ಮಂಗಳೂರು, ಜ, 29: ಸೆಲ್ಫಿ ನೆಪದಲ್ಲಿ ಅಭಿಮಾನಿಯೋರ್ವ ಸಾನಿಯಾ ಅಯ್ಯರ್ ಅವರ ಕೈ ಹಿಡಿದು ಎಳೆದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಮೂವತ್ತನೇ ವರ್ಷದ ಕೋಟಿಚೆನ್ನಯ್ಯ ಜೋಡುಕರೆ ಕಂಬಳ ಕೂಟ ನಡೆಯುತ್ತಿದ್ದು, ಶನಿವಾರ ರಾತ್ರಿ ವಿಶೇಷ ಅಹ್ವಾನಿತರಾಗಿ ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಾನಿಯಾ ಐ ಲವ್ ಯೂ ಪುತ್ತೂರು ಎಂಬ ವಾಕ್ಯದೊಂದಿಗೆನೇ ಭಾಷಣ ಆರಂಭಿಸಿದ್ದರು.
ಈ ವೇಳೆ ಅಭಿಮಾನಿಯೋರ್ವ ಭಾಷಣದುದಕ್ಕೂ ಸಾನಿಯಾ ಐ ಲವ್ ಯೂ ಎಂದು ಕೂಗುತ್ತಿದ್ದ. ಭಾಷಣ ಮುಗಿಸಿ ಕಾರ್ಯಕ್ರಮದಿಂದ ನಿರ್ಗಮಿಸಲು ವೇದಿಕೆಯಿಂದ ಕೆಳಗಿಳಿಯುತ್ತಿದ್ದ ವೇಳೆ ಆತ ಸಾನ್ಯಾ ಬಳಿ ಬಂದು ಸೆಲ್ಫಿ ಕೇಳಿದ್ದಾನೆ. ಆಕೆಯ ಕೈ ಹಿಡಿದು ಎಳೆದಾಡಿದ್ದಾನೆ. ಇದರಿಂದ ಮುಜುಗರಕೊಳ್ಳಗಾದ ಸಾನಿಯಾ ಸೆಲ್ಫಿಯನ್ನು ತಿರಸ್ಕರಿಸಿ ತೆರಳಿದ್ದಾರೆ.
ತುಳುನಾಡಿನ ಸಂಸ್ಕೃತಿ ನಮಗೆ ಜೀವನ ಪಾಠ ; ಅದಕ್ಕೂ ಮುನ್ನ ವೇದಿಕೆಯಲ್ಲಿ ಭಾಷಣ ಮಾಡಿದ ನಟಿ ಸಾನಿಯಾ ಅಯ್ಯರ್, ನನಗೆ ತುಳು ಬರುವುದಿಲ್ಲ. ಆದರೆ ನನಗೆ ತುಳು ಭಾಷೆ ಅಂದರೆ ತುಂಬಾ ಇಷ್ಟ. ಕಂಬಳ ಕೇವಲ ಸಾಂಸ್ಕೃತಿಕ ಕಲೆ ಅಥವಾ ಕ್ರೀಡೆ ಅಲ್ಲ. ಕಂಬಳ ಎನ್ನುವುದು ಜೀವನದ ಮೌಲ್ಯವಾಗಿದೆ. ತುಳುನಾಡಿನ ಸಂಸ್ಕೃತಿ ನಮಗೆ ಜೀವನ ಪಾಠ ಕಲಿಸಿಕೊಡುತ್ತದೆ. ಎಲ್ಲಾ ಕಲೆಗಳ ಹಿಂದೆ ಪಾಠಗಳಿವೆ ಎಂದು ಹೇಳಿದ್ದರು.
ಅಭಿಮಾನಿಗೆ ಜನರ ಧರ್ಮದೇಟು ; ಅಭಿಮಾನಿ ಮದ್ಯದ ನಶೆಯಲ್ಲಿ ಕೃತ್ಯ ಎಸಗಿದ್ದು, ಸಾನಿಯಾ ಭಾಷಣದುದ್ದಕ್ಕೂ ಆಭಾಸಗೊಳ್ಳುವಂತೆ ವರ್ತಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಈ ವ್ಯಕ್ತಿ ಜನರಿಗೆ ಕಿರಿಕಿರಿಯಾಗುವಷ್ಟು ತೊಂದರೆ ಮಾಡಿದ್ದಾನೆ. ನಂತರ ಸಾನಿಯಾ ತೆರಳುತ್ತಿದ್ದಂತೆಯೇ ಸ್ಥಳೀಯ ಯುವಕರು ಪಾನಮತ್ತ ಅಭಿಮಾನಿಗೆ ಧರ್ಮದೇಟು ನೀಡಿ ಕಂಬಳದಿಂದ ಹೊರಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಾನ್ಯಾ ಆಗಲೀ ಆಕೆಯ ಜೊತೆ ಬಂದಿದ್ದವರಾಗಲೀ ಪೊಲೀಸರಿಗೆ ದೂರು ನೀಡಿಲ್ಲ ಎನ್ನಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post