ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ ನಲ್ಲಿ ಈ ಹಿಂದೆ ‘xxx:Return of Xander Cage’ ಎಂಬ ಸಿನೆಮಾದಲ್ಲಿ 2017ರಲ್ಲಿ ನಟಿಸಿದ್ದರು. ಅದು ಹಿಟ್ ಆಗದಿದ್ದರೂ ದೀಪಿಕಾ ಪಡುಕೋಣೆಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಮತ್ತೊಮ್ಮೆ ಹಾಲಿವುಡ್ ನಲ್ಲಿ ನಟಿಸಲು ಮುಂದಾಗಿದ್ದಾರೆ.
ಇನ್ನೂ ಹೆಸರಿಡದ ಚಿತ್ರದಲ್ಲಿ ದೀಪಿಕಾ ನಟಿಸುವುದು ಮಾತ್ರವಲ್ಲದೆ ತಮ್ಮ ಕ ಪ್ರೊಡಕ್ಷನ್ ಬ್ಯಾನರ್ ನಡಿ ಹಾಲಿವುಡ್ ಚಿತ್ರಕ್ಕೆ ಬಂಡವಾಳ ಕೂಡ ಹೂಡಿ ನಿರ್ಮಾಪಕಿಯಾಗುತ್ತಿದ್ದಾರೆ. ಇದಕ್ಕೆ ಎಸ್ ಟಿಎಕ್ಸ್ ಫಿಲ್ಮ್ಸ್ ಮತ್ತು ಹಿಲ್ಲ್ ಪ್ರೊಡಕ್ಷನ್ ದೀಪಿಕಾ ಜೊತೆ ಬಂಡವಾಳ ಹೂಡಿಕೆಯಲ್ಲಿ ಕೈ ಜೋಡಿಸುತ್ತಿದೆ.
ಜಾಗತಿಕ ಮಟ್ಟದಲ್ಲಿ ತಲುಪಬೇಕು ಎಂದು ಪ್ರೊಡಕ್ಷನ್ ಹೌಸ್ ನ್ನು ಸ್ಥಾಪಿಸಿರುವ ದೀಪಿಕಾ ಈ ಬಾರಿ ಆಯ್ಕೆ ಮಾಡಿಕೊಂಡಿರುವ ಹಾಲಿವುಡ್ ಚಿತ್ರ ರೊಮ್ಯಾಂಟಿಕ್ ಕಾಮಿಡಿ ಕಥೆಯನ್ನು ಹೊಂದಿರುತ್ತದೆ.
ದೀಪಿಕಾ ಪಾತ್ರದ ಸುತ್ತವೇ ಕಥೆ ಸಾಗಲಿದ್ದು ಬಹುದೇಶೀಯ ಸಂಸ್ಕೃತಿಯ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುತ್ತದೆ ಎಂದು ಎಸ್ ಟಿಎಕ್ಸ್ ಫಿಲ್ಮ್ಸ್ ಅಧ್ಯಕ್ಷ ಅದಮ್ ಫೊಗೆಲ್ಸನ್ ತಿಳಿಸಿದ್ದಾರೆ.
ಇತ್ತ ಬಾಲಿವುಡ್ ನಲ್ಲಿ ದೀಪಿಕಾ ಅನನ್ಯ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿಯವರ ಜೊತೆ ಶಕುನ್ ಬಾತ್ರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post