ಸೋಮವಾರಪೇಟೆ: ನಾಗಮಂಗಲದಲ್ಲಿ ಭೀಕರ ರಸ್ತೆ ಅಪಘಾತ.ಬಸ್ ಮತ್ತು ಶಿಫ್ಟ್ ಕಾರು ನಡುವೆ ಡಿಕ್ಕಿ.ಸ್ಥಳದಲ್ಲೇ ಮೂವರ ದುರ್ಮರಣ, ಐವರು ಗಂಭೀರ , ಕೆಂಪನಕೊಪ್ಪಲು ಗೇಟ್ ಬಳಿ ಘಟನೆ.ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೆಂಪನಕೊಪ್ಪಲು ಬೆಳ್ಳೂರು
ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಮೈಸೂರ್ ಕಡೆಗೆ ಹೊಗುತ್ತಿದ್ದ ಕಾರು ನಡುವೆ ಅಪಘಾತ.ಕಾರಿನಲ್ಲಿ ಇದ್ದ ಕೊಡಗು ಮೂಲದ ಮೂವರು ಸಾವು.ಕಾರಿನಲ್ಲಿದ್ದ ನಾಲ್ಕು ಮಂದಿಯಲ್ಲಿ ಮೂವರ ಸಾವು.ಕಾರಿನಲ್ಲಿದ್ದ ಓರ್ವ ಯುವತಿಯ ಸ್ಥಿತಿ ಗಂಭೀರ.ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲು.ನಾಗಮಂಗಲ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
ಸೋಮವಾರಪೇಟೆ ಮೂಲದ ಸುದೀಪ್(35), ಶ್ರೀಜಾ(30) ಹಾಗೂ ತಂಗಮ್ಮ (55) ಮೃತ ದುರ್ದೈವಿಗಳು .ಬಸ್ ಚಾಲಕ ಹಾಗೂ ಬಸ್ ನಲ್ಲಿದ್ದ ನಾಲ್ವರಿಗೆ ಗಾಯ. ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೋಮವಾರಪೇಟೆ ಸಮೀಪದ ಕುಂದಳ್ಳಿ ಗ್ರಾಮದವರು.
ಇಂದು ಅಮಾವಾಸ್ಯೆಯಾದ ಹಿನ್ನಲೆಯಲ್ಲಿ ನವ ವಿವಾಹಿತರು ಕುಟುಂಬ ಸಮೇತರಾಗಿ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿದ್ದರು. ಪೂಜೆ ಮುಗಿಸಿ ವಾಪಸ್ಸು ಸೋಮವಾರ ಪೇಟೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಕೆಂಪನಕೊಪ್ಪಲು ಬೆಳ್ಳೂರು ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಮೈಸೂರು ಮಾರ್ಗವಾಗಿ ಸೋಮವಾರ ಪೇಟೆ ಕಡೆಗೆ ಹೊಗುತ್ತಿದ್ದ ಕಾರು ಪರಸ್ಪರ ಕೆಂಪನಕೊಪ್ಪಲು ಗೇಟ್ ಬಳಿ ಡಿಕ್ಕಿ ಹೊಡೆದುಕೊಂಡು ಈ ಭೀಕರ ಅಪಘಾತಕ್ಕೆ ಕಾರಣವಾಗಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಮಂಗಲ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದೂ ಪ್ರಕರಣ ದಾಖಲಾಗಿದೆ.