ನವದೆಹಲಿ, ಜೂ 10: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ನಿನ್ನೆ(ಜೂನ್ 09) ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ ಕ್ಯಾಬಿನೆಟ್ ಹಾಗೂ ರಾಜ್ಯ ಖಾತೆ ಸಚಿವರೂ ಸಹ ಪ್ರಮಾಣವಚನ ಸ್ವೀಕರಿಸಿದ್ದರು. ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಸೇರಿದಂತೆ ಐವರು ಮೋದಿ ಸಂಪುಟದಲ್ಲಿದ್ದಾರೆ. ಇದೀಗ ಅವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಎಚ್ಡಿ ಕುಮಾರಸ್ವಾಮಿಗೆ ಬಯಸಿದ್ದ ಖಾತೆ ಮಿಸ್ ಆಗಿದೆ. ಇದರಿಂದ ಎಚ್ಡಿಕೆಗೆ ನಿರಾಸೆಯಾಗಿದೆ. ಇನ್ನು ಕರ್ನಾಟಕದಿಂದ ಕ್ಯಾಬಿನೆಟ್ ಸಚಿವರಾಗಿರುವ ಪ್ರಹ್ಲಾದ್ ಜೋಶಿ, ನಿರ್ಮಾಲಾ ಸೀತಾರಾಮನ್, ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಅವರಿಗೆ ಯಾವ-ಯಾವ ಖಾತೆ ನೀಡಲಾಗಿದೆ ಎನ್ನುವ ವಿವರ ಇಲ್ಲಿದೆ.
ಎಚ್ಡಿ.ಕುಮಾರಸ್ವಾಮಿ – ಬೃಹತ್ ಕೈಗಾರಿಕೆ/ ಉಕ್ಕು
ವಿ. ಸೋಮಣ್ಣ- ರೈಲ್ವೇ ರಾಜ್ಯ ಖಾತೆ
ಶೋಭಾ ಕರಂದ್ಲಾಜೆ- ಸಣ್ಣ ಕೈಗಾರಿಕೆ
ಪ್ರಹ್ಲಾದ್ ಜೋಶಿ – ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
ನಿರ್ಮಲಾ ಸೀತಾರಾಮನ್ – ಹಣಕಾಸು ಸಚಿವಾಲಯ
Discussion about this post