• About us
  • Contact us
  • Disclaimer
Saturday, September 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ವನಾಶ, ‘ಕಾಂಗ್ರೆಸ್ ಶಾಂತಿಯ ಶತ್ರು, ಅಭಿವೃದ್ಧಿಯ ಶತ್ರು’- ಮಂಗಳೂರಿನಲ್ಲಿ ಮೋದಿ ವಾಗ್ದಾಳಿ

Coastal Times by Coastal Times
May 3, 2023
in ಕರಾವಳಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ವನಾಶ, ‘ಕಾಂಗ್ರೆಸ್ ಶಾಂತಿಯ ಶತ್ರು, ಅಭಿವೃದ್ಧಿಯ ಶತ್ರು’- ಮಂಗಳೂರಿನಲ್ಲಿ ಮೋದಿ ವಾಗ್ದಾಳಿ
68
VIEWS
WhatsappTelegramShare on FacebookShare on Twitter

ಮಂಗಳೂರು,ಮೇ 3; ರಾಜ್ಯ ಚುನಾವಣೆ ಬೆನ್ನಲ್ಲೆ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತಬೇಟೆ ನಡೆಸಿದರು. ಮೂಡಬಿದಿರೆಯ ಮುಲ್ಕಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಜನರತ್ತ ಕೈಬೀಸಿದ ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ಘೋಷಣೆಗಳು ಮೊಳಗಿದವು. ಈ ವೇಳೆ ಕೇಸರಿ ಶಾಲು ಹೊದಿಸಿ, ಸ್ಮರಣಿಕೆ, ಗಣಪತಿ ವಿಗ್ರಹ, ಕೃಷ್ಣನ ವಿಗ್ರಹ, ನರಸಿಂಹನ ಪ್ರಸಾದ ನೀಡಿ ಮೋದಿ ಅವರನ್ನು ಗೌರವಿಸಲಾಯಿತು. ರಾಜ್ಯದಲ್ಲಿ ಸುಸ್ಥಿರ ಸರಕಾರ, ದೇಶದಲ್ಲಿ  ಕರ್ನಾಟಕ ರಾಜ್ಯ ವನ್ನು ನಂಬರ್ ಒನ್ ಸ್ಥಾನಕ್ಕೆ ಏರಿಸುವುದು ನಮ್ಮ ಗುರಿ ಅದಕ್ಕಾಗಿ ಬಿಜೆಪಿ ಯನ್ನು ಬೆಂಬಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಯವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಕರ್ನಾಟಕದಲ್ಲಿ ಬಂದಾಗ ಕನ್ನಡದಲ್ಲಿ ಭಾಷಣ ಪ್ರಾರಂಭಿಸುವ ಮೋದಿ ಅವರು ಇಂದು ತುಳು ಭಾಷೆಯಲ್ಲಿ ಮಾತು ಪ್ರಾರಂಭಿಸಿ ಗಮನಸೆಳೆದಿದ್ದಾರೆ. “ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳು ಅಪ್ಪೆ ಜೋಕುಲೆಗ್ ಸೊಲ್ಮೆಲು” ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಭಜರಂಗಬಲಿಗೆ ಜೈ ಎನ್ನುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡಿದರು.

ಮಾತ್ರವಲ್ಲದೆ ‘ರಾಜ್ಯ ಉಗ್ರ ಚಟುವಟಿಕೆಗಳಿಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ದೇಶದ್ರೋಹಿ ಚಟುವಟಿಕೆ ಮಾಡೋರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಮಾತ್ರವಲ್ಲದೆ ನಮ್ಮ ಸೈನಿಕರನ್ನು ಕಾಂಗ್ರೆಸ್ ಅವಮಾನಿಸುವ ಕೆಲ ಮಾಡುತ್ತದೆ. ಇದು ನಿಜಕ್ಕೂ ಖಂಡನೀಯ’ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ‘ಕಾಂಗ್ರೆಸ್ ಶಾಂತಿಯ ಶತ್ರು, ಅಭಿವೃದ್ಧಿಯ ಶತ್ರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ವನಾಶವಾಗುತ್ತದೆ. ಕಾಂಗ್ರೆಸ್ ರಿವರ್ಸ್ ಗೇರ್ ನಲ್ಲಿ ಚಲಿಸುತ್ತದೆ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಬಗ್ಗೆ ಎಚ್ಚರಿಕೆಯಿಂದ ಮುನ್ನಡೆಯುವಂತೆ’ ಮೋದಿ ಸೂಚಿಸಿದರು.

ಕಾಂಗ್ರೆಸ್ ಪ್ರತಿ ಯೋಜನೆಯಲ್ಲಿ ಶೇ.85 ಕಮಿಷನ್ ಪಡೆಯುತ್ತಿದೆ. ಕಾಂಗ್ರೆಸ್ ಕರಾಳ ಮುಖ ಜನ ನೋಡಿದ್ದಾರೆ. ಶಿಕ್ಷಣದ ಅಭಾವ ಇತ್ತು. ನೀರಿನ ಸಮಸ್ಯೆ ಇತ್ತು. ಮಹಿಳೆಯರು ಕೆಲಸ ಮಾಡಲು ಕಷ್ಟವಾಗಿತ್ತು. ಇದೆಲ್ಲಾ ಸಮಸ್ಯೆಗಳನ್ನು ಬಿಜೆಪಿ ತೊಡೆದು ಹಾಕುವಂತ ಕೆಲಸ ಮಾಡುತ್ತಿದೆ. ಹಿಂದೂಸ್ತಾನ್‌ ನಲ್ಲಿ ಕರ್ನಾಟಕದ ಹೆಸರು ಹೇಳಬೇಕು ಅಂದ್ರೆ, ಎಲ್ಲಾ ರಾಜ್ಯಲ್ಲಿ ಜೈ ಕರ್ನಾಟಕ ಎನ್ನಬೇಕು ಅಂದರೆ, ಪೂರ್ಣ ಬಹುಮತ ಸರ್ಕಾರ ಬೇಕು. ನೀವು ಅದನ್ನು ಮಾಡಬೇಕಿದೆ. ಶಾಂತಿಯಿಂದ ರಾಜ್ಯ ನಡೆಯುತ್ತಿದೆ. ಇದು ಮತ್ತೆ ರಿವರ್ಸ್ ಗೇರ್ ಹೋಗಬಾರದು.

ರಾಣಿ ಅಬ್ಬಕ್ಕ ಬಗ್ಗೆ ಪ್ರಸ್ತಾಪ ಮಾಡಿದರು. ದೇಶದ ಪ್ರತಿಯೊಬ್ಬ ಮಹಿಳೆಯರಲ್ಲೂ ಅಬ್ಬಕ್ಕನಂತೆ ಆಗಬೇಕು. ನಾವು ಬಡವರಿಗೆ ಮನೆ ನಿರ್ಮಿಸಿ ಕೊಡುತ್ತಿದ್ದೇವೆ. ಮಹಿಳಾ ಶಸಕ್ತೀಕರಣಕ್ಕೆ ಯೋಜನೆ ಜಾರಿಗೊಳಿಸಿದ್ದೇವೆ. ನಿಮ್ಮ ಒಂದು ಓಟು ಭಾರತದ ಶಕ್ತಿಯನ್ನು ತೋರಿಸುತ್ತದೆ. ಭಾರತದ ಬಗ್ಗೆ ಜೈಕಾರ ಮೊಳಗಲು ನಿಮ್ಮ ಮತ ಕಾರಣ ಎಂದು ಮೋದಿ ಹೇಳಿದರು.

ಮೀನುಗಾರರ ಅಭಿವೃದ್ಧಿ ನಮಗೆ ಮುಖ್ಯ ಆಗಿದೆ. ಮೀನುಗಾರರ ಕಲ್ಯಾಣಕ್ಕಾಗಿ ಹೊಸ ಯೋಜನೆ ಆರಂಭಿಸಿದ್ದೇವೆ. ಉಡುಪಿಯಲ್ಲಿರುವ ಮೀನುಗಾರರಿಗೆ ಬಿಜೆಪಿ ಸಹಕಾರ ಮಾಡಲಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ, ಕರ್ನಾಟಟಕವನ್ನು ಬರ್ಬಾದ್ ಮಾಡಿದೆ. ಅತಂತ್ರ ಮತ ಬಂದರೆ ಜನರ ಬದುಕು ಅಂತತ್ರವಾಗಲಿದೆ. ಹೀಗಾಗಿ ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಬೇಕಿದೆ. ಶಾಂತಿ ಕದಡುವ ಸರ್ಕಾರ ಅಧಿಕಾರಕ್ಕೆ ಬರಬಾರದು. ರಾಜ್ಯದ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು. ಎಲ್ಲರೂ ಬಿಜೆಪಿಗೆ ಮತ ನೀಡಿ ಶಕ್ತಿ ಶಾಲಿ ಸರ್ಕಾರವನ್ನು ತನ್ನಿ ಎಂದರು.

ಸಮಾರಂಭದ ವೇದಿಕೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸರ್ಕಾರದ ಸಚಿವೆ ಸಂಸದೆ ಶೋಬಾ ಕರಂದ್ಲಾಜೆ, ಸಚಿವ ಸುನಿಲ್ ಕುಮಾರ್, ಶಾಸಕ ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್,ವೇದವ್ಯಾಸ ಕಾಮತ್,ಹರೀಶ್ ಪೂಂಜಾ,ಪ್ರತಾಪ್ ಸಿಂಹ ನಾಯಕ್ ,ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಹಾಗೂ ಉಭಯ ಜಿಲ್ಲೆ ಗಳ 13 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಳಾದ ಭಾಗೀರಥಿ ಸುಳ್ಯ, ಆಶಾ ತಿಮ್ಮಪ್ಪ ಪುತ್ತೂರು, ಸತೀಶ್ ಕುಂಪಲ ಮಂಗಳೂರು, ಯಶ್ಫಾಲ್ ಸುವರ್ಣ, ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಪುತ್ತೂರು : ಸಹಪಾಠಿ ಹಿಂದೂ ವಿದ್ಯಾರ್ಥಿನಿ ಜೊತೆಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ

Next Post

ಧರ್ಮಸ್ಥಳದಲ್ಲಿ 51ನೇ ಸಾಮೂಹಿಕ ವಿವಾಹೋತ್ಸವ: 201ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Related Posts

ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ
ಕರಾವಳಿ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
17
ಬೆಳೆಗಾರರ ಬೆಂಬಲದಿಂದ 2025-26 ರ ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ, ದಾಖಲೆ ಸಾಧನೆ:  ರೂ.3,735 ಕೋಟಿ ವಹಿವಾಟು, ರೂ.49.62 ಕೋಟಿ ಲಾಭ

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
40
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
58
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d