• About us
  • Contact us
  • Disclaimer
Saturday, April 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 125 ಜನರಿಗೆ 2.50 ಕೋಟಿ ರೂ. ಪಂಗನಾಮ-ಆರೋಪಿ ರಾಮ್‌ಪ್ರಸಾದ್‌ ಸಿಸಿಬಿ ಬಲೆಗೆ

Coastal Times by Coastal Times
August 19, 2022
in ಕ್ರೈಮ್ ನ್ಯೂಸ್
ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 125 ಜನರಿಗೆ 2.50 ಕೋಟಿ ರೂ. ಪಂಗನಾಮ-ಆರೋಪಿ ರಾಮ್‌ಪ್ರಸಾದ್‌ ಸಿಸಿಬಿ ಬಲೆಗೆ
761
VIEWS
WhatsappTelegramShare on FacebookShare on Twitter

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ಬರೋಬ್ಬರಿ 125 ಜನರಿಗೆ 2.50 ಕೋಟಿ ರೂಪಾಯಿಗೂ ಹೆಚ್ಚು ಪಂಗನಾಮ ಹಾಕಿದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ರಾಮ್‌ಪ್ರಸಾದ್‌ ಯಾನೆ ಹರೀಶ್‌ ಬಂಧಿತ ಆರೋಪಿಯಾಗಿದ್ದಾನೆ. ರಾಮ್‌ಪ್ರಸಾದ್‌ ಯಾನೆ ಹರೀಶ್‌ ತಾನು ಕೆ ಎಂಎಫ್ ನಿರ್ದೇಶಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಅಮಾಯಕರಿಗೆ ಕೆಎಂಎಫ್‌ ಮಂಗಳೂರು ಇದರ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ವಂಚಿಸಿದ್ದಾನೆ. ಅಲ್ಲದೆ ಕೆಎಂಎಫ್‌ ಹೆಸರಿನಲ್ಲಿ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಪುತ್ತೂರು ಮತ್ತು ಮಂಗಳೂರಿನ ಉರ್ವಾದಲ್ಲಿ 15 ದಿನಗಳ ಟ್ರೈನಿಂಗ್‌ ಕೊಟ್ಟಿದ್ದಾನೆ. ಕೆಲವರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ. ಈತ ಪ್ರತೀ ವ್ಯಕ್ತಿಯಿಂದ ಕಡಿಮೆ ಎಂದರೆ 50 ಸಾವಿರದಿಂದ ಹಿಡಿದು 3ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡಿದ್ದಾನೆ.

ಅದು ಗೂಗಲ್‌ ಪೇ, ಕ್ಯಾಶ್‌, ಬ್ಯಾಂಕ್‌ ಟ್ರಾನ್ಸಫರ್‌ ಸೇರಿ ಹಲವು ವಿಧಗಳಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಕ್ರಿಮಿನಲ್ ಆರೋಪಿಯ ವಂಚನೆ ತಿಳಿಯದ ಹಲವರು ಅಮಾಯಕರು ಮೋಸ ಹೋಗಿದ್ದಾರೆ. ಇಷ್ಟೆ ಅಲ್ಲದೆ ಅಮಾಯಕ ನಿರುದ್ಯೋಗಿ ಯುವತಿಯರಿಗೂ ವಂಚನೆ ಮಾಡಿದ್ದಾರೆ. ಹಲವು ಮಂದಿಯಿಂದ ದುಡ್ಡು ಪಡೆದುಕೊಂಡು ಯುವತಿಯರನ್ನು ಬ್ಲ್ಯಾಕ್‌ ಮೇಲ್‌ ಕೂಡಾ ಮಾಡುತ್ತಿದ್ದ. ಬೆಂಗಳೂರಿನ ಕೆಎಂಎಫ್‌ಗೂ ಡೈರಿಗೆ ಕೆಲ ಸಂತ್ರಸ್ತರನ್ನು ಕರೆದುಕೊಂಡು ಹೋಗಿ ಕೆಲಸದ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ. ನೂರಾರು ಯುವಕರು ಮತ್ತು ಯುವತಿಯರು ಈ ಮಹಾ ಮೋಸಗಾರನಿಂದ ವಂಚನೆಗೆ ಒಳ ಪಟ್ಟಿದ್ದಾರೆ, ಈ ಹಿಂದೆ ಕೂಡಾ ಇತ ಎಂ ಆರ್ ಪಿ ಎಲ್ ಮತ್ತು ಎರ್ ಪೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟಿ ಗಟ್ಟಲೆ ಹಣ ವಂಚಿಸಿದ್ದಾನೆ. ಆರೋಪಿ ರಾಮ್‌ಪ್ರಸಾದ್‌ ನೊಂದಿಗೆ ಮಲ್ಲೇಶ್ ಎಂಬ ವ್ಯಕ್ತಿ ಕೊಡಾ ಈ ವಂಚನೆಯಲ್ಲಿ ಇದ್ದಾನೆ ಎಂದು ವಂಚನೆಗೆ ಒಳಗಾದವರು ಹೇಳಿ ಕೊಂಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ: ಚಂದ್ರವತಿ ಎಂಬ ಮಹಿಳೆ ಫರಂಗಿಪೇಟೆ ವಳಚ್ಚಿಲ್ ಬಳಿಯ 31 ವರ್ಷದ ಯುವಕನಿಗೆ ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವ ಆಸೆ ಹುಟ್ಟಿಸಿ ಹಣ ಪಡೆದಿದ್ದರು. ಅವರು ಕೆ ಎಂ ಎಫ್ ನ ಕಿರಿಯ ನಿರ್ದೇಶಕ ಹರೀಶ್ ಎಂಬವರನ್ನು ಪರಿಚಯಿಸಿ ಅವರು ಉದ್ಯೋಗ ತೆಗೆಸಿಕೊಡುತ್ತಾರೆ ಎಂದು ಭರವಸೆ ನೀಡಿ ಹಣ ಪಡೆದಿದ್ದರು. ನೇಮಕಾತಿ ಪತ್ರ ಸಿಕ್ಕಿದ ಬಳಿಕ ಈ ವ್ಯಕ್ತಿ ತನ್ನ 5 ಮಂದಿ ಸ್ನೇಹಿತರಿಗೂ ಕೆಲಸ ನೀಡುವಂತೆ ವಿನಂತಿಸಿ ಅವರಿಂದಲೂ ಹಣ ಕೊಡಿಸಿದ್ದಾನೆ. ಇದರ ಮಧ್ಯೆ ಉದ್ಯೋಗ ಕೊಡಲು ಸಾಧ್ಯವಾಗದೆ ಚಂದ್ರವತಿ ಇವರಿಂದ ಪಡೆದ ರೂ 10,70,000 ಹಣವನ್ನು ಚೆಕ್ ಮೂಲಕ ವಾಪಸ್​​ನೀಡಿದ್ದಳು. ಆದರೆ, ಆರೋಪಿ ರಾಮಪ್ರಸಾದ್ ರಾವ್ ಪಿ ಯಾನೆ ಹರೀಶ್​ಗೆ ಫೋನ್ ಮಾಡಿ ತಾನು ಉದ್ಯೋಗ ನೀಡುವುದಾಗಿ ಮತ್ತೆ ಅದೇ ವ್ಯಕ್ತಿಯಿಂದ ರೂ 1.5 ಲಕ್ಷ ಮತ್ತು ಆತನ ಗೆಳೆಯರಿಂದ ರೂ 12 ಲಕ್ಷ ಪಡೆದಿದ್ದನು. ಆದರೆ, ಹಣ ಪಡೆದ ಆತ ಉದ್ಯೋಗ ನೀಡಿರಲಿಲ್ಲ. ಕೊನೆಗೆ ವಂಚನೆಗೊಳಗಾದ ವ್ಯಕ್ತಿ ಪೊಲೀಸ್ ದೂರು ನೀಡಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ರಾಮಪ್ರಸಾದ್ ರಾವ್ ಪಿ ಯಾನೆ ಹರೀಶ್, ಹೇಮಂತ್, ಸುರೇಂದ್ರ ರೆಡ್ಡಿ, ದರ್ಶನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಐಫೋನ್, ಐಪ್ಯಾಡ್‌, ಮ್ಯಾಕ್‌ಗಳಲ್ಲಿ ಭದ್ರತಾ ದೋಷ: ಆ್ಯಪಲ್ ಎಚ್ಚರಿಕೆ

Next Post

ಅನಾರೋಗ್ಯ ಪೀಡಿತರಿಗಾಗಿ ಮಿಡಿಯುವ ರವಿ ಕಟಪಾಡಿ, ಹಾಲಿವುಡ್ ಚಿತ್ರದ ‘ಡೆಮೊನ್’ ವೇಷ ಧರಿಸಿ ಹಣ ಸಂಗ್ರಹಿಸಿ ದಾನ

Related Posts

ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ್ಟಿ ಬಂಧಿಸಿದ ಕಾರ್ಕಳ ಪೊಲೀಸರು,
ಕ್ರೈಮ್ ನ್ಯೂಸ್

ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ್ಟಿ ಬಂಧಿಸಿದ ಕಾರ್ಕಳ ಪೊಲೀಸರು,

April 12, 2026
72
ಕುಂಭಮೇಳದ ಸುಂದರಿ ಮೊನಾಲಿಸಾ ಅಪ್ರಾಪ್ತಳು ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಕ್ರೈಮ್ ನ್ಯೂಸ್

ಕುಂಭಮೇಳದ ಸುಂದರಿ ಮೊನಾಲಿಸಾ ಅಪ್ರಾಪ್ತಳು ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

April 12, 2026
50
Next Post
ಅನಾರೋಗ್ಯ ಪೀಡಿತರಿಗಾಗಿ ಮಿಡಿಯುವ ರವಿ ಕಟಪಾಡಿ, ಹಾಲಿವುಡ್ ಚಿತ್ರದ ‘ಡೆಮೊನ್’ ವೇಷ ಧರಿಸಿ ಹಣ ಸಂಗ್ರಹಿಸಿ ದಾನ

ಅನಾರೋಗ್ಯ ಪೀಡಿತರಿಗಾಗಿ ಮಿಡಿಯುವ ರವಿ ಕಟಪಾಡಿ, ಹಾಲಿವುಡ್ ಚಿತ್ರದ ‘ಡೆಮೊನ್’ ವೇಷ ಧರಿಸಿ ಹಣ ಸಂಗ್ರಹಿಸಿ ದಾನ

Discussion about this post

Recent News

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
14
ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

April 15, 2026
70
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

ಮಂಗಳೂರು : ಎಪ್ರಿಲ್ 18 ರಿಂದ 24 ರವರೆಗೆ ಪದವು ಕುಲಶೇಖರದ ಶನೈಶ್ವರ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.

April 16, 2026
ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

ಮಂಗಳೂರು :ಮಹಾಕಾಳಿಪಡ್ಪು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತ್ಯು

April 15, 2026
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯದ ಇಂಜಿನಿಯರ್ ಯುವತಿ ಮೃತ್ಯು

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯದ ಇಂಜಿನಿಯರ್ ಯುವತಿ ಮೃತ್ಯು

April 13, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d