ಮಂಗಳೂರು :ದಿನಾಂಕ 24.9.2023 ರಂದು ಮಧ್ಯ ರಾತ್ರಿ ವ್ಯಾಸನಗರ ವಾಸವಾಗಿರುವ ಗಂಡ ಹೆಂಡತಿ ಮಧ್ಯೆ ಜಗಳಕ್ಕೆ ಸಂಬಂಧಿಸಿದಂತೆ ಪ್ರಕರಣ ಮಂಗಳೂರು ಪೂರ್ವ ಪೋಲಿಸ್ ಠಾಣೆ ಮೇಟ್ಟಿಲೇರಿತು ಅಲ್ಲಿ ನಡೆದ ಸಂಸಾರಿಕಾ ವಿಷಯಕ್ಕೆ ಸಂಬಂಧ ಪಟ್ಟ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳ ಮಾಡಿ ಪಾನಮತ್ತ ತಂದೆಯೊಬ್ಬ ಪೊಲೀಸ್ ಠಾಣೆಯಲ್ಲಿ ಪೊಲೀಸರೆದುರೇ ಇಬ್ಬರು ಮಕ್ಕಳನ್ನು ಗೋಡೆಗೆ ತಳ್ಳಿ ಕೊಲೆಗೆ ಯತ್ನಿಸಿದಾಗಿ ಹಾಗೂ ಕರ್ತವ್ಯ ನಿರತ ಪೋಲಿಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುದಾಗಿ ಪ್ರಕರಣ ದಾಖಾಲಾಗಿರುತ್ತದೆ.
ಸದ್ರಿ ಪ್ರಕರಣದ ಸತ್ಯ ಸತ್ಯತೆಗಳನ್ನು ಪರಿಸಿಲಿಸಿದ ಮಾನ್ಯ 2ನೇ ಹೆಚ್ಚು ವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ವಾದ ಪ್ರತಿವಾದಗಳನ್ನು ಆಲಿಸಿ ಆರೋಪಿ ಗಂಡನಿಗೆ ನೀರಿಕ್ಷಣಾ ಜಾಮೀನು ನೀಡಿ ಆದೇಶಿಸಿದೆ, ಸದ್ರಿ IPC ಸೆಕ್ಷನ 307ರಲ್ಲಿ ಸುಮಾರು 2 ವರ್ಷಗಳಲ್ಲಿ ಇದೆ ಮೊದಲು ಒಬ್ಬ ಆರೋಪಿಗೆ ನೀರಿಕ್ಷಣಾ ಜಾಮೀನು ಮಂಜುರಾಗಿರುವುದು ವಿಶೇಷ ಅರ್ಹ, ಆರೋಪಿಯ ಪರವಾಗಿ ಯುವ ವಕೀಲ ವಿಮಲೇಶ್ ಆರ್. ಗೌಡ ಇವರು ವಾದ ಮಂಡಿಸಿದರು.
ಘಟನೆಯ ವಿವರ: ಕದ್ರಿ ವ್ಯಾಸನಗರ ನಿವಾಸಿ ಮಹೇಶ್ ಕೃತ್ಯವೆಸಗಿದ ಆರೋಪಿ. ವಿಪರೀತ ಮದ್ಯಸೇವನೆ ಚಟ ಹೊಂದಿದ್ದ ಆರೋಪಿ, ಪ್ರತಿನಿತ್ಯ ಪತ್ನಿ ಮತ್ತು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಸೆಪ್ಟೆಂಬರ್ 24ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳ ಮಾಡಿ ಪತ್ನಿ ಮತ್ತು ಮಕ್ಕಳನ್ನು ಬೆಂಕಿ ಹಚ್ಚಿ ಕೊಲ್ಲುತ್ತೇನೆ ಎಂದು ಬೆದರಿಸಿ, ಹಲ್ಲೆ ನಡೆಸಲು ಮುಂದಾಗಿದ್ದ. ಈ ಸಂದರ್ಭ ಆತನ ಪತ್ನಿ ತಪ್ಪಿಸಿಕೊಂಡು ಕದ್ರಿ ಠಾಣೆಗೆ ಬಂದಿದ್ದು, ಆದಷ್ಟು ಬೇಗ ನಮ್ಮ ಮನೆಗೆ ಬಂದು ಗಂಡನಿಂದ ಮಕ್ಕಳನ್ನು ರಕ್ಷಿಸಿ ಎಂದಿದ್ದಾರೆ.
ಈ ವೇಳೆ ಆರೋಪಿ ಮಹೇಶ ತನ್ನ 6 ವರ್ಷದ ಗಂಡು ಮಗು ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಠಾಣೆಗೆ ಬಂದಿದ್ದಾನೆ. ಪೊಲೀಸರು ಆತನನ್ನು ವಿಚಾರಿಸಿದಾಗ ಪತ್ನಿಯೇ ತನಗೆ ಹೊಡೆದಿರುವುದಾಗಿ ಹೇಳಿದ್ದಾನೆ. ದೂರು ನೀಡಲು ಹೇಳಿದಾಗ ಆತ ಕಿರುಚಾಡಿ, ನಿಮ್ಮನ್ನು ಯಾರನ್ನೂ ಬಿಡುವುದಿಲ್ಲ ಎಂದು ತನ್ನ ಇಬ್ಬರು ಮಕ್ಕಳನ್ನು ಎಳೆದುಕೊಂಡು ಠಾಣೆಯಿಂದ ಹೊರಗೆ ಬಂದಿದ್ದ.
ಠಾಣೆಯೊಳಗಿದ್ದ ಆತನ ಪತ್ನಿ ಹೊರಗೆ ಬಂದಾಗ ಮಹೇಶ ಮತ್ತಷ್ಟು ಜೋರಾಗಿ ಕಿರುಚಿದ್ದಾನೆ. ಹತ್ತಿರ ಬಂದಲ್ಲಿ ತನ್ನ ಕೈಯಲ್ಲಿದ್ದ ಮಗಳನ್ನು ಗೋಡೆಗೆ ಚಚ್ಚಿ ಕೊಲ್ಲುತ್ತೇನೆಂದು ಬೆದರಿಸಿದ್ದಾನೆ. ಪೊಲೀಸರು ಮಗುವನ್ನು ಬಿಟ್ಟು ಬಿಡುವಂತೆ ಹೇಳಿದಾಗ, ಮಗುವಿನ ಕುತ್ತಿಗೆಯನ್ನು ಹಿಡಿದು ಎಳೆದಾಡಿ ಮಗುವನ್ನು ಎತ್ತಿ ನೆಲಕ್ಕೆ ಎಸೆಯಲು ಪ್ರಯತ್ನಿಸಿದ್ದಾನೆ.
ಮಗುವಿನ ಕುತ್ತಿಗೆ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಮಗು ಜೋರಾಗಿ ಕೂಗಲಾರಂಭಿಸಿದೆ. ಈ ವೇಳೆ, ರಾತ್ರಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಪ್ರತಿಭಾ ಕೂಡಲೇ ಮಗುವನ್ನು ಎತ್ತಿಕೊಂಡಿದ್ದು ಆರೋಪಿಯನ್ನು ಹಿಡಿದು ಕೂಡಿ ಹಾಕುವಂತೆ ಸಿಬಂದಿಗೆ ಸೂಚಿಸಿದ್ದಾರೆ. ಅಲ್ಲದೆ, ಮಗುವಿನ ತಾಯಿ ಹಾಗೂ ಬಾಲಕನನ್ನು ಕರೆದುಕೊಂಡು ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಡ್ ಕಾನ್‌ಸ್ಟೇಬಲ್ ಶರತ್ ಕುಮಾರ್ ಅವರು ಆರೋಪಿ ಮಹೇಶ್ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾನೆ ಎಂದು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post