ನವದೆಹಲಿ: ವಿಶ್ವದಲ್ಲಿ ಅತಿ ಹೆಚ್ಚು ಬಳಕೆ ಮಾಡಲಾಗುತ್ತಿರುವ ಸಾಮಾಜಿಕ ಮಾಧ್ಯಮವಾದ ವಾಟ್ಸ್‌ಆ್ಯಪ್ ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ. ಇದೀಗ ವಾಟ್ಸ್ಆ್ಯಪ್ನಿಂದ ಏಕಕಾಲದಲ್ಲಿ 32 ಜನರು ವಿಡಿಯೋ ಕಾಲ್ ಮಾಡುವ ಅವಕಾಶವನ್ನು ಘೋಷಿಸಿದೆ.
ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ವಾಟ್ಸ್‌ಆ್ಯಪ್ ಮತ್ತಷ್ಟು ನವೀನವಾಗುತ್ತಿದೆ. ಜನರ ಬಳಕೆಗೆ ಇನ್ನಷ್ಟು ಹತ್ತಿರವಾಗಲು ಒಂದೇ ಬಾರಿಗೆ 32 ಮಂದಿ ವಿಡಿಯೋ ಕರೆ ಮಾಡಿ ಮಾತನಾಡುವ ಹೊಸ ಫೀಚರ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ವಿವಿಧ ಚಾಟ್ ಗುಂಪುಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ‘ವಾಟ್ಸ್‌ಆ್ಯಪ್ ಕಮ್ಯುನಿಟಿ’ಯ ವಿಶೇಷತೆಯಾಗಿದೆ ಎಂದು ಜುಕರ್‌ಬರ್ಗ್ ಕರೆದಿದ್ದಾರೆ. ಇದರ ಮೂಲಕ ಸಾವಿರಾರು ಮಂದಿಗೆ ಒಂದೇ ಬಾರಿಗೆ ಸಂದೇಶ ರವಾನಿಸಬಹುದು. ಈ ವೈಶಿಷ್ಟ್ಯವು ಕೆಲಸದ ಸ್ಥಳಗಳು ಅಥವಾ ಶಾಲೆಗಳಲ್ಲಿ ಸಮರ್ಥವಾಗಿ ಬಳಕೆ ಬರಲಿದೆ ಎಂದು ಹೇಳಲಾಗಿದೆ. ಇನ್ನುಮುಂದೆ, ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ 1,024 ಮಂದಿಯನ್ನು ಸೇರಿಸಿಕೊಳ್ಳಬಹುದು. ಈ ವರೆಗೆ ಗ್ರೂಪ್‌ಗಳಲ್ಲಿ 256 ಮಂದಿಯನ್ನು ಸೇರಿಸಲಷ್ಟೇ ಅವಕಾಶವಿತ್ತು. ವಾಟ್ಸ್‌ಆ್ಯಪ್‌ನ ಪ್ರತಿಸ್ಪರ್ಧಿಗಳಾದ ‘ಟೆಲಿಗ್ರಾಮ್’ ಮತ್ತು ‘ಡಿಸ್ಕಾರ್ಡ್’ನಲ್ಲಿ ಗ್ರೂಪ್‌ಗಳಿಗೆ ಸಾವಿರಾರು ಮಂದಿಯನ್ನು ಸೇರಿಸುವ ಅವಕಾಶವಿದೆ.
Discover more from Coastal Times Kannada
Subscribe to get the latest posts sent to your email.
Discussion about this post