ಮಂಗಳೂರು,ಮೇ 3; ರಾಜ್ಯ ಚುನಾವಣೆ ಬೆನ್ನಲ್ಲೆ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತಬೇಟೆ ನಡೆಸಿದರು. ಮೂಡಬಿದಿರೆಯ ಮುಲ್ಕಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಜನರತ್ತ ಕೈಬೀಸಿದ ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ಘೋಷಣೆಗಳು ಮೊಳಗಿದವು. ಈ ವೇಳೆ ಕೇಸರಿ ಶಾಲು ಹೊದಿಸಿ, ಸ್ಮರಣಿಕೆ, ಗಣಪತಿ ವಿಗ್ರಹ, ಕೃಷ್ಣನ ವಿಗ್ರಹ, ನರಸಿಂಹನ ಪ್ರಸಾದ ನೀಡಿ ಮೋದಿ ಅವರನ್ನು ಗೌರವಿಸಲಾಯಿತು. ರಾಜ್ಯದಲ್ಲಿ ಸುಸ್ಥಿರ ಸರಕಾರ, ದೇಶದಲ್ಲಿ ಕರ್ನಾಟಕ ರಾಜ್ಯ ವನ್ನು ನಂಬರ್ ಒನ್ ಸ್ಥಾನಕ್ಕೆ ಏರಿಸುವುದು ನಮ್ಮ ಗುರಿ ಅದಕ್ಕಾಗಿ ಬಿಜೆಪಿ ಯನ್ನು ಬೆಂಬಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಯವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಬಂದಾಗ ಕನ್ನಡದಲ್ಲಿ ಭಾಷಣ ಪ್ರಾರಂಭಿಸುವ ಮೋದಿ ಅವರು ಇಂದು ತುಳು ಭಾಷೆಯಲ್ಲಿ ಮಾತು ಪ್ರಾರಂಭಿಸಿ ಗಮನಸೆಳೆದಿದ್ದಾರೆ. “ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳು ಅಪ್ಪೆ ಜೋಕುಲೆಗ್ ಸೊಲ್ಮೆಲು” ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಭಜರಂಗಬಲಿಗೆ ಜೈ ಎನ್ನುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡಿದರು.

ಮಾತ್ರವಲ್ಲದೆ ‘ರಾಜ್ಯ ಉಗ್ರ ಚಟುವಟಿಕೆಗಳಿಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ದೇಶದ್ರೋಹಿ ಚಟುವಟಿಕೆ ಮಾಡೋರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಮಾತ್ರವಲ್ಲದೆ ನಮ್ಮ ಸೈನಿಕರನ್ನು ಕಾಂಗ್ರೆಸ್ ಅವಮಾನಿಸುವ ಕೆಲ ಮಾಡುತ್ತದೆ. ಇದು ನಿಜಕ್ಕೂ ಖಂಡನೀಯ’ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ‘ಕಾಂಗ್ರೆಸ್ ಶಾಂತಿಯ ಶತ್ರು, ಅಭಿವೃದ್ಧಿಯ ಶತ್ರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ವನಾಶವಾಗುತ್ತದೆ. ಕಾಂಗ್ರೆಸ್ ರಿವರ್ಸ್ ಗೇರ್ ನಲ್ಲಿ ಚಲಿಸುತ್ತದೆ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಬಗ್ಗೆ ಎಚ್ಚರಿಕೆಯಿಂದ ಮುನ್ನಡೆಯುವಂತೆ’ ಮೋದಿ ಸೂಚಿಸಿದರು.
ಕಾಂಗ್ರೆಸ್ ಪ್ರತಿ ಯೋಜನೆಯಲ್ಲಿ ಶೇ.85 ಕಮಿಷನ್ ಪಡೆಯುತ್ತಿದೆ. ಕಾಂಗ್ರೆಸ್ ಕರಾಳ ಮುಖ ಜನ ನೋಡಿದ್ದಾರೆ. ಶಿಕ್ಷಣದ ಅಭಾವ ಇತ್ತು. ನೀರಿನ ಸಮಸ್ಯೆ ಇತ್ತು. ಮಹಿಳೆಯರು ಕೆಲಸ ಮಾಡಲು ಕಷ್ಟವಾಗಿತ್ತು. ಇದೆಲ್ಲಾ ಸಮಸ್ಯೆಗಳನ್ನು ಬಿಜೆಪಿ ತೊಡೆದು ಹಾಕುವಂತ ಕೆಲಸ ಮಾಡುತ್ತಿದೆ. ಹಿಂದೂಸ್ತಾನ್ ನಲ್ಲಿ ಕರ್ನಾಟಕದ ಹೆಸರು ಹೇಳಬೇಕು ಅಂದ್ರೆ, ಎಲ್ಲಾ ರಾಜ್ಯಲ್ಲಿ ಜೈ ಕರ್ನಾಟಕ ಎನ್ನಬೇಕು ಅಂದರೆ, ಪೂರ್ಣ ಬಹುಮತ ಸರ್ಕಾರ ಬೇಕು. ನೀವು ಅದನ್ನು ಮಾಡಬೇಕಿದೆ. ಶಾಂತಿಯಿಂದ ರಾಜ್ಯ ನಡೆಯುತ್ತಿದೆ. ಇದು ಮತ್ತೆ ರಿವರ್ಸ್ ಗೇರ್ ಹೋಗಬಾರದು.
ರಾಣಿ ಅಬ್ಬಕ್ಕ ಬಗ್ಗೆ ಪ್ರಸ್ತಾಪ ಮಾಡಿದರು. ದೇಶದ ಪ್ರತಿಯೊಬ್ಬ ಮಹಿಳೆಯರಲ್ಲೂ ಅಬ್ಬಕ್ಕನಂತೆ ಆಗಬೇಕು. ನಾವು ಬಡವರಿಗೆ ಮನೆ ನಿರ್ಮಿಸಿ ಕೊಡುತ್ತಿದ್ದೇವೆ. ಮಹಿಳಾ ಶಸಕ್ತೀಕರಣಕ್ಕೆ ಯೋಜನೆ ಜಾರಿಗೊಳಿಸಿದ್ದೇವೆ. ನಿಮ್ಮ ಒಂದು ಓಟು ಭಾರತದ ಶಕ್ತಿಯನ್ನು ತೋರಿಸುತ್ತದೆ. ಭಾರತದ ಬಗ್ಗೆ ಜೈಕಾರ ಮೊಳಗಲು ನಿಮ್ಮ ಮತ ಕಾರಣ ಎಂದು ಮೋದಿ ಹೇಳಿದರು.

ಮೀನುಗಾರರ ಅಭಿವೃದ್ಧಿ ನಮಗೆ ಮುಖ್ಯ ಆಗಿದೆ. ಮೀನುಗಾರರ ಕಲ್ಯಾಣಕ್ಕಾಗಿ ಹೊಸ ಯೋಜನೆ ಆರಂಭಿಸಿದ್ದೇವೆ. ಉಡುಪಿಯಲ್ಲಿರುವ ಮೀನುಗಾರರಿಗೆ ಬಿಜೆಪಿ ಸಹಕಾರ ಮಾಡಲಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ, ಕರ್ನಾಟಟಕವನ್ನು ಬರ್ಬಾದ್ ಮಾಡಿದೆ. ಅತಂತ್ರ ಮತ ಬಂದರೆ ಜನರ ಬದುಕು ಅಂತತ್ರವಾಗಲಿದೆ. ಹೀಗಾಗಿ ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಬೇಕಿದೆ. ಶಾಂತಿ ಕದಡುವ ಸರ್ಕಾರ ಅಧಿಕಾರಕ್ಕೆ ಬರಬಾರದು. ರಾಜ್ಯದ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು. ಎಲ್ಲರೂ ಬಿಜೆಪಿಗೆ ಮತ ನೀಡಿ ಶಕ್ತಿ ಶಾಲಿ ಸರ್ಕಾರವನ್ನು ತನ್ನಿ ಎಂದರು.
ಸಮಾರಂಭದ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸರ್ಕಾರದ ಸಚಿವೆ ಸಂಸದೆ ಶೋಬಾ ಕರಂದ್ಲಾಜೆ, ಸಚಿವ ಸುನಿಲ್ ಕುಮಾರ್, ಶಾಸಕ ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್,ವೇದವ್ಯಾಸ ಕಾಮತ್,ಹರೀಶ್ ಪೂಂಜಾ,ಪ್ರತಾಪ್ ಸಿಂಹ ನಾಯಕ್ ,ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಹಾಗೂ ಉಭಯ ಜಿಲ್ಲೆ ಗಳ 13 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಳಾದ ಭಾಗೀರಥಿ ಸುಳ್ಯ, ಆಶಾ ತಿಮ್ಮಪ್ಪ ಪುತ್ತೂರು, ಸತೀಶ್ ಕುಂಪಲ ಮಂಗಳೂರು, ಯಶ್ಫಾಲ್ ಸುವರ್ಣ, ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post