ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ಮುಂದಿನ ದಿನಗಳಲ್ಲಿ ಅಥರ್ವರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಎಂ.ಎಸ್ ಧೋನಿ ಅವರ ಅಥರ್ವ: ದಿ ಒರಿಜಿನ್ ಎಂಬ ತಮ್ಮ ಗ್ರಾಫಿಕ್ ಕಾದಂಬರಿಯ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದಾರೆ.

ರಮೇಶ್ ತಮಿಳ್ಮನಿ ಬರೆದಿರುವ ಈ ಸರಣಿಯನ್ನು ವಿನ್ಸೆಂಟ್ ಅಡೈಕಳರಾಜ್ ಮತ್ತು ಅಶೋಕ್ ಮ್ಯಾನರ್ ನಿರ್ಮಿಸಿದ್ದಾರೆ. ಹಿಂದೆಂದೂ ಕಾಣದ ಅವತಾರದಲ್ಲಿ ಮಾಜಿ ಕ್ರಿಕೆಟಿಗ ಕಾಣಿಸಿಕೊಳ್ಳಲಿದ್ದಾರೆ. ಹೊಚ್ಚ ಹೊಸ ಅವತಾರದಲ್ಲಿ ಅಂದರೆ ಅಥರ್ವ: ದಿ ಒರಿಜಿನ್ ಎಂಬ ಅನಿಮೇಟೆಡ್ ಕಾದಂಬರಿಯ ಫಸ್ಟ್ ಲುಕ್‌ನಲ್ಲಿ ಧೋನಿ ಯುದ್ಧಭೂಮಿಯಲ್ಲಿ ರಾಕ್ಷಸರೊಂದಿಗೆ ಹೋರಾಡುತ್ತಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನನ್ನ ಹೊಸ ಅವತಾರವನ್ನು ಅನಾವರಣಗೊಳಿಸಲು ಸಂತೋಷವಾಗುತ್ತಿದೆ..” ಅಥರ್ವ” ಎಂಎಸ್ ಧೋನಿ ಫೇಸ್‌ಬುಕ್‌ನಲ್ಲಿ ಸರಣಿಯ ಫಸ್ಟ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಧೋನಿ ಅವರ ಹೊಸ ಅವತಾರ ಕಂಡು ಆಶ್ಚರ್ಯ ಚಕಿತರಾಗಿದ್ದು, ಸರಣಿಯನ್ನು ನೋಡಲು ತುಂಬಾ ಕುತೂಹಲದಿಂದ ಕಾಯುತ್ತಿದ್ದಾರೆ.