ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಐಫೋನ್ಗಳು, ಐಪ್ಯಾಡ್ಗಳು ಮತ್ತು ಮ್ಯಾಕ್ಗಳಿಗೆ ಭದ್ರತಾ ದೋಷದ ಬಗ್ಗೆ ಆಪಲ್ ಕಂಪನಿ ಕಳವಳ ವ್ಯಕ್ತಪಡಿಸಿದೆ. ತಮ್ಮ ಬಳಕೆದಾರರಿಗೆ ಈ ಕೂಡಲೇ ಆಪಲ್ ಸಾಧನಗಳನ್ನು ಅಪ್ಡೇಟ್ ಮಾಡುವಂತೆ ಎಚ್ಚರಿಕೆ ನೀಡಿದೆ. ಐಫೋನ್ಗಳು, ಐಪ್ಯಾಡ್ಗಳು ಮತ್ತು ಮ್ಯಾಕ್ಗಳಿಗೆ ಗಂಭೀರವಾದ ಭದ್ರತಾ ದೋಷಗಳು ಎದುರಾದ ಬಗ್ಗೆ ಆಪಲ್ ಕಂಪನಿ ಬಹಿರಂಗಪಡಿಸಿದೆ. ಕೆಲ ಸಾಫ್ಟ್ವೇರ್ ನ್ಯೂನತೆಗಳು ದಾಳಿಕೋರರಿಗೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತಿವೆ. ದಾಳಿಕೋರರು ಈ ಸಮಸ್ಯೆಯನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಲ್ ಎರಡು ಭದ್ರತಾ ವರದಿಗಳಲ್ಲಿ ಹೇಳಿದೆ. ಪೀಡಿತ ಸಾಧನಗಳನ್ನು iPhones6S ಮತ್ತು ನಂತರದ ಮಾದರಿಗಳನ್ನು ನವೀಕರಿಸಲು ಭದ್ರತಾ ತಜ್ಞರು ಬಳಕೆದಾರರಿಗೆ ಸಲಹೆ ನೀಡಿದ್ದಾರೆ. 5 ನೇ ತಲೆಮಾರಿನ ಮತ್ತು ನಂತರದ ಎಲ್ಲ ಐಪ್ಯಾಡ್ ಪ್ರೊ ಮಾದರಿಗಳು ಮತ್ತು ಐಪ್ಯಾಡ್ ಏರ್ 2 ಸೇರಿದಂತೆ iPad ನ ಹಲವಾರು ಮಾದರಿಗಳು ಮತ್ತು Mac ಕಂಪ್ಯೂಟರ್ಗಳನ್ನು ಚಲಾಯಿಸುವ MacOS Monterey ಅಪ್ಡೇಟ್ ಮಾಡಲು ಬಳಕೆದಾರರಿಗೆ ಆಪಲ್ ಕಂಪನಿ ಎಚ್ಚರಿಕೆ ನೀಡಿದೆ. ಈ ದೋಷದಿಂದಾಗಿ ಹ್ಯಾಕರ್ಗಳು ಡಿವೈಸ್ ಮೇಲೆ ಸಂಪೂರ್ಣ ಆಡ್ಮಿನ್ ಆಕ್ಸೆಸ್ ಪಡೆಯುವ ಸಾಧ್ಯತೆಯಿದೆ ಎಂದು ಸೋಷಿಯಲ್ ಫ್ರೂಫ್ ಸೆಕ್ಯೂರಿಟಿ ಸಿಇಒ ರಾಚೆಲ್ ಟೊಬ್ಯಾಕ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post