ದುಬೈ, ಸೆ 01: ‘ವಡಾ ಪಾವ್’ ಪ್ರಿಯರು ಹಲವೆಡೆ ರುಚಿರುಚಿಯ ವಡಾ ಪಾವ್ ಸವಿದಿರಬಹುದು. ಆದರೆ 22 ಕ್ಯಾರೆಟ್ ಗೋಲ್ಡ್ ಲೇಯರ್ಡ್ ವಡಾ ಪಾವ್ ಅನ್ನು ಖಂಡಿತಾ ಸವಿದಿರಲು ಸಾಧ್ಯವಿಲ್ಲ. ಇದನ್ನು ಸವಿಯಬೇಕೆಂದರೆ ನೀವು ದುಬೈನಲ್ಲಿರುವ ರೆಸ್ಟೋರೆಂಟ್ ಗೆ ಭೇಟಿ ನೀಡಬೇಕು.
ಹೌದು ಮುಂಬೈನ ಫೇಮಸ್ಸ್ ವಡಾಪಾವ್ ಸದ್ಯ ದುಬೈನಲ್ಲಿ ಸುದ್ದಿಯಲ್ಲಿದೆ. ಯಾಕೆಂದರೆ ಅಲ್ಲಿನ ರೆಸ್ಟೋರೆಂಟ್ ಒಂದು ವಿಶ್ವದ ಮೊದಲ 22-ಕ್ಯಾರೆಟ್ ಚಿನ್ನದ ಲೇಯರ್ಡ್ ವಡಾ ಪಾವ್ ಅನ್ನು ಪ್ರಾರಂಭಿಸಿದೆ.
ಕೇವಲ ಬಂಗಾರದ ಲೇಪನವಲ್ಲ, ವಡಾ ಪಾವ್ ನ ರುಚಿಯೂ ವಿಭಿನ್ನವಾಗಿದ್ದು . ವಡಾವನ್ನು ಚೀಸ್ ಮತ್ತು ಆಮದು ಮಾಡಿದ ಫ್ರೆಂಚ್ ಟ್ರಫಲ್ ಬೆಣ್ಣೆಯಿಂದ ತುಂಬಿಸಲಾಗುತ್ತದೆ ಮತ್ತು ಬ್ರೆಡ್ ಮಿಂಟ್ ಮೇಯನೇಸ್ ಅದ್ದಿಡಲಾಗುತ್ತದೆ. ಬಾಯಲ್ಲಿ ನೀರೂರಿಸುವ ವಡಾವನ್ನು (ಸುವಾಸನೆಯ ಆಲೂಗಡ್ಡೆ ಡಂಪ್ಲಿಂಗ್) ಪ್ರೀಮಿಯಂ ಗುಣಮಟ್ಟದ ಫ್ರೆಂಚ್ ಆಮದು 22 ಕ್ಯಾರೆಟ್ ಚಿನ್ನದ ಎಲೆಗಳಿಂದ ಮುಚ್ಚಲಾಗುತ್ತದೆ ಎಂದು ರೆಸ್ಟೋರೆಂಟ್ ಹೇಳಿದೆ.
22 ಕ್ಯಾರೆಟ್ ಗೋಲ್ಡ್ ವಡಾ ಪಾವ್ ನೈಟ್ರೋಜನ್ ಬೇಸ್‌ನೊಂದಿಗೆ ಮರದ ಕೆತ್ತಿದ ಪೆಟ್ಟಿಗೆಯಲ್ಲಿ ನೀಡಲಾಗುತ್ತಿದ್ದು ಇದು ಸಿಹಿ ಆಲೂಗಡ್ಡೆ ಫ್ರೈಸ್ ಮತ್ತು ಪುದೀನ ನಿಂಬೆ ಪಾನಕದೊಂದಿಗೆ ಸರ್ವ್ ಮಾಡಲಾಗುತ್ತದೆ ಎಂದು ರೆಸ್ಟೋರೆಂಟ್ ಹೇಳಿದೆ.
ಇದರಮಾರಾಟ ಬೆಲೆಯೂ 99 ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್ (ಸುಮಾರು ₹ 2,000) ಆಗಿದೆ. ಈ ಹಿಂದೆ ದುಬೈನ ಇದೇ ರೆಸ್ಟೋರೆಂಟ್ 24 ಕ್ಯಾರೆಟ್ ಚಿನ್ನದ ಬರ್ಗರ್‌ಗಳನ್ನು ಬಿಡುಗಡೆ ಮಾಡಿತ್ತು.
ಚಿನ್ನ ಲೇಪಿತ ಹಾಳೆಯನ್ನು ಆಲೂಬೊಂಡಾದ ಮೇಲೆ ಅಂಟಿಸಿ ವಿಶಿಷ್ಠವಾಗಿ ಇದನ್ನು ಮಾರಾಟ ಮಾಡಲಾಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದೆ.
#Gold_Vada_Paav This is what's wrong with the world: too many rebels without a cause. pic.twitter.com/JKeKsgOLEo
— Masarat Daud (@masarat) August 30, 2021