• About us
  • Contact us
  • Disclaimer
Thursday, September 3, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು ಅಳಿವೆಬಾಗಿಲಿನಲ್ಲಿ ಎರಡು ಮೀನುಗಾರಿಕಾ ದೋಣಿ ಮುಳುಗಡೆ: 12 ಮೀನುಗಾರರ ರಕ್ಷಣೆ

Coastal Times by Coastal Times
September 3, 2026
in ಕರಾವಳಿ
ಮಂಗಳೂರು ಅಳಿವೆಬಾಗಿಲಿನಲ್ಲಿ ಎರಡು ಮೀನುಗಾರಿಕಾ ದೋಣಿ ಮುಳುಗಡೆ: 12 ಮೀನುಗಾರರ ರಕ್ಷಣೆ
17
VIEWS
WhatsappTelegramShare on FacebookShare on Twitter

ಮಂಗಳೂರು: ಇಲ್ಲಿನ ಅಳಿವೆ ಬಾಗಿಲಿನಲ್ಲಿ ಮಂಗಳವಾರ ಸಂಜೆ ಎರಡು ಮೀನುಗಾರಿಕಾ ಬೋಟ್‌ಗಳು ದುರಂತಕ್ಕೀಡಾಗಿ ಮುಳುಗಡೆಯಾಗಿದ್ದು, ಸಮಯಪ್ರಜ್ಞೆ ಮೆರೆದ ಇತರ ದೋಣಿಗಳ ಸಿಬ್ಬಂದಿ ಎರಡೂ ಬೋಟ್‌ಗಳಲ್ಲಿದ್ದ 12 ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಳ್ಳಾಲದ ಆಲೇಕಲದ ಶರೀಫ್ ಎಂಬವರಿಗೆ ಸೇರಿದ ‘ಮರ್ಮೇಡ್ II’ (ಟ್ರಾಲರ್ ಬೋಟ್) ಹಾಗೂ ಕೂಳೂರಿನ ಬೆಂಗ್ರೆ ಕಸಬಾದ ಅಬೂಬಕ್ಕರ್ ಅಜ್ಮಲ್ ಅವರಿಗೆ ಸೇರಿದ ‘ಅನಿಕ್’ (ಸಣ್ಣ ಮರದ ಬೋಟ್) ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಘಟನೆಯ ಕುರಿತು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ. ಅವರು, “ಅಳಿವೆ ಬಾಗಿಲಿನಲ್ಲಿ ಸಮುದ್ರದ ಅಲೆಗಳು ಬಲವಾಗಿ ಅಪ್ಪಳಿಸಿದ ಪರಿಣಾಮ ಬೋಟ್‌ಗಳು ಎತ್ತರಕ್ಕೆ ಜಿಗಿದು ಕೆಳಗೆ ಬಿದ್ದಿವೆ. ಇವೆರಡೂ ಮರದ ಬೋಟ್‌ ಆಗಿದ್ದರಿಂದ ಕೆಳಭಾಗದ ಹಲಗೆಗಳು ತುಂಡಾಗಿವೆ. ಒಡೆದು ಒಳಗೆ ರಭಸವಾಗಿ ನೀರು ನುಗ್ಗಲು ಪ್ರಾರಂಭವಾಗಿದೆ. 13 ಮೀಟರ್ ಉದ್ದದ ‘ಮರ್ಮೇಡ್’ ಟ್ರಾಲ್ ಬೋಟ್‌ನ ತಳಭಾಗದ ಹಲಗೆ ತುಂಡಾಗಿ ನೀರು ತುಂಬಿಕೊಂಡರೆ, ಸಣ್ಣ ಬೋಟ್ ಆಗಿರುವ ‘ಅನಿಕ್’ನ ಒಂದು ಪಾರ್ಶ್ವ ಒಡೆದು ಮುಳುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರ್ಮೇಡ್ ಬೋಟ್‌ನಲ್ಲಿದ್ದ 7 ಮಂದಿ ಹಾಗೂ ಅನಿಕ್ ಬೋಟ್‌ನಲ್ಲಿದ್ದ 5 ಮಂದಿ ಸೇರಿದಂತೆ ಎಲ್ಲರನ್ನೂ ಇತರ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ, ಬೋಟ್‌ಗಳಿಗೆ ಹಾನಿಯಾಗಿದೆ” ಎಂದು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಈ ಎರಡೂ ಬೋಟ್‌ಗಳು ಬಂದರಿನಿಂದ ಸಮುದ್ರಕ್ಕಿಳಿದಿದ್ದವು. ಅಳಿವೆ ಬಾಗಿಲಿನಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದವು. ತಕ್ಷಣ, ಸಮೀಪದಲ್ಲಿದ್ದ ಇತರ ಮೀನುಗಾರರು ನೆರವಿಗೆ ಧಾವಿಸಿ ಎಲ್ಲರನ್ನೂ ರಕ್ಷಿಸಿದ್ದಲ್ಲದೇ ತಮ್ಮ ದೋಣಿಗಳಿಗೆ ಹತ್ತಿಸಿಕೊಂಡಿದ್ದಾರೆ. ನಂತರ ಮುಳುಗಡೆಯಾಗುತ್ತಿದ್ದ ದೋಣಿಗಳನ್ನು ದಡಕ್ಕೆ ಎಳೆಯುವ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಈ ಪೈಕಿ ಒಂದು ಬೋಟನ್ನು ಹಗ್ಗ ಕಟ್ಟಿ ಸುರಕ್ಷಿತವಾಗಿ ದಡಕ್ಕೆ ಎಳೆದು ತರುವಲ್ಲಿ ಯಶಸ್ವಿಯಾದರೆ, ಮತ್ತೊಂದು ಬೋಟನ್ನು ಎಳೆದುತರುವಾಗ ಹಗ್ಗ ತುಂಡಾಗಿದ್ದರಿಂದ ಅದು ಪೂರ್ಣಪ್ರಮಾಣದಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ಮೀನುಗಾರರು ಹೇಳಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಇ-ಸತ್ತು 2.0 ತಂತ್ರಾಂಶ ಲೋಪದೋಷ ಸರಿಪಡಿಸಿ,11ಎ, 11ಬಿ ವಿಳಂಬವಿಲ್ಲದೆ ನೀಡಿ- ಸರ್ಕಾರಕ್ಕೆ ಕಿಶೋರ್‌ ಕುಮಾರ್‌ ಒತ್ತಾಯ

Related Posts

ಮಂಗಳೂರು: ಇ-ಸತ್ತು 2.0 ತಂತ್ರಾಂಶ ಲೋಪದೋಷ ಸರಿಪಡಿಸಿ,11ಎ, 11ಬಿ ವಿಳಂಬವಿಲ್ಲದೆ ನೀಡಿ- ಸರ್ಕಾರಕ್ಕೆ ಕಿಶೋರ್‌ ಕುಮಾರ್‌ ಒತ್ತಾಯ
ಕರಾವಳಿ

ಮಂಗಳೂರು: ಇ-ಸತ್ತು 2.0 ತಂತ್ರಾಂಶ ಲೋಪದೋಷ ಸರಿಪಡಿಸಿ,11ಎ, 11ಬಿ ವಿಳಂಬವಿಲ್ಲದೆ ನೀಡಿ- ಸರ್ಕಾರಕ್ಕೆ ಕಿಶೋರ್‌ ಕುಮಾರ್‌ ಒತ್ತಾಯ

September 2, 2026
17
ಪುತ್ತೂರು ಪ್ರೆಸ್ ಕ್ಲಬ್ ಎದುರು ಗಲಾಟೆ ಆರೋಪ- ಪ್ರವೀಣ್ ಆಚಾರ್ಯ, ರವೂಫ್, ಹಕೀಂ ಈ ಮೂವರ ವಿರುದ್ಧ ಪ್ರಕರಣ ದಾಖಲು
ಕರಾವಳಿ

ಪುತ್ತೂರು ಪ್ರೆಸ್ ಕ್ಲಬ್ ಎದುರು ಗಲಾಟೆ ಆರೋಪ- ಪ್ರವೀಣ್ ಆಚಾರ್ಯ, ರವೂಫ್, ಹಕೀಂ ಈ ಮೂವರ ವಿರುದ್ಧ ಪ್ರಕರಣ ದಾಖಲು

September 2, 2026
24

Discussion about this post

Recent News

ಮಂಗಳೂರು ಅಳಿವೆಬಾಗಿಲಿನಲ್ಲಿ ಎರಡು ಮೀನುಗಾರಿಕಾ ದೋಣಿ ಮುಳುಗಡೆ: 12 ಮೀನುಗಾರರ ರಕ್ಷಣೆ

ಮಂಗಳೂರು ಅಳಿವೆಬಾಗಿಲಿನಲ್ಲಿ ಎರಡು ಮೀನುಗಾರಿಕಾ ದೋಣಿ ಮುಳುಗಡೆ: 12 ಮೀನುಗಾರರ ರಕ್ಷಣೆ

September 3, 2026
17
ಮಂಗಳೂರು: ಇ-ಸತ್ತು 2.0 ತಂತ್ರಾಂಶ ಲೋಪದೋಷ ಸರಿಪಡಿಸಿ,11ಎ, 11ಬಿ ವಿಳಂಬವಿಲ್ಲದೆ ನೀಡಿ- ಸರ್ಕಾರಕ್ಕೆ ಕಿಶೋರ್‌ ಕುಮಾರ್‌ ಒತ್ತಾಯ

ಮಂಗಳೂರು: ಇ-ಸತ್ತು 2.0 ತಂತ್ರಾಂಶ ಲೋಪದೋಷ ಸರಿಪಡಿಸಿ,11ಎ, 11ಬಿ ವಿಳಂಬವಿಲ್ಲದೆ ನೀಡಿ- ಸರ್ಕಾರಕ್ಕೆ ಕಿಶೋರ್‌ ಕುಮಾರ್‌ ಒತ್ತಾಯ

September 2, 2026
17
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಅಳಿವೆಬಾಗಿಲಿನಲ್ಲಿ ಎರಡು ಮೀನುಗಾರಿಕಾ ದೋಣಿ ಮುಳುಗಡೆ: 12 ಮೀನುಗಾರರ ರಕ್ಷಣೆ

ಮಂಗಳೂರು ಅಳಿವೆಬಾಗಿಲಿನಲ್ಲಿ ಎರಡು ಮೀನುಗಾರಿಕಾ ದೋಣಿ ಮುಳುಗಡೆ: 12 ಮೀನುಗಾರರ ರಕ್ಷಣೆ

September 3, 2026
ಮಂಗಳೂರು: ಇ-ಸತ್ತು 2.0 ತಂತ್ರಾಂಶ ಲೋಪದೋಷ ಸರಿಪಡಿಸಿ,11ಎ, 11ಬಿ ವಿಳಂಬವಿಲ್ಲದೆ ನೀಡಿ- ಸರ್ಕಾರಕ್ಕೆ ಕಿಶೋರ್‌ ಕುಮಾರ್‌ ಒತ್ತಾಯ

ಮಂಗಳೂರು: ಇ-ಸತ್ತು 2.0 ತಂತ್ರಾಂಶ ಲೋಪದೋಷ ಸರಿಪಡಿಸಿ,11ಎ, 11ಬಿ ವಿಳಂಬವಿಲ್ಲದೆ ನೀಡಿ- ಸರ್ಕಾರಕ್ಕೆ ಕಿಶೋರ್‌ ಕುಮಾರ್‌ ಒತ್ತಾಯ

September 2, 2026
ಪುತ್ತೂರು ಪ್ರೆಸ್ ಕ್ಲಬ್ ಎದುರು ಗಲಾಟೆ ಆರೋಪ- ಪ್ರವೀಣ್ ಆಚಾರ್ಯ, ರವೂಫ್, ಹಕೀಂ ಈ ಮೂವರ ವಿರುದ್ಧ ಪ್ರಕರಣ ದಾಖಲು

ಪುತ್ತೂರು ಪ್ರೆಸ್ ಕ್ಲಬ್ ಎದುರು ಗಲಾಟೆ ಆರೋಪ- ಪ್ರವೀಣ್ ಆಚಾರ್ಯ, ರವೂಫ್, ಹಕೀಂ ಈ ಮೂವರ ವಿರುದ್ಧ ಪ್ರಕರಣ ದಾಖಲು

September 2, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d