ಮಂಗಳೂರು: ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ಮುಖ್ಯ ನರ್ಸಿಂಗ್ ಅಧಿಕಾರಿ ಜಾನೆಟ್ ಡಿಸೋಜ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಅಧಿಕಾರಿ ಧನ್ಯಾ ದೇವಾಸಿಯಾ ಅವರ ಅಧಿಕಾರ ಸ್ವೀಕಾರ ಸಮಾರಂಭ ಶನಿವಾರ ನಗರದ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಇಬ್ಬರನ್ನೂ ಅಭಿನಂದಿಸಿದರು.
ಜಾನೆಟ್ ಡಿಸೋಜ ಅವರು ಸಂಸ್ಥೆಯಲ್ಲಿ 1990 ರ ಸೆಪ್ಟಂಬರ್‌ನಿಂದ 2010ರ ಏಪ್ರಿಲ್‌ವರೆಗೆ ಹಾಗೂ 2013ರ ಏಪ್ರಿಲ್‌ನಿಂದ ಈವರೆಗೆ ಸಂಸ್ಥೆಯಲ್ಲಿ ಒಟ್ಟು 28 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸ್ಟಾಫ್ ನರ್ಸ್, ವಾರ್ಡ್ ಸೂಪರ್‌ವೈಸರ್, ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿ, ಸಹಾಯಕ ನರ್ಸಿಂಗ್ ಸೂಪರ್ ವೈಸರ್ ಆಗಿ, ಎಂಸ್ಸಿ ನರ್ಸಿಂಗ್ ಅಧ್ಯಯನದ ಬಳಿಕ ಉಪನ್ಯಾಸಕರು, ನರ್ಸಿಂಗ್ ಸೂಪರಿಂಟೆಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕಿ, ಮುಖ್ಯ ನರ್ಸಿಂಗ್ ಅಧಿಕಾರಿಯಾಗಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಬೆಂಗಳೂರು ಸೊಲ್ಲೂರಿನ ಮದರ್ ಸೂಪೀರಿಯರ್ ಆಗಿ ಮುಂದಿನ ಪಯಣ ಬೆಳೆಸುತ್ತಿದ್ದಾರೆ ಎಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರುಡಾಲ್ಫ್ ರವಿ ಡೇಸಾ ತಿಳಿಸಿದರು.
ಡಾ. ಉದಯ ಕುಮಾರ್ ಮಾತನಾಡಿದರು. ಜಾನೆಟ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ನರ್ಸಿಂಗ್ ಸೂಪರಿಂಟೆಂಡೆಂಟ್ ಹೆಲೆನ್ ಲೋಬೊ ಸನ್ಮಾನ ಪತ್ರ ವಾಚಿಸಿದರು.
ಸಂಸ್ಥೆಯ ಮುಖ್ಯ ನರ್ಸಿಂಗ್ ಅಧಿಕಾರಿ ಆಗಿ ಧನ್ಯಾ ದೇವಾಸಿಯ ಇದೇ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದರು. ಸಿಸ್ಟರ್ಸ್ ಆಫ್ ಚಾರಿಟಿಯ ಭಗಿನಿ ಧನ್ಯಾ ದೇವಾಸಿಯಾ ಅವರು ನರ್ಸಿಂಗ್ ಕ್ಷೇತ್ರದಲ್ಲಿ 17 ವರ್ಷಗಳ ಸೇವಾನುಭವವನ್ನು ಹೊಂದಿದ್ದಾರೆ. ಅವರು ಜಿಎನ್‌ಎಂ, ಪಿಬಿಬಿಎಸ್‌ಸಿ ಹಾಗೂ ಎಂಎಸ್ಸಿ ನರ್ಸಿಂಗ್ ಪದವೀಧರರಾಗಿದ್ದು, ಸದ್ಯ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾರೆ. ಅಥೆನಾ ನರ್ಸಿಂಗ್ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರತಿನಿಧಿಗಳು ಉಪಸ್ಥಿತರಿದ್ದರು. ನರ್ಸಿಂಗ್ ಸೂಪರ್‌ವೈಸರ್ ಮಾಲಿನಿ ವಂದಿಸಿದರು. ನರ್ಸಿಂಗ್ ವಿಭಾಗದ ರೆನಿಟಾ ಲಸ್ರಾದೋ ಮತ್ತು ಕ್ಯಾರಲ್ ಕ್ವೀನಾ ಡಿಸೋಜ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post