ಬೆಂಗಳೂರು: ಕನ್ನಡದ ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಬಳಗೋಡಿನ ದೊಡ್ಡಬೆಲೆಯ ಸನ್ ವರ್ತ್ ಅಪಾರ್ಟ್ ಮೆಂಟ್ ನಲ್ಲಿ ನಟಿಯ ಶವದ ಜೊತೆ ಡೆತ್ನೋಟ್ ಸಹ ಸಿಕ್ಕಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದ್ದರೂ ಹಲವು ಅನುಮಾನಗಳು ಪ್ರಕರಣದ ಸುತ್ತ ಸುತ್ತಿಕೊಂಡಿವೆ. ಶವದ ಬಳಿ ಪೊಲೀಸರಿಗೆ ದೊರೆತ ಮೊದಲ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ.. ನನ್ನನ್ನು ಕ್ಷಮಿಸಿ ಅಪ್ಪ-ಅಮ್ಮ ಎಂದು ಡೆತ್ ನೋಟ್ ನಲ್ಲಿ ಸವಿ ಮಾದಪ್ಪ ಕ್ಷಮೆಯಾಚಿಸಿದ್ದಾರೆ.
ಕನ್ನಡ, ಇಂಗ್ಲಿಷ್ ಭಾಷೆ ಮಿಶ್ರಿತ ಡೆತ್ ನೋಟ್ ಬರೆಯಲಾಗಿದೆ. ಡೆತ್ ನೋಟ್ ನಲ್ಲಿ ನನ್ನ ಕೈಲಿ ಆಗ್ತಿಲ್ಲ, ಆದ್ರೂ ಕ್ಷಮಿಸಿ ಅಂತಾ ಉಲ್ಲೇಖವಿದೆ. ಸಾಯಲು ಇಷ್ಟವಿಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಂಡಿರೋ ರೀತಿ ಡೆತ್ ನೋಟ್ ಬರೆದಂತಿದೆ. ಈ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ನಟಿ ಸಾವು ಕೊಲೆಯೋ ಆತ್ಮಹತ್ಯೆಯೋ ಅನ್ನೋದ್ರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ರೆ ಕತ್ತಿನ ಭಾಗದಲ್ಲಿ ಗಾಯಗಳಾಗಿರುತ್ವೆ..ಸಾವನ್ನಪ್ಪಿರೋರ ಮುಖದ ಮೇಲೆ ಕಪ್ಪು ಕಲೆ, ನಾಲಿಗೆ ಹೊರ ಬಿದ್ದಿರೋದು, ಬಾಯಿ ಓಪನ್ ಆಗಿರುತ್ತೆ. ಆದರೆ ಸವಿ ಮಾದಪ್ಪ ಶವ ಈ ರೀತಿ ಕಾಣುತ್ತಿಲ್ಲ.
ನಟಿ ಲಿಪ್ ಸ್ಟಿಪ್ ಬಣ್ಣ ಕೊಂಚವೂ ಮಾಸಿಲ್ಲ. ಹೊರ ಹೋಗಲು ರೆಡಿಯಾಗಿರುವಂತೆ ಜಿನ್ಸ್ ಪ್ಯಾಂಟ್, ಟಿಶರ್ಟ್ ಧರಿಸಿದ್ದಾರೆ. ಕಾಲಿನ ಮೇಲೆ ಟ್ಯಾಟು ಇದೆ. ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವಂತೆ ಕ್ರೈಂ ಸೀನ್ ಕಾಣುತ್ತಿಲ್ಲ ಎಂದು ಶಂಕೆ ವ್ಯಕ್ತವಾಗಿದೆ. ಡೆತ್ ನೋಟ್ ಮೇಲೂ ಪೊಲೀಸರ ಅನುಮಾನ ವ್ಯಕ್ತಪಡಿಸಿದ್ದಾರೆ. ಡೆತ್ ನೋಟ್ ನಲ್ಲಿ ಎರಡು ಮೂರು ಭಾಷೆ ಮಿಕ್ಸ್ ಬರೆಯಲಾಗಿದೆ. ಕಳೆದ 4 ದಿನಗಳಿಂದ ದಿನವೊಂದಕ್ಕೆ ಒಂದು ಎಂಬತೆ ಒಟ್ಟು 5 ಪುಟಗಳಲ್ಲಿ ಬರೆದಿರುವ ಡೆತರ್ನೋಟ್ ಸಿಕ್ಕಿದೆ. 27 , 28, 29, 30 ತಾರೀಖು ಡೆತ್ ನೋಟ್ ಬರೆಯಲಾಗಿದೆ.
ಈ ಎಲ್ಲಾ ಅನುಮಾನಗಳ ಹಿನ್ನೆಲೆಯಲ್ಲಿ ಕನ್ನಡದ ಕಿರುತೆರೆ ನಟಿ ಸವಿ ಮಾದಪ್ಪ ಸಾವು ಆತ್ಮಹತ್ಯೆಯೋ? ಕೊಲೆಯೋ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ಮೂಲದ ನಟಿ ಬೆಂಗಳೂರಿನ ಕುಂಬಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದಾರೆ. ಮೃತ ನಟಿ ಹಲವಾರು ಧಾರಾವಾಹಿಗಳು ಸೇರಿದಂತೆ ಚೌಕಟ್ಟು, ಫನ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.