ಸೆಪ್ಟೆಂಬರ್ 5 ರಂದು ನಡೆಯುವ #TuluOfficialinKA_KL ಟ್ವೀಟರ್ ಅಭಿಯಾನವು ಬಹಳಷ್ಟು ಮಹತ್ವವನ್ನು ಪಡೆದಿದ್ದು ಜೂನ್ 14 ರಂದು ನಡೆದಿದ್ದು ಟ್ವೀಟ್ ಅಭಿಯಾನದಲ್ಲಿ ದಾಖಲಾದ 4 ಲಕ್ಷ ಟ್ವೀಟ್ ಭಾರತದ ಮಟ್ಟದಲ್ಲಿ ಹೊಸ ದಾಖಲೆಯ ಬರೆಯುವುದರ ಜೊತೆಗೆ ರಾಷ್ಟ್ರ ಮಟ್ಟದಲ್ಲಿ ತುಳುವಿಗಾಗಿ ಏಕೆ ಇಷ್ಟೊಂದು ದೊಡ್ಡ ಮಟ್ಟದ ಅಭಿಯಾನ ನಡೆಯಿತು ಎಂಬ ಚರ್ಚೆ ಪ್ರಾರಂಭವಾಯಿತು. ರಾಜಕೀಯ ವಲಯದಲ್ಲಂತೂ ಬಹಳಷ್ಟು ಚರ್ಚೆಯ ಜೊತೆ ರಾಜಕೀಯ ನಾಯಕರಿಗೆ ಸ್ವಲ್ಪ ಮಟ್ಟಿಗೆ ಇರಿಸು-ಮುರಿಸು ಆಗಿರುವುದು ಸುಳ್ಳಲ್ಲ. 60 ವರ್ಷಗಳ ಕಾಲ ಯಾವುದೇ ಸ್ಥಾನಮಾನ ಕೊಡದೇ ಇರುವುದು ಜನಾಕ್ರೋಶಕ್ಕೆ ಮೂಲ ಕಾರಣ ಎಂಬುದು ರಾಜಕೀಯ ಪಂಡಿತರಿಗೆ ಈಗ ಅರಿವಾಗಿದೆ. ಪಕ್ಷಬೇಧವನ್ನು ಮರೆತು ಜನರು ಧ್ವನಿಯಾಗಿರುವುದು ಟ್ವಿಟರ್ ಅಭಿಯಾನದ ಯಶಸ್ಸಿನ ಗುಟ್ಟು. ಜೊತೆಗೆ ಬಹಳಷ್ಟು ಪಕ್ಷದ ನಾಯಕರೆ ಪಕ್ಷ ನೋಡದೇ ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡಿರುವುದು ಅಭಿಯಾನಕ್ಕೆ ಆನೆಬಲ ಬಂದಿದೆ. ನಮ್ಮೆಲ್ಲರದ್ದೂ ಕೊನೆಯ ಪ್ರಯತ್ನ, ಈ ಬಾರಿ ಈ ಸರಕಾರದಿಂದ ಆಗದಿದ್ದರೆ ಮುಂದೆಂದೂ ಆಗದು ಎಂದು ಜನರು ಈಗಾಗಲೇ ತೀರ್ಮಾನಿಸಿದ್ದಾರೆ. ಮುಂದೆಂದೂ ಜನಪ್ರತಿನಿಧಿಗಳ ಭರವಸೆಯನ್ಮು ನಂಬುವ ಪರಿಸ್ಥಿತಿಯಲ್ಲಿ ಜನರಿಲ್ಲ. ಸಹನೆಯ ಕಟ್ಟೆ ಒಡೆದು ಟ್ವೀಟರಿನಲ್ಲಿ ಜನಾಕ್ರೋಶ ಸದ್ದು ಮಾಡುತ್ತಿದೆ.
ಜನಪ್ರತಿನಿಧಿಗಳು ಸೆಪ್ಟೆಂಬರ್ 13 ರಿಂದ ನಡೆಯುವ ಅಧಿವೇಶನದಲ್ಲಿ ಯಾವ ರೀತಿ ಜನರಿಗೆ ಉತ್ತರ ಕೊಡುತ್ತಾರೋ ಕಾದು ನೋಡೊಣ
ಸೆಪ್ಟೆಂಬರ್ 5 ರ ಟ್ವೀಟ್ ಅಭಿಯಾನ ಯಾಕಾಗಿ?
ತುಳು ಭಾಷೆಯನ್ನು ಅಧಿಕೃತ ಮಾಡಬೇಕೆಂಬ ಹಲವು ವರುಷಗಳ ಬೇಡಿಕೆ ಇದ್ದು ಇದುವರೆಗೆ ಈ ಬೇಡಿಕೆ ಈಡೇರಿಲ್ಲ
ಕಳೆದ 5 ವರುಷಗಳಿಂದ ಟ್ವೀಟರ್ ಅಭಿಯಾನದ ಮೂಲಕ ತುಳುವರು ತಮ್ಮ ಬೇಡಿಕೆಯನ್ನು ಮೂರು ಪಕ್ಷಗಳ ಸರಕಾರ ಇದ್ದಾಗಲೂ ಇಟ್ಟಿದ್ದರೂ ಯಾರೂ ಅಧಿಕೃತ ಮಾಡದೇ ಕೇವಲ ಟ್ವೀಟರಿನಲ್ಲಿ ಬೆಂಬಲ ಸೂಚಿಸಿ ಸುಮ್ಮನಾಗುತ್ತಿದ್ದರು. ಜನಪ್ರತಿನಿಧಿಗಳು ಮಾತನಾಡಬೇಕಾದ ವಿಧಾನ ಸಭೆ, ವಿಧಾನ ಪರಿಷತ್ತಿನಲ್ಲಿ ಮಾತನಾಡುತ್ತಿರಲಿಲ್ಲ.
ಸೆಪ್ಟೆಂಬರ್ 5 ರಂದೇ ಟ್ವಿಟರ್ ಅಭಿಯಾನ ಯಾಕೆ?
ತುಳು ಭಾಷೆಯನ್ನು ಅಧಿಕೃತ ಮಾಡಬೇಕಾದರೆ ನಮ್ಮ ಜನಪ್ರತಿನಿಧಿಗಳು ವಿಧಾನ ಸಭೆ, ವಿಧಾನ ಪರಿಷತ್ತಿನಲ್ಲಿ ಮಾತನಾಡಬೇಕು. ತುಳುವನ್ನು ಅಧಿಕೃತ ಮಾಡಬೇಕಾದ ಸ್ಥಳವದು. ಸೆಪ್ಟೆಂಬರ್ 13 ರಿಂದ ವಿಧಾನ ಸಭೆ ಅಧಿವೇಶನ ನಡೆಯಲಿದ್ದು ಇದು ಅಧಿಕೃತ ಮಾಡಲು ಸೂಕ್ತ ಸಂದರ್ಭ. ಈ ಅಧಿವೇಶನದಲ್ಲಿ ತುಳುವರ ಬೇಡಿಕೆಗೆ ಉತ್ತರ ಸಿಗಬೇಕಾಗಿದೆ.
ನಮ್ಮ ಮೂರು ಸಚಿವರು ಇದ್ದಾರೆ, ಅದರಲ್ಲೂ ಭಾಷೆಯ ವಿಚಾರ ಬರುವ ಇಲಾಖೆಯೂ ತುಳುವರ ಪಾಲಾಗಿದೆ. ಮುಖ್ಯಮಂತ್ರಿಯವರು ಉಡುಪಿಯ ಉಸ್ತುವಾರಿ ಸಚಿವರಾಗಿದ್ದವರು.
ಸೆಪ್ಟೆಂಬರ್ 13 ರಿಂದ ನಡೆಯುವ ಅಧಿವೇಶನದಲ್ಲಿ ತುಳು ಭಾಷೆ ಅಧಿಕೃತ ಮಾಡಲು ಪೂರ್ವ ಸಿದ್ಧತೆ
ಸೆಪ್ಟೆಂಬರ್ 5 ರಂದು ಮತ್ತೊಮ್ಮೆ ಸರಕಾರದ ಮುಂದೆ ಸಮಸ್ತ ತುಳುವರು ಅಧಿಕೃತ ಮಾಡುವ ಬೇಡಿಕೆ ಮುಂದಿಟ್ಟರೆ ಒಂದು ವಾರ ಅವಧಿಯಲ್ಲಿ ತುಳುನಾಡಿನ ಜನಪ್ರತಿನಿಧಿಗಳು ಅದಕ್ಕೆ ಬೇಕಾದ ಡಾಕ್ಯಮೆಂಟರಿ ಕೆಲಸವನ್ನು ಸಂಬಂಧ ಪಟ್ಟವರಿಂದ ಮಾಡಿಸಬಹುದು, ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಬಹುದು. ಹೀಗಾಗಿ ಸಮಸ್ತ ತುಳುವರು ಮತ್ತೊಮ್ಮೆ ವಿಧಾನ ಸಭೆಯಲ್ಲಿ ತುಳು ಭಾಷೆಯ ಅಧಿಕೃತ ಮಾಡುವಂತೆ ಒತ್ತಾಯಿಸಬೇಕು
ಅಧಿವೇಶನಕ್ಕೂ ಮುನ್ನ ಅಭಿಯಾನ :
ಸೆಪ್ಟಂಬರ್ 13ರಿಂದ 24ರ ವರೆಗೆ ಅಧಿವೇಶನ ನಡೆಯಲಿದ್ದು, ಅದಕ್ಕೂ ಮುನ್ನ ಅಂದರೆ ಸೆ. 5ರಂದು ಜೈ ತುಳುನಾಡು ಸಹಿತ ತುಳುನಾಡಿನ ವಿವಿಧ ಸಂಘಟನೆಗಳ ಆಶ್ರಯದಲ್ಲಿ “ಟ್ವೀಟ್ ಅಭಿಯಾನ’ ನಡೆಯಲಿದೆ. ಅಧಿವೇಶನದಲ್ಲಿ “ನಮ್ಮ ಶಾಸಕರು ಮಸೂದೆ ಮಂಡನೆ ಮಾಡಿ ತುಳು ಭಾಷೆಯನ್ನು ನಮ್ಮ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು’ ಎಂಬ ಒತ್ತಾಯದೊಂದಿಗೆ ಸೆ. 4ರ ಮಧ್ಯರಾತ್ರಿ 12 ಗಂಟೆಯಿಂದ ಸೆ. 5ರ ಮಧ್ಯರಾತ್ರಿ 11.59ರ ವರೆಗೆ #TuluOfficialinKA_KL ಮತ್ತು #SpeakUpForTulu ಎಂಬ ಹ್ಯಾಶ್‌ಟ್ಯಾಗ್ ಮುಖೇನ ಟ್ವಿಟ್ಟರ್ ಅಭಿಯಾನ ನಡೆಯಲಿದೆ.
ಜೈ ತುಳುನಾಡ್ (ರಿ.) ಸಂಘಟನೆ ಬೊಕ್ಕ ಮಾತ ತುಲು ಸಂಘಟನೆ ಒಟ್ಟು ಸೇರಿಗೆಡ್ ಈ ಸರ್ತಿ ದ ವಿಧಾನಸಭಾ ಅಧಿವೇಶನ ಡ್ ತುಲು ರಾಜ್ಯ ಭಾಷೆ ಅವೊಡ್ ಪಂದು ಮಲ್ಲ ” ಟ್ವೀಟ್ ತುಳುನಾಡ್” ಅಭಿಯಾನ..24 ಗಂಟೆ ದ ಟ್ವೀಟ್ ಅಭಿಯಾನ
#TuluOfficialinKA_KL
ಟ್ವೀಟ್ ತುಳುನಾಡ್
ಟ್ವಿಟರ್ ಅಭಿಯಾನ ತಂಡ
Discover more from Coastal Times Kannada
Subscribe to get the latest posts sent to your email.
Discussion about this post