• About us
  • Contact us
  • Disclaimer
Tuesday, March 31, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅಕ್ರಮ ಬೆಟ್ಟಿಂಗ್ ಪ್ರಕರಣ; ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ 4 ತಿಂಗಳ ಬಳಿಕ ಷರತ್ತುಬದ್ಧ ಜಾಮೀನು.

Coastal Times by Coastal Times
December 30, 2025
in ರಾಜ್ಯ
ಅಕ್ರಮ ಬೆಟ್ಟಿಂಗ್ ಪ್ರಕರಣ; ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ 4 ತಿಂಗಳ ಬಳಿಕ ಷರತ್ತುಬದ್ಧ ಜಾಮೀನು.
17
VIEWS
WhatsappTelegramShare on FacebookShare on Twitter

ಬೆಂಗಳೂರು ಡಿ.30: ಅಕ್ರಮ ಹಣ ವರ್ಗಾವಣೆ ಮತ್ತು ಬೆಟ್ಟಿಂಗ್ ದಂಧೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರಿಗೆ ಕೊನೆಗೂ ಜಾಮೀನು ದೊರೆತಿದೆ. ಕಳೆದ ನಾಲ್ಕು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಶಾಸಕರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕಾನೂನು ಬಾಹಿರವಾಗಿ ಕ್ಯಾಸಿನೋದಲ್ಲಿ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿರುವ ಆರೋಪದಡಿ ಕಳೆದ ಆಗಸ್ಟ್ 23ರಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸಿಕ್ಕಿಂ ರಾಜಧಾನಿ ಗ್ಯಾಂಗ್ ಟಕ್​ನಲ್ಲಿ ಕಾಂಗ್ರೆಸ್ ಶಾಸಕರನ್ನು ಬಂಧಿಸಿದ್ದರು.

ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲೆಯ 6, ಬೆಂಗಳೂರಿನ 10, ಗೋವಾದ 8, ಜೋಧ್‌ಪುರದ 3, ಮುಂಬೈನ 2, ಹುಬ್ಬಳ್ಳಿಯ 1 ಸೇರಿದಂತೆ 31 ಕಡೆಗಳಲ್ಲಿ ಕೆ.ಸಿ. ವೀರೇಂದ್ರಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 1 ಕೋಟಿ ರೂ. ವಿದೇಶಿ ಕರೆನ್ಸಿ, 6 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು, 10 ಕೆ.ಜಿ ಬೆಳ್ಳಿಯ ವಸ್ತುಗಳು ಸೇರಿದಂತೆ 12 ಕೋಟಿ ರೂಪಾಯಿ ನಗದು ಹಾಗೂ 4 ವಾಹನಗಳನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ, 17 ಬ್ಯಾಂಕ್ ಖಾತೆಗಳು, 2 ಬ್ಯಾಂಕ್ ಲಾಕರ್‌ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಮತ್ತು ವೀರೇಂದ್ರ ಅವರ ಸಹೋದರ ಕೆ.ಸಿ ನಾಗರಾಜ್, ಅವರ ಮಗ ಪೃಥ್ವಿ. ಎನ್ ರಾಜ್ ಅವರಿಂದ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.

ತನಿಖೆ ವೇಳೆ ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲ್ಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊ, ಕ್ಯಾಸಿನೊ ಜ್ಯುವೆಲ್​ ಹೀಗೆ ಅಂತಾರಾಷ್ಟ್ರೀಯ ಕ್ಯಾಸಿನೊ ಸದಸ್ಯತ್ವ, ವಿವಿಧ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು, ತಾಜ್, ಹಯಾತ್, ಲೀಲಾ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್‌ಗಳನ್ನು ಪಪ್ಪಿ ಹೊಂದಿರುವುದು ದಾಳಿ ವೇಳೆ ಬಯಲಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ಪಪ್ಪಿ ವಿರುದ್ಧ ಇ.ಡಿ. ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದರು.

ಬಂಧನದ ನಂತರ ಶಾಸಕರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಹಲವು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದರೂ, ತನಿಖೆ ಪ್ರಗತಿಯಲ್ಲಿದೆ ಎಂಬ ಇಡಿ ವಾದದಿಂದಾಗಿ ಅರ್ಜಿಗಳು ತಳ್ಳಿಹಾಕಲ್ಪಟ್ಟಿದ್ದವು. ಆದರೆ, ಇತ್ತೀಚೆಗೆ ಇಡಿ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸುದೀರ್ಘವಾದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಪ್ರಕರಣದ ಗಂಭೀರತೆ ಮತ್ತು ತನಿಖೆಯ ಹಂತವನ್ನು ಪರಿಗಣಿಸಿ ಜಾಮೀನು ಆದೇಶ ಹೊರಡಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗೆ ಹಲ್ಲೆ ಪ್ರಕರಣ: ಇಬ್ಬರ ಬಂಧನ

Next Post

ಮಂಗಳೂರು: ಜನವರಿ 14 ಹಾಗೂ 15 ರಂದು ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ- 2026

Related Posts

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,
ರಾಜ್ಯ

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,

February 14, 2026
72
ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ
ರಾಜ್ಯ

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ

February 2, 2026
132
Next Post
ಮಂಗಳೂರು: ಜನವರಿ 14 ಹಾಗೂ 15 ರಂದು ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ- 2026

ಮಂಗಳೂರು: ಜನವರಿ 14 ಹಾಗೂ 15 ರಂದು ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ- 2026

Discussion about this post

Recent News

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

March 31, 2026
76
ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

March 29, 2026
60
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

March 31, 2026
ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

March 29, 2026
ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

March 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d