ಮಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿರುವುದು ಹಾಗೂ ರಾಜ್ಯದಲ್ಲೇ ಅತಿದೊಡ್ಡ ಪ್ರಮಾಣದ ಎಂಡಿಎಂಎ ಡ್ರಗ್ ಪ್ರಕರಣಗಳನ್ನು ಪತ್ತೆ ಮಾಡಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್, ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಸೇರಿದಂತೆ ಇಡೀ ತಂಡಕ್ಕೆ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಮಂಗಳೂರಿನ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದ.ಕ.ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುವ 25 ಮಂದಿಗೆ ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಇಡೀ ದೇಶದ ಗಮನ ಸೆಳೆದಿದ್ದ 75 ಕೋಟಿ ಮೌಲ್ಯದ ಡ್ರಗ್ಸ್ ಹಿಡಿದಿದ್ದು ಮತ್ತು ಕೋಟೆಕಾರು ದರೋಡೆ ಪ್ರಕರಣದಲ್ಲಿ ಶೀಘ್ರ ಪತ್ತೆ ಕಾರ್ಯ ಮಾಡಿದ್ದಕ್ಕಾಗಿ ತಂಡದಲ್ಲಿ ಈ ಹಿಂದೆಯೇ ಸಿಎಂ ಪದಕ ಪಡೆದವರನ್ನು ಬಿಟ್ಟು ಪ್ರಮುಖ ಸದಸ್ಯರನ್ನು ಈ ಬಾರಿ ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಒಂದು ವಿಭಾಗದ ಇಷ್ಟೊಂದು ಮಂದಿಯನ್ನು ಒಂದೇ ಬಾರಿಗೆ ಸಿಎಂ ಪದಕಕ್ಕೆ ಆಯ್ಕೆ ಮಾಡಿರುವುದು ಮಂಗಳೂರು ಸಿಸಿಬಿ ತಂಡಕ್ಕೆ ದೊಡ್ಡ ಕೋಡು ಸಿಕ್ಕಂತಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಮಂಗಳೂರು ನಗರ ಉಪವಿಭಾಗ ಎಸಿಪಿ ಧನ್ಯಾ ಎನ್.ನಾಯಕ್ ಹಾಗೂ ನಕ್ಸಲರ ಶರಣಾಗತಿ ಮಾಡಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್ ಅವರನ್ನು ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್, ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಬಿ., ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಚ್.ಎಂ., ಸುರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಉಳ್ಳಾಲ ಠಾಣೆಯ ಎಸ್ಸೈ ಸಂತೋಷ್ ಕುಮಾರ್ ಎಸ್., ಸುರತ್ಕಲ್ ಠಾಣೆಯ ಎಸ್ಸೈ ರಾಘವೇಂದ್ರ ಮಂಜುನಾಥ ನಾಯ್ಕ್, ಕಂಕನಾಡಿ ನಗರ ಠಾಣೆಯ ಎಚ್‌ಸಿ ರೆಜಿ ವಿ.ಎಂ., ಮಂಗಳೂರು ಸಿಸಿಬಿ ಘಟಕದ ಎಸ್ಸೈ ಶೀನಪ್ಪ, ಎಆರ್‌ಎಸ್‌ಐ ರಿತೇಶ್, ಎಚ್‌ಸಿಗಳಾದ ಆಂಜನಪ್ಪ, ಭೀಮಪ್ಪ ಉಪ್ಪಾರ, ಸುಧೀರ್ ಕುಮಾರ್, ಸಂತೋಷ್ ಕುಮಾರ್, ದಾಮೋದರ, ವಿಜಯ ಶೆಟ್ಟಿ, ಪಿಸಿಗಳಾದ ಪುರುಷೋತ್ತಮ, ಶ್ರೀಧರ, ಪ್ರಕಾಶ್ ಸತ್ತಿಹಳ್ಳಿ, ಅಭಿಷೇಕ್, ಸುರತ್ಕಲ್ ಠಾಣೆಯ ಎಚ್‌ಸಿಗಳಾದ ಅಣ್ಣಪ್ಪ, ಉಮೇಶ್ ಕುಮಾರ್, ಸೆನ್ ಠಾಣೆಯ ಎಸ್ಸೈ ಗುರಪ್ಪ ಕಾಂತಿ, ಎಚ್‌ಸಿ ಪ್ರವೀಣ್ ಎಂ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post