ವಿಶ್ವಕಪ್ ಫೈನಲ್ (Women’s ODI World Cup Final 2025) ಪಂದ್ಯದಲ್ಲಿ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಪಡೆ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಲಷ್ಟೇ ಶಕ್ತವಾಗಿ 52 ರನ್ಗಳಿಗೆ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ತಂಡ ಮೂರನೇ ಬಾರಿಗೆ ವಿಶ್ವಕಪ್ ಫೈನಲ್ಗೇರಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ.
ಇದಕ್ಕೂ ಮುನ್ನ ಎರಡೂ ಬಾರಿ ಫೈನಲ್ಗೆ ಪ್ರವೇಶ ಮಾಡಿದ್ದರು ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ತವರಿನಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಪಣ ತೊಟ್ಟಿದ್ದ ಟೀಮ್ ಇಂಡಿಯಾ ಅಂತಿಮವಾಗಿ ಗುರಿಯನ್ನು ತಲುಪಿದೆ. ಇದಲ್ಲದೇ ಸುಮಾರು 25 ವರ್ಷಗಳ ನಂತರ, ಮಹಿಳಾ ವಿಶ್ವಕಪ್ ಹೊಸ ಚಾಂಪಿಯನ್ ಅನ್ನು ಪಡೆದುಕೊಂಡಿದೆ.ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ, ದೀಪ್ತಿ ಶರ್ಮಾ ಅವರ ಅದ್ಭುತ ಬೌಲಿಂಗ್ ಪ್ರದರ್ಶನ, ಶಫಾಲಿ ವರ್ಮಾ ಅವರ ಆಲ್ ರೌಂಡ್ ಆಟ ಮತ್ತು ಅಮನ್ ಜೋತ್ ಕೌರ್ ಅವರ ಅದ್ಭುತ ಕ್ಯಾಚ್ ಭಾರತಕ್ಕೆ ಗೆಲುವು ತಂದುಕೊಟ್ಟಿತು.
ಒಂದೆಡೆ ತಂಡದ ವಿಕೆಟ್ ಬೀಳುತ್ತಿದ್ದರೂ ದೃತಿಗೆಡದ ವೋಲ್ವಾರ್ಡ್ ಶತಕ ಸಿಡಿಸಿ ತಂಡಗ ಗೆಲವಿಗಾಗಿ ಅಂತಿಮವರೆಗೆ ಹೋರಾಡಿದರೂ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ತಂಡ 246 ರನ್ಗಳಿಗೆ ಆಲೌಟ ಆಗುವ ಮೂಲಕ ಭಾರತಕ್ಕೆ ಶರಣಾಯ್ತು. ಇದರೊಂದಿಗೆ ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಚೊಚ್ಚಲ ಟ್ರೋಫಿ ಗೆದ್ದ ಭಾರತದ ಮೊದಲ ಮಹಿಳಾ ನಾಯಕಿ ಎಂಬ ದಾಖಲೆಯನ್ನು ಇತಿಹಾಸದ ಪುಟಕ್ಕೆ ಸೇರಿಸಿದರು.

ವರ್ಮಾ-ಶರ್ಮಾ ಆಲ್-ರೌಂಡ್ ಶೋ: ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 298 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರಂಭಿಕರಾದ ಶಫಾಲಿ ವರ್ಮಾ (78 ಎಸೆತಗಳಲ್ಲಿ 87, 7 ಬೌಂಡರಿ ಮತ್ತು 2 ಸಿಕ್ಸರ್‌ಗಳು) ಮತ್ತು ದೀಪ್ತಿ ಶರ್ಮಾ (58 ಎಸೆತಗಳಲ್ಲಿ 58, 3 ಬೌಂಡರಿ ಮತ್ತು 6 ಸಿಕ್ಸರ್‌ಗಳು) ಅರ್ಧಶತಕಗಳನ್ನು ಗಳಿಸಿದರು, ಆದರೆ ಸ್ಮೃತಿ ಮಂಧಾನ (58 ಎಸೆತಗಳಲ್ಲಿ 45, 8 ಬೌಂಡರಿ ಮತ್ತು 24 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳು) ಪ್ರಮುಖ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ, ಖಾಕಾ (3/58) ಮೂರು ವಿಕೆಟ್‌ಗಳನ್ನು ಪಡೆದರು, ಆದರೆ ಮ್ಲಾಬಾ, ಡಿ ಕ್ಲರ್ಕ್ ಮತ್ತು ಟ್ರಯಾನ್ ತಲಾ ಒಂದು ವಿಕೆಟ್ ಪಡೆದರು.
ಭಾರತದ ಗೆಲುವಿನ ರೂವಾರಿ ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಎಂದರೆ ತಪ್ಪಾಗಲಾರದು. ಬದಲಿ ಆಟಗಾರ್ತಿಯಾಗಿ ವಿಶ್ವಕಪ್ಗೆ ಎಂಟ್ರಿಕೊಟ್ಟಿದ್ದ ಶಫಾಲಿ ವರ್ಮಾ ಮೊದಲು ಬ್ಯಾಟಿಂಗ್ನಲ್ಲಿ ಸಿಡಿಲಬ್ಬರದ 87 ರನ್‌ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್ನಲ್ಲೂ ಪ್ರಮುಖ 2 ವಿಕೆಟ್ ಪಡೆದರು. ಇವರ ಜೊತೆಗೆ ನಾನು ಎಂತಹ ಆಲ್ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ ದೀಪ್ತ ಶರ್ಮಾ, ಮೊದಲು ಬ್ಯಾಟಿಂಗ್ನಲ್ಲಿ 58 ರನ್‌ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್ನಲ್ಲಿ ಐದು ವಿಕೆಟ್ ಪಡೆಯುವದರ ಜೊತೆಗೆ ಒಬ್ಬರನ್ನು ರನೌಟ್ ಕೂಡ ಮಾಡಿದರು.
Discover more from Coastal Times Kannada
Subscribe to get the latest posts sent to your email.







Discussion about this post