ಉಡುಪಿ: ಇಲ್ಲಿ ಮಲ್ಪೆ ಬಂದರಿನಲ್ಲಿ ನೋಡಲು ಭಯಾನಕವಾಗಿ ಕಾಣುವ ಬರೋಬ್ಬರಿ 250 ಕೆ.ಜಿ ತೂಕದ ಅಪರೂಪದ ಮೀನು ಪತ್ತೆಯಾಗಿದೆ. ತನ್ನ ಗಾತ್ರ ಮಾತ್ರವಲ್ಲ ನೋಡಲು ಕೂಡ ಭಯಾನಕವಾಗಿ ತೋರುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ.
ಮೀನು ಹಿಡಿಯಲು ತೆರಳಿದ್ದ ಸೀ ಕ್ಯಾಪ್ಟನ್ ಎಂಬ ಲೈಲ್ಯಾಂಡ್ ಬೋಟಿನವರು ಬೀಸಿದ ಬಲೆಯಲ್ಲಿ ಭಾರಿ ಗಾತ್ರದ ಮೀನು ಸಿಲುಕಿದೆ. ಮಲ್ಪೆ ಬಂದರಿಗೆ ಬಂದು ಬೋಟಿನ ಮೀನುಗಳನ್ನು ಇಳಿಸುವ ವೇಳೆ ಬಲೆಯೊಳಗೆ ಬೃಹತ್ ಗಾತ್ರದ ಮೀನು ಪತ್ತೆಯಾಗಿದೆ.
Discussion about this post