ಸುಬ್ರಹ್ಮಣ್ಯ: ತವರು ಮನೆಯಿಂದ ಸುಬ್ರಹ್ಮಣ್ಯದಲ್ಲಿರುವ ಹಲ್ಲಿನ ಚಿಕಿತ್ಸಾಲಯಕ್ಕೆಂದು ಹೋದ ಕಡಬದ ವಿವಾಹಿತೆ ಮಹಿಳೆ ವಾಪಸ್ಸು ಮನೆಗೆ ಬಾರದೇ, ನಾಪತ್ತೆಯಾದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ದೇವಸ್ಯ ಮನೆ ಮಾಯಿಲಪ್ಪ ಗೌಡ ಅವರ ಪುತ್ರಿ ತೀರ್ಥಲತಾ ಕಾಣೆಯಾದ ವಿವಾಹಿತೆ.
ಬಿಳಿನೆಲೆ ಗ್ರಾಮದ ದೇವಸ್ಯ ಮಾಯಿಲಪ್ಪ ಗೌಡ ಎಂಬವರ ಪುತ್ರಿ ತೀರ್ಥಲತಾ (23) ನಾಪತ್ತೆಯಾದ ಮಹಿಳೆ. ತೀರ್ಥಲತಾ ಅವರನ್ನು ಗದಗ ಜಿಲ್ಲೆಯ ಮುಂಡರಗಿಗೆ ಮದುವೆ ಮಾಡಿ ಕೊಡಲಾಗಿದ್ದು, ಅವರಿಗೆ ಗಂಡು ಮಗು ಇದೆ. ಬಿಳಿನೆಲೆ ಮನೆಯಲ್ಲಿದ್ದ ಅವರು ಜು.31 ರಂದು ಮಧ್ಯಾಹ್ನ ಸುಬ್ರಹ್ಮಣ್ಯದ ಡೆಂಟಲ್ ಕ್ಲಿನಿಕ್ ಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಬಂದಿದ್ದೂ ಸಂಜೆಯಾದರೂ ಮನೆಗೆ ಹಿಂತಿರುಗಿರುವುದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಮಹಿಳೆಯ ತಂದೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯ ಪೊಲೀಸರು ಸಾರ್ವಜನಿಕ ಪ್ರಕಟನೆ ಹೊರಡಿಸಿ ಮಾಹಿತಿ ಸಿಕ್ಕಲ್ಲಿ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ.
Discussion about this post