ಮಂಗಳೂರು, ಸೆ 01: ಮಂಗಳೂರು ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಏರ್ಲೈನ್ ಸಂಸ್ಥೆಗಳಿಗೆ ಬೇಕಾಗುವ ಏವಿಯೇಷನ್ ಟರ್ಬೈನ್ ಪ್ಯೂಯೆಲ್ ಮೇಲೆ ಹೇಳಲಾಗುತ್ತಿರುವ ಶೇಕಡಾ 28ರಷ್ಟು ಇರುವ ದುಬಾರಿ ಮೌಲ್ಯವರ್ಧಿತ ತೆರಿಗೆ ಮಾರಾಟ ತೆರಿಗೆಯನ್ನು ಶೇಕಡಾ ಒಂದರಷ್ಟು ಇಳಿಸಬೇಕು ಎಂದು ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕೇರಳದಲ್ಲಿ ಇಟಿಎಫ್ ಮೇಲೆ ಶೇಕಡ ಒಂದರಷ್ಟು ವ್ಯಾಟ್ ವಿಧಿಸಿದರೆ ಮಂಗಳೂರಿನಲ್ಲಿ ಶೇಕಡ 28ರಷ್ಟು ವ್ಯಾಟ್ ಇದೆ. ಹೀಗಾಗಿ ನೆರೆಯ ರಾಜ್ಯದ ವಿಮಾನ ನಿಲ್ದಾಣಗಳಿಗೆ ಹೆಚ್ಚು ಪ್ರಯೋಜನವಾಗಲಿದೆ ಮಂಗಳೂರಿಗೆ ನಷ್ಟವಾಗುತ್ತಿದೆ ಇದರಿಂದ ಹೊಸ ಏರ್ಲೈನ್ಸ್ ಗಳು ಮಂಗಳೂರಿಗೆ ಬರುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಕೆಪಿಸಿಸಿ ಅಧ್ಯಕ್ಷ ಮನವಿ ಮಾಡಿದ್ದಾರೆ.