ಮಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಮೇರು ನಟ. ಅಪ್ಪನ ಹಾದಿಯನ್ನೇ ಅನುಸರಿಸಿದ ಪುನೀತ್ ಹೆಚ್ಚು ಅಭಿನಯಿಸಿದ್ದು, ಮನೆ-ಮಂದಿಯಲ್ಲ ಕುಳಿತು ಯಾವುದೇ ಮುಜುಗರವಿಲ್ಲದಂತಹ ಕೌಟುಂಬಿಕ ಚಿತ್ರಗಳಲ್ಲಿ. ಈ ಕಾರಣಕ್ಕೆ ಪುನೀತ್ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಕೇವಲ ಚಿತ್ರ ಮಾತ್ರವಲ್ಲ, ತಮ್ಮ ಸಮಾಜಮುಖಿ ಕಾರ್ಯಗಳಿಂದಲೂ ಪುನೀತ್ ಎಲ್ಲರ ಮನ ಮುಟ್ಟಿದ್ದಾರೆ. ಹೀಗಾಗಿ ಪುನೀತ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ. ಈ ಅಭಿಯಾನಕ್ಕೆ ಮಂಗಳೂರು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಕೂಡ ಧ್ವನಿ ಆಗಿದ್ದಾರೆ.
ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಟ್ವಿಟರ್ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ನಾಗರಿಕ ಸೇವೆಗಳ ಹಿನ್ನೆಲೆಯಲ್ಲಿ ಕೊಡಮಾಡುವ ಪದ್ಮ ಅವಾರ್ಡ್ಗೆ ಅವರು ಅರ್ಹರು. ಪುನೀತ್ ರಾಜ್ ಕುಮಾರ್ ಕೂಡ ಸಾಕಷ್ಟು ನಾಗರಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಇಡೀ ಕುಟುಂಬ ನೋಡಬಹುದಾದಂತಹ ಚಿತ್ರಗಳನ್ನೇ ಮಾಡಿದ್ದರು. ಇನ್ನು ಕೌಟುಂಬಿಕ ಚಿತ್ರಗಳನ್ನು ನೋಡುವುದು ಹೇಗೆ? ಪದ್ಮಶ್ರೀ ಪ್ರಶಸ್ತಿ ನೀಡುವುದರ ಮೂಲಕ ಅವರಿಗೆ ಗೌರವ ಸಿಗಬೇಕು ಅನ್ನೋ ಆಸೆ ನಮಗಿದೆ ಎಂದು ಕಮಿಷನರ್ ಟ್ವೀಟ್ ಮಾಡಿದ್ದಾರೆ.
ಇನ್ನು ಪುನೀತ್ ಅವರಿಗೆ ಪದ್ಮಶ್ರೀ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಬಗ್ಗೆ ನಮಗೆ ಅಪಾರ ಗೌರವ ಇದೆ. ಪುನೀತ್ ರಾಜ್ ಕುಮಾರ್‌ಗೆ ಪದ್ಮಶ್ರೀ ನೀಡಲು ನಮ್ಮ ಸಮ್ಮತಿ ಕೂಡ ಇದೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ. ಪುನೀತ್ ರಾಜ್‌ಕುಮಾರ್ ಎಲ್ಲ ಗೌರವಕ್ಕೆ ಅರ್ಹರು. ಅವರಿಗೆ ಇಂತಹ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಬೇಕು ಎಂದರು.
He being a youth icon and with his influence on every section of the society in Karnataka truely deserves to be decorated with padmasri award
— Shashi Kumar CP mangaluru (@ShashiK85532199) October 30, 2021