸೋಮವಾರ ಮಧ್ಯಾಹ್ನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಚಿಕ್ಕಮಗಳೂರು ಮೂಲದ ವ್ಯಾಪಾರಿಯ ಮೃತದೇಹ ಸಂಜೆಯ ವೇಳೆಗೆ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಪ್ರಸನ್ನ ಕುಮಾರ್ (40 ) ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವವರ ಪುತ್ರ ಪ್ರಸನ್ನಕುಮಾರ್ ತರಕಾರಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ಕೊತ್ತಂಬರಿ ಸೊಪ್ಪು ಸರಬರಾಜು ಮಾಡುತ್ತಿದ್ದರು. ಬೆಳಗ್ಗೆ ವ್ಯಾಪಾರದ ಹಣ ಬರಲು ಇದೆ, ವಸೂಲಿ ಮಾಡಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.ಇವರು ಚಲಾಯಿಸಿಕೊಂಡು ಬಂದಿದ್ದ ಕಾರಿನಲ್ಲಿ ಪತ್ತೆಯಾದ ಚಾಲನಾ ಪರವಾನಿಗೆಯ ಆಧಾರದಲ್ಲಿ ಗುರುತು ಪತ್ತೆ ಹಚ್ಚಲಾಗಿತ್ತು. ಅಲ್ಲದೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು.

ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ನೇತ್ರಾವತಿ ನದಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕಾರಿನ ಪೋಟೋ ತೆಗೆದು ಮಾಹಿತಿ ಹಂಚಿಕೊಂಡಿದ್ದು, ನದಿಗೆ ಹಾರಿದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿದೆ.  ಸಂಜೆಯ ವೇಳೆಗೆ ಪ್ರಸನ್ನ ಅವರ ಮೃತದೇಹ ಪತ್ತೆಯಾಗಿದೆ. ಪ್ರಸನ್ನ ಅವರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ.

ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ತತ್ ಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ನೀರುಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಆಧಾರ್ ಸೋರಿಕೆ ಪ್ರಕರಣ ಬಿಹಾರ್ ಮೂಲದ ಮೂವರು ಹ್ಯಾಕರ್ಸ್ ಬಂಧನ

Next Post

ಬಂಟ್ವಾಳ: ಲವ್ ಮ್ಯಾರೇಜ್ ಆದರೂ ವರದಕ್ಷಿಣೆ ಕಿರುಕುಳ, ಮನನೊಂದ ನವ ವಿವಾಹಿತೆ ಆತ್ಮಹತ್ಯೆ

Related Posts

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ
ಕರಾವಳಿ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
13
ಈಶಾನ್ಯ ಭಾರತಕ್ಕೆ ಭಾರತ್ ಗೌರವ್ ಬೇಸಿಗೆ ವಿಶೇಷ ಪ್ರವಾಸಿ ರೈಲು, ಮೂರು ಪ್ಯಾಕೇಜ್‌, 14 ದಿನಗಳ ಪ್ರವಾಸ
ಕರಾವಳಿ

ಈಶಾನ್ಯ ಭಾರತಕ್ಕೆ ಭಾರತ್ ಗೌರವ್ ಬೇಸಿಗೆ ವಿಶೇಷ ಪ್ರವಾಸಿ ರೈಲು, ಮೂರು ಪ್ಯಾಕೇಜ್‌, 14 ದಿನಗಳ ಪ್ರವಾಸ

March 25, 2026
33
Next Post
ಬಂಟ್ವಾಳ: ಲವ್ ಮ್ಯಾರೇಜ್ ಆದರೂ ವರದಕ್ಷಿಣೆ ಕಿರುಕುಳ, ಮನನೊಂದ ನವ ವಿವಾಹಿತೆ ಆತ್ಮಹತ್ಯೆ

ಬಂಟ್ವಾಳ: ಲವ್ ಮ್ಯಾರೇಜ್ ಆದರೂ ವರದಕ್ಷಿಣೆ ಕಿರುಕುಳ, ಮನನೊಂದ ನವ ವಿವಾಹಿತೆ ಆತ್ಮಹತ್ಯೆ

Discussion about this post

Recent News

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

March 26, 2026
34
ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
13
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

ಪೊಲೀಸ್ ಇನ್​ಸ್ಪೆಕ್ಟರ್​ನಿಂದ ಲೇಡಿ ರೌಡಿಶೀಟರ್​ಗೇ ಲೈಂಗಿಕ ಕಿರುಕುಳ, ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

March 26, 2026
ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

ಮಂಗಳೂರು: ನೀರುಮಾರ್ಗ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

March 26, 2026
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿದ ಆರೋಪಿಯ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿದ ಆರೋಪಿಯ ಬಂಧನ

March 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d