ಬೆಂಗಳೂರು: ಒಬ್ಬ ಕಾಂಗ್ರೆಸ್ ನಾಯಕ 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಇಂದು ಮಧ್ಯಾಹ್ನ ಖಾತೆ ಹಂಚಿಕೆ ಮಾಡಿದ್ದಾರೆ.
ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರು ಹಣಕಾಸು, ವಾರ್ತಾ ಮತ್ತು ಪ್ರಸಾರ, ಗುಪ್ತಚರ ಉಳಿಸಿಕೊಂಡಿದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಬೇಡಿಕೆಯಂತೆ ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.
ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಯ ಪಟ್ಟಿ ಲಭ್ಯವಾಗಿದೆ. ಈ ಖಾತೆ ಹಂಚಿಕೆಯ ಪಟ್ಟಿಗೆ ಪಕ್ಷದ ಹೈಕಮಾಂಡ್ ಸಹ ತನ್ನ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ. ಹೆಚ್ಚಿನ ಸಚಿವರಿಗೆ ಅವರು ನಿರೀಕ್ಷಿಸಿದ ಖಾತೆಗಳು ದೊರೆತಿಲ್ಲ. ಆದರೆ ಕಲವರಿಗೆ ನಿರೀಕ್ಷೆಗೂ ಮೀರಿದ ಉತ್ತಮ ಖಾತೆಗಳು ಲಭ್ಯವಾಗಿವೆ. ಸಚಿವರಿಗೆ ಹಂಚಿಕೆ ಮಾಡಲಾಗಿರುವ ಖಾತೆಗಳ ಪಟ್ಟಿಯನ್ನು ಇಂದು ಸಂಜೆ ಮುಖ್ಯಮಂತ್ರಿ ರಾಜಭವನಕ್ಕೆ ಕಳಿಸಿಕೊಡಲಿದ್ದಾರೆ. ಸಚಿವರಿಗೆ ನೀಡಲಾಗಿರುವ ಖಾತೆಗಳ ವಿವರ ಹೀಗಿದೆ.
ಯಾರಿಗೆ ಯಾವ ಖಾತೆ?
ಸಿದ್ದರಾಮಯ್ಯ– ಮುಖ್ಯಮಂತ್ರಿ, ಹಣಕಾಸು, ವಾರ್ತಾ ಮತ್ತು ಗುಪ್ತಚರ
ಡಿ.ಕೆ ಶಿವಕುಮಾರ್– ಜಲಸಂಪನ್ಮೂಲ ಹಾಗೂ ಬೆಂಗಳೂರು ನಗಾರಾಭಿವೃದ್ಧಿ
ಕೆ.ಎಚ್ ಮುನಿಯಪ್ಪ– ಆಹಾರ ಮತ್ತು ನಾಗರಿಕ ಪೂರೈಕೆ
ಸತೀಶ್ ಜಾರಕಿಹೊಳಿ– ಲೋಕೋಪಯೋಗಿ
ಎಂ.ಬಿ ಪಾಟೀಲ್– ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿಬಿಟಿ
ಪ್ರಿಯಾಂಕ್ ಖರ್ಗೆ– ಗ್ರಾಮೀಣಾಭಿವೃದ್ಧಿ
ಜಿ.ಪರಮೇಶ್ವರ್– ಗೃಹ ಇಲಾಖೆ
ಕೆ.ಜೆ ಜಾರ್ಜ್– ಇಂಧನ
ರಾಮಲಿಂಗಾರೆಡ್ಡಿ– ಸಾರಿಗೆ ಇಲಾಖೆ
ಜಮೀರ್ ಅಹಮದ್ ಖಾನ್– ವಸತಿ, ವಕ್ಫ್
ಎಚ್.ಕೆ.ಪಾಟೀಲ; ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ
ಕೃಷ್ಣ ಬೈರೇಗೌಡ; ಕಂದಾಯ
ಎನ್.ಚಲುವರಾಯಸ್ವಾಮಿ; ಕೃಷಿ
ಕೆ.ವೆಂಕಟೇಶ್; ಪಶುಸಂಗೋಪನೆ ಮತ್ತು ರೇಷ್ಮೆ
ಡಾ.ಎಚ್.ಸಿ.ಮಹದೇವಪ್ಪ; ಸಮಾಜ ಕಲ್ಯಾಣ
ಈಶ್ವರ ಖಂಡ್ರೆ; ಅರಣ್ಯ ಮತ್ತು ಪರಿಸರ ಇಲಾಖೆ
ಕೆ.ಎನ್.ರಾಜಣ್ಣ; ಸಹಕಾರ
ದಿನೇಶ್ ಗುಂಡೂರಾವ್; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಶರಣಬಸಪ್ಪ ದರ್ಶನಾಪುರ; ಸಣ್ಣ ಕೈಗಾರಿಕೆ
ಶಿವಾನಂದ ಪಾಟೀಲ; ಜವಳಿ ಮತ್ತು ಸಕ್ಕರೆ
ಆರ್.ಬಿ.ತಿಮ್ಮಾಪುರ; ಅಬಕಾರಿ ಮತ್ತು ಮುಜರಾಯಿ
ಎಸ್.ಎಸ್.ಮಲ್ಲಿಕಾರ್ಜುನ; ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ
ಶಿವರಾಜ ತಂಗಡಗಿ; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಶರಣ ಪ್ರಕಾಶ ಪಾಟೀಲ; ಉನ್ನತ ಶಿಕ್ಷಣ
ಮಂಕಾಳ ಸುಬ್ಬ ವೈದ್ಯ; ಮೀನುಗಾರಿಕೆ, ಬಂದರು ಮತ್ತು ಒಳನಾಡು
ಲಕ್ಷ್ಮಿ ಹೆಬ್ಬಾಳಕರ; ಮಹಿಳಾ ಮತ್ತು ಮಕ್ಕಳ ಕಲ್ಯಾಣ
ರಹೀಂ ಖಾನ್; ಪೌರಾಡಳಿ ಮತ್ತು ಹಜ್
ಡಿ.ಸುಧಾಕರ್; ಮೂಲಸೌಕರ್ಯ ಅಭಿವೃದ್ದಿ ಮತ್ತು ಯೋಜನೆ, ಸಾಂಖ್ಯಿಕ
ಸಂತೋಷ್ ಎಸ್.ಲಾಡ್; ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ದಿ
ಎನ್.ಎಸ್.ಬೋಸರಾಜು; ಪ್ರವಾಸೋಧ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
ಬೈರತಿ ಸುರೇಶ್; ಬೆಂಗಳೂರು ಹೊರತುಪಡಿಸಿ ನಗಾರಾಭಿವೃದ್ಧಿ
ಮಧು ಬಂಗಾರಪ್ಪ; ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಡಾ.ಎಂ.ಸಿ.ಸುಧಾಕರ್; ವೈದ್ಯಕೀಯ ಶಿಕ್ಷಣ
ಬಿ.ನಾಗೇಂದ್ರ; ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ
Discover more from Coastal Times Kannada
Subscribe to get the latest posts sent to your email.
Discussion about this post