2025ರ ಮಹಾ ಕುಂಭಮೇಳದಲ್ಲಿ ತಮ್ಮ ನೇತ್ರಗಳಿಂದಲೇ ಎಲ್ಲರನ್ನೂ ಮೋಡಿ ಮಾಡಿದ್ದ ಮೊನಾಲಿಸಾಗೆ ಅದೃಷ್ಟ ಒದಗಿಬಂದಿದೆ. ಜಪಮಾಲೆಗಳನ್ನು ಮಾರುತ್ತಿದ್ದ ಸಾಮಾನ್ಯ ಹುಡುಗಿ ಮೊನಾಲಿಸಾ ಹೀರೋಯಿನ್ ಆಗಿ ಮಿಂಚಲಿದ್ದಾರೆ. ಹೌದು, ನಿರ್ದೇಶಕ ಸನೋಜ್ ಮಿಶ್ರಾ ಅವರ ‘ದಿ ಡೈರಿ ಆಫ್ ಮಣಿಪುರ’ದಲ್ಲಿ ಚೆಲುವೆ ಮೊನಾಲಿಸಾ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿದ್ದು, ಸಹಿ ಹಾಕಲಾಗಿದೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರ ಸಹೋದರನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಮಹಾ ಕುಂಭಮೇಳ ಸುಂದರಿ.
ಮಹಾ ಕುಂಭಮೇಳದಲ್ಲಿ ಫೇಮಸ್: ಕುಟುಂಬದ ಆರ್ಥಿಕ ಸ್ಥಿತಿ ತೀರಾ ಕೆಳಮಟ್ಟದಲ್ಲಿದ್ದ ಹಿನ್ನೆಲೆ, ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಿರಲಿಲ್ಲ. ಹೂಮಾಲೆಗಳನ್ನು ಮಾರುತ್ತಾ ಜೀವನ ಸಾಗಿಸುತ್ತಿದ್ದರು. 2025ರ ಮಹಾ ಕುಂಭಮೇಳದಲ್ಲಿಯೂ, ರುದ್ರಾಕ್ಷಿ ಮಾಲೆ (ಸರ) ಗಳನ್ನು ಮಾರಾಟ ಮಾಡಿ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
12ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ತೊರೆದು, ಕುಟುಂಬಕ್ಕೆ ನೆರವು: ‘ಮೊನಾಲಿಸಾ’ ಯಾರು? ಮೊನಾಲಿಸಾ ಮಧ್ಯಪ್ರದೇಶದ ಮಹೇಶ್ವರದಲ್ಲಿ ಹಿಂದೂ ಕುಟುಂಬದಲ್ಲಿ ಜನವರಿ 21, 2009ರಂದು ಜನಿಸಿದರು. 16ರ ಹರೆಯದ ‘ಮೊನಾಲಿಸಾ’ ತುಂಬಾ ಸರಳ ಜೀವನ ಸಾಗಿಸುತ್ತಾ ಬಂದಿದ್ದಾರೆ. ಬಡತನ ಹಿನ್ನೆಲೆ 12ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ತೊರೆದು, ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗೋ ನಿಟ್ಟಿನಲ್ಲಿ ಹೂ ಮಾರಲು ನಿರ್ಧರಿಸುತ್ತಾರೆ.
‘ದಿ ಡೈರಿ ಆಫ್ ಮಣಿಪುರ್’: ಮಹಾ ಕುಂಭಮೇಳದಿಂದ ಆನ್ಲೈನ್ನಲ್ಲಿ ವೈರಲ್ ಆದ ಚೆಲುವೆಯೀಗ ತಮ್ಮ ಸೌಂದರ್ಯ ಮತ್ತು ಪ್ರತಿಭೆಯನ್ನು ಬಿಗ್ ಸ್ಕ್ರೀನ್ನಲ್ಲಿ ಹರಡಲು ಸಜ್ಜಾಗಿದ್ದಾರೆ. ಗಾಂಧಿಗಿರಿ ಮತ್ತು ದಿ ಡೈರಿ ಆಫ್ ಬೆಂಗಾಲ್‌ನಂತಹ ಚಿತ್ರಗಳ ನಿರ್ದೇಶಕ ಸನೋಜ್ ಮಿಶ್ರಾ, ತಮ್ಮ ಮುಂಬರುವ ಚಿತ್ರಕ್ಕಾಗಿ ಮೊನಾಲಿಸಾ ಅವರಲ್ಲಿ ಸಹಿ ಮಾಡಿಸಿದ್ದಾರೆ. ‘ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳಲಿದ್ದು, ಅಧಿಕೃತ ಒಪ್ಪಂದಾಗಿದೆ. ಮೊನಾಲಿಸಾ ಕುಟುಂಬದ ಒಪ್ಪಿಗೆಯನ್ನೂ ಪಡೆದಿದ್ದಾರೆ. ಚಿತ್ರದಲ್ಲಿ ಖ್ಯಾತ ನಟ ರಾಜ್‌ಕುಮಾರ್ ರಾವ್ ಅವರ ಅಣ್ಣ ಅಮಿತ್ ರಾವ್ ನಾಯಕನಾಗಿ ನಟಿಸಲಿದ್ದಾರೆ.
ಸನೋಜ್ ಕುಮಾರ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಅವರು ‘ದಿ ಡೈರಿ ಆಫ್ ವೆಸ್ಟ್ ಬೆಂಗಾಲ್’, ‘ಶಶಾಂಕ್’, ‘ಘಜ್ನವಿ’, ‘ಶ್ರೀನಗರ’, ‘ರಾಮ್ ಕಿ ಜನ್ಮಭೂಮಿ’, ‘ಗಾಂಧಿಗಿರಿ’ ಸೇರಿದಂತೆ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಸಲ್ಮಾನ್ ಖಾನ್ ಫೇವರಿಟ್: ಮೊನಾಲಿಸಾ ನಟನೆ ಮೇಲೆ ಒಲವು ಹೊಂದಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಲವು ರೀಲ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಮೆಚ್ಚಿನ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಮೆಚ್ಚಿನ ನಟಿ ಸೋನಾಕ್ಷಿ ಸಿನ್ಹಾ. ಈ ‘ದಿ ಡೈರಿ ಆಫ್ ಮಣಿಪುರ್’ ಚಿತ್ರದ ಮೂಲಕ, ನಟಿಯಾಗುವ ಮೊನಾಲಿಸಾ ಅವರ ಕನಸು ನನಸಾಗಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post