• About us
  • Contact us
  • Disclaimer
Friday, May 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಡ್ರಗ್ ಡಿಸ್ಕವರಿ ಮತ್ತು ಡೆವಲಪ್‌ಮೆಂಟ್ ಕುರಿತು ಬೇಸಿಗೆ ಶಾಲಾ ಕಾರ್ಯಕ್ರಮ

Coastal Times by Coastal Times
July 1, 2024
in ರಾಜ್ಯ
ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಡ್ರಗ್ ಡಿಸ್ಕವರಿ ಮತ್ತು ಡೆವಲಪ್‌ಮೆಂಟ್ ಕುರಿತು ಬೇಸಿಗೆ ಶಾಲಾ ಕಾರ್ಯಕ್ರಮ
21
VIEWS
WhatsappTelegramShare on FacebookShare on Twitter

ಬೆಂಗಳೂರು: ಭಾರತದ ಡಾ. ರೆಡ್ಡೀಸ್ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್ ಮತ್ತು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಜೊತೆ ಸಹಯೋಗದಲ್ಲಿ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು 2024 ರ ಜೂನ್ 10 ರಿಂದ 21 ರ ವರೆಗೆ ‘ಡ್ರಗ್ ಡಿಸ್ಕವರಿ & ಡೆವಲಪ್‌ಮೆಂಟ್’ ಕುರಿತು ಎರಡು ವಾರಗಳ ಬೇಸಿಗೆ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವನ್ನು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯಲ್ಲಿ ಇನ್ನೋವೇಶನ್, ಸ್ಟ್ರಾಟಜಿ ಮತ್ತು ಸರ್ಕಾರಿ ವ್ಯವಹಾರಗಳ ಮುಖ್ಯಸ್ಥೆಯಾದ ಪ್ರೊಫೆಸರ್ ಶ್ವೇತವಲ್ಲಿ ರಘುವನ್ ಅವರು ನಿರ್ವಹಿಸಿದರು.

ಔಷಧ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಒಂದು ಸಮಗ್ರ ತಿಳಿವಳಿಕೆಯನ್ನು ಒದಗಿಸುವುದು ಮತ್ತು ಔಷಧ (ಔಷಧ ಪತ್ತೆ ಮತ್ತು ಅಭಿವೃದ್ಧಿ) ಕ್ಷೇತ್ರದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು, ಕೈಗೆಟುಕುವ ನಾವಿನ್ಯತೆಗಳ ಮೂಲಕ ಮಾನವ ಆರೋಗ್ಯವನ್ನು ಸುಧಾರಿಸಲು ಕೊಡುಗೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. 2024ರ ಕಾರ್ಯಕ್ರಮವನ್ನು ರಸಾಯನ ಶಾಖಾ ವಿಭಾಗ, ರಸಾಯನ ವಿಜ್ಞಾನ ಶಾಲೆಯು ಸಮನ್ವಯಿಸಿತು. ಭಾರತವು ವಿಶ್ವದ ಔಷಧ ಕೇಂದ್ರವಾಗಿದ್ದು, ಒಟ್ಟು ವಿಶ್ವ ಔಷಧ ರಫ್ತಿನಲ್ಲಿ ಶೇಕಡಾ 20 ರಷ್ಟು ಪಾಲು ಹೊಂದಿದ್ದು, , ವಿಶ್ವದಾದ್ಯಂತ ತಯಾರಿಸಲ್ಪಡುವ ಎಲ್ಲಾ ಲಸಿಕೆಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಲಸಿಕೆಗಳನ್ನು ಭಾರತವೇ ಪೂರೈಸುತ್ತಿದ್ದು, ವಿಶ್ವದ ಅತಿದೊಡ್ಡ ಲಸಿಕೆ ಪೂರೈಕೆದಾರ ಕೂಡ ಆಗಿದೆ. ಪರಿಣಾಮವಾಗಿ, ಈ ಕ್ಷೇತ್ರದಲ್ಲಿ ಉತ್ತಮ ಮಾರುಕಟ್ಟೆ ಇದೆ. ಆದಾಗ್ಯೂ, ವಿದ್ಯಾರ್ಥಿಗಳಿಗೆ ಔಷಧ (ಔಷಧ ಪತ್ತೆ ಮತ್ತು ಅಭಿವೃದ್ಧಿ) ಕ್ಷೇತ್ರದ ಒಟ್ಟು ಪ್ರಕ್ರಿಯೆಯ ಬಗ್ಗೆ ಪೂರ್ಣ ತಿಳಿವಳಿ ಇರುವುದಿಲ್ಲ; ಭಾರತದಲ್ಲಿನ ಕೋರ್ಸ್‌ಗಳು ಕೇವಲ ಒಂದು ಅಥವಾ ಎರಡು ತಾಂತ್ರಿಕ ಕೌಶಲ್ಯ ಅಭಿವೃದ್ಧಿಗೆ ಮಾತ್ರ ಕೇಂದ್ರೀಕೃತವಾಗಿವೆ. ಬೇಸಿಗೆ ಶಾಲಾ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಜಿನೋಮಿಕ್ಸ್ ಮತ್ತು ಪ್ರೊಟಿಯೋಮಿಕ್ಸ್ ಔಷಧ ಅಭಿವೃದ್ಧಿ ಮತ್ತು ವಿತರಣೆ, ಪೂರ್ವ-ನೈದಾನಿಕ ಮತ್ತು ಚಿಕಿತ್ಸಾ ಪ್ರಯೋಗಗಳು, ಉತ್ತಮ ಪ್ರಯೋಗಾಲಯ ಪದ್ಧತಿಗಳು, ಔಷಧಶಾಸ್ತ್ರದ ಆರ್ಥಿಕತೆ ಮತ್ತು ಔಷಧ ಪತ್ತೆಹಚ್ಚುವಿಕೆಗೆ ಸಂಬಂಧಿಸಿದ ನಿಯಂತ್ರಣಾತ್ಮಕ ಚೌಕಟ್ಟು ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಂತೆ ತೀವ್ರ ಮತ್ತು ಪರಸ್ಪರ ಕ್ರಿಯಾಶೀಲ ಅಧ್ಯಯನ ಅವಧಿಗಳನ್ನು ನೀಡಿತು. ಇದರ ಜೊತೆಗೆ, ಪರಿಣಾಮಕಾರಿ ಸಿ.ವಿ. ಬರೆಯುವುದು ಮತ್ತು ಪರಿಣಾಮಕಾರಿ ಸಂವಹನ ಕೌಶಲ್ಯಗಳ ಕುರಿತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳನ್ನು ಈ ಕಾರ್ಯಕ್ರಮವು ಒಳಗೊಂಡಿತ್ತು. ವಿದ್ಯಾರ್ಥಿಗಳು ಸೈನ್‌ಜೀನ್ ಇಂಟಲ್ ಪ್ರೈ. ಲಿ. ಮತ್ತು ಸಿ-ಕ್ಯಾಂಪ್‌ಗೆ ಕೈಗಾರಿಕಾ ಭೇಟಿಗಳಿಂದಲೂ ಪ್ರಯೋಜನ ಪಡೆದರು.

ಬೇಸಿಗೆ ಶಾಲೆಯ ಉಪನ್ಯಾಸಕರಲ್ಲಿ ಡಾ. ರಾಜಮನ್ನಾರ್ ಥೆನಾಟಿ, ಸನ್ ಫಾರ್ಮಾ ಅವರ ಆಡಳಿತ ನಿರ್ದೇಶಕ; ಡಾ| ನೀಲಿಮಾ ದುಬೆ, ಸಿಐಎಂಪಿಎಸ್‌ನ ಸಹ ಸಂಶೋಧನ ವಿಜ್ಞಾನಿ; ಐಐಟಿ ಕಾನ್ಪುರದ ಸಹಾಯಕ ಪ್ರಾಧ್ಯಾಪಕ ಡಾ| ಧರ್ಮರಾಜ ಅಳಿಮುತ್ತು; ಕರ್ನಾಟಕ ಹೈಕೋರ್ಟಿನ ನ್ಯಾಯವಾದಿ ಶ್ರೀ ಭೈರವ್ ಕುಟ್ಟೈಯ, ಡಾ. ಕಿರಣ್ ಬೆಟ್ಟದಾಪುರ, ಸೈನ್‌ಜೀನ್ ಇಂಟರ್‌ನ್ಯಾಷನಲ್ ಪ್ರೈ. ಲಿ. ಅವರ ಹಿರಿಯ ಸಂಶೋಧನ ತನಿಖೆಗಾರ, ಡಾ. ರೆಡ್ಡೀಸ್ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್‌ನ ಮುಖ್ಯ ವಿಜ್ಞಾನಿ ಡಾ| ಮನೋಜಿತ್ ಪಾಲ್, ಡಾ. ರೆಡ್ಡೀಸ್ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್‌ನ ಮುಖ್ಯ ವಿಜ್ಞಾನಿ ಡಾ. ಪರಿಮಲ್ ಮಿಶ್ರಾ, ಸೈನ್‌ಜೀನ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಜೀವ ವಿಶ್ಲೇಷಣ ಪ್ರಯೋಗಾಲಯಗಳ ಮುಖ್ಯಸ್ಥೆ ಡಾ. ಅಪರ್ಣಾ ಕಾಶಿನಾಥ್ ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರಾಕ್ಟೀಸ್ ಪ್ರೊಫೆಸರ್ ಪ್ರೊಫೆಸರ್ ಶ್ವೇತವಲ್ಲಿ ರಘುವನ್ ಅವರು ಸೇರಿದ್ದಾರೆ.

ಈ ಎರಡು ವಾರಗಳ ಬೇಸಿಗೆ ಕಾರ್ಯಕ್ರಮದ ಪೈಲಟ್ ಬ್ಯಾಚ್‌ಗೆ ಒಟ್ಟು 26 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಭಾಗವಹಿಸಿದವರಲ್ಲಿ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜೈನ್ ಡೀಮ್ಡ್ ಯುನಿವರ್ಸಿಟಿ, ಮೌಂಟ್ ಕಾರ್ಮೆಲ್ ಕಾಲೇಜು (ಸ್ವಾಯತ್ತ), ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇರಳ ವಿಶ್ವವಿದ್ಯಾನಿಲಯ ಕರಿಯಾವಟ್ಟಂ, ಐಐಎಸ್‌ಇಆರ್ ತಿರುಪತಿ ಮತ್ತು ಸೇಂಟ್ ಜೋಸೆಫ್ಸ್ ವಿಶ್ವಿವಿದ್ಯಾಲಯ, ಬೆಂಗಳೂರು ಮುಂತಾದ ವಿವಿಧ ಸಂಸ್ಥೆಗಳ ಬಿಎಸ್‌ಸಿ, ಎಂಎಸ್‌ಸಿ ಮತ್ತು ಸಂಶೋಧನಾ ವಿದ್ವಾಂಸರು ಸೇರಿದ್ದಾರೆ. “ಈ 11 ದಿನಗಳ ಬೇಸಿಗೆ ಶಾಲಾ ಕಾರ್ಯಕ್ರಮವು ಇಷ್ಟು ಪರಿಣಾಮಕಾರಿ ಎಂದು ಯಾರು ತಿಳಿದಿದ್ದರು?  ಔಷಧ ಪತ್ತೆಹಚ್ಚುವಿಕೆಯ ಬಗ್ಗೆ ಮಾತ್ರವಲ್ಲದೆ ನನ್ನ ಸಾಮರ್ಥ್ಯಗಳ ಬಗ್ಗೆಯೂ ಸಹ ನಾನು ಬಹಳಷ್ಟು ಕಲಿತಿದ್ದೇನೆ” ಎಂದು ಈ ಬೇಸಿಗೆ ಕಾರ್ಯಕ್ರಮದ ವಿದ್ಯಾರ್ಥಿನಿ ಶ್ರೀಮತಿ ವೈಜಯಂತಿ ಭಾರದ್ವಾಜ್ ಅವರು ಹೇಳುತ್ತಾರೆ.

21ನೇ ಜೂನ್ 2024 ರಂದು ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ರೆ| ಡಾ| ವಿಕ್ಟರ್ ಲೋಬೊ ಎಸ್‌ಜೆ, ಉಪ ಕುಲಪತಿಯವರು ಮತ್ತು ರೆ| ಫಾ| ಡೆನ್ಸಿಲ್ ಲೋಬೋ ಎಸ್‌ಜೆ, ಮಾಹಿತಿ ತಂತ್ರಜ್ಞಾನ ಶಾಲೆಯ ನಿರ್ದೇಶಕರು ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಸೈಂಟ್ ಜೋಸೆಫ್ ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಕಂಪ್ಯೂಟರ್ ವಿಜ್ಞಾನ ಸಂಘದ ಪದಗ್ರಹಣ ಸಮಾರಂಭ

Next Post

ಮಂಗಳೂರು: ಕಾಸ್ಕ್ ಶತಮಾನದ ಟ್ರಸ್ಟ್ ಮತ್ತು ದಕ್ಷಿಣ ಕನ್ನಡದ ಕಥೋಲಿಕ್ ಸಂಘಟನೆಯಿಂದ 316 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣ

Related Posts

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ
ರಾಜ್ಯ

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

April 30, 2026
17
ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,
ರಾಜ್ಯ

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಆರು ವಿದ್ಯಾರ್ಥಿಗಳು ಸೇರಿ ಏಳು ಸಾವು,

February 14, 2026
72
Next Post
ಮಂಗಳೂರು: ಕಾಸ್ಕ್ ಶತಮಾನದ ಟ್ರಸ್ಟ್ ಮತ್ತು ದಕ್ಷಿಣ ಕನ್ನಡದ ಕಥೋಲಿಕ್ ಸಂಘಟನೆಯಿಂದ 316 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣ

ಮಂಗಳೂರು: ಕಾಸ್ಕ್ ಶತಮಾನದ ಟ್ರಸ್ಟ್ ಮತ್ತು ದಕ್ಷಿಣ ಕನ್ನಡದ ಕಥೋಲಿಕ್ ಸಂಘಟನೆಯಿಂದ 316 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣ

Discussion about this post

Recent News

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

April 30, 2026
17
ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

April 30, 2026
82
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

April 30, 2026
ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

April 30, 2026
ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

ಮಂಗಳೂರು: ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ವಾಚ್ ಮನ್

April 29, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d