• About us
  • Contact us
  • Disclaimer
Tuesday, September 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಶಿವಾಜಿಯಂಥ ರಾಜ ಮತ್ತೊಬ್ಬನಿಲ್ಲ, “ಶಿವಾಜಿಯನ್ನು ವಿರೋಧಿಸುವವರು ನಾಟಕ ನೋಡಿ!“ – ವಿಜಯ್ ಕುಮಾರ್ ಕೊಡಿಯಾಲ್ ಬೈಲ್

Coastal Times by Coastal Times
March 5, 2025
in ಕರಾವಳಿ
ಶಿವಾಜಿಯಂಥ ರಾಜ ಮತ್ತೊಬ್ಬನಿಲ್ಲ, “ಶಿವಾಜಿಯನ್ನು ವಿರೋಧಿಸುವವರು ನಾಟಕ ನೋಡಿ!“ – ವಿಜಯ್ ಕುಮಾರ್ ಕೊಡಿಯಾಲ್ ಬೈಲ್
46
VIEWS
WhatsappTelegramShare on FacebookShare on Twitter

ಮಂಗಳೂರು: “ಶಿವಾಜಿ ಹಿಂದೂ ಧರ್ಮದ ರಕ್ಷಕ ಆದರೆ ಅನ್ಯಧರ್ಮದ ದ್ವೇಷಿಯಲ್ಲ. ಇತಿಹಾಸವನ್ನು ತಿರುಚಿದವರು ಮಾತ್ರ ಅಪಚಾರ ಮಾಡುತ್ತಿದ್ದಾರೆ ಶಿವಾಜಿಯನ್ನು ಅರಿತವರು ಅವರಂತಹ ಒಬ್ಬ ಒಳ್ಳೆಯ ಸಾಮ್ರಾಟನನ್ನು ಕೊಂಡಾಡುತ್ತಾರೆ. ಶಿವಾಜಿಯ ಸಂಪೂರ್ಣ ಕಥೆ ತಿಳಿದುಕೊಂಡರೆ ಅವರೆಂತಹ ಅನ್ಯಧರ್ಮ ಸಹಿಷ್ಣು ಎನ್ನುವುದು ತಿಳಿಯುತ್ತದೆ. ಶಿವಾಜಿಯ ಬಗ್ಗೆ ತಿಳಿಯದವರು ನಮ್ಮ ಮುಂದಿನ ಚಾರಿತ್ರಿಕ ನಾಟಕ “ಶಿವಾಜಿ”ಯನ್ನು ನೋಡಬೇಕು. ಅವರ ಶಿವಾಜಿ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ“ ಎಂದು ಹಿರಿಯ ರಂಗಕರ್ಮ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

”ಶಿವಾಜಿ ನಾಟಕ ಮಾರ್ಚ್ 6 ರಂದು ಗುರುವಾರ ಕಟೀಲು ಕ್ಷೇತ್ರದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಮಾಚ್೯ 13 ರಂದು ಪುರಭವನದಲ್ಲಿ ಪ್ರದರ್ಶನ ಕಾಣಲಿದೆ. ನಾಟಕದ ಟೈಟಲ್ ಹಾಡು ಕನ್ನಡ ಭಾಷೆಯಲ್ಲಿದ್ದರೆ ತುಳುವಿನಲ್ಲಿ ಸಂಭಾಷಣೆ ಇರಲಿದೆ. ಹಿಂದಿ ಭಾಷೆಯನ್ನು ಕೂಡ ಬಳಕೆ ಮಾಡುವ ಮೂಲಕ ಭಾಷಾ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ. ಕಥೆ ರಚನೆಕಾರ ಶಶಿರಾಜ್ ರಾವ್ ಕಾವೂರು ತುಂಬಾ ಕಷ್ಟಪಟ್ಟು ಕಥೆ ರಚಿಸಿದ್ದಾರೆ. ಒಟ್ಟು 3 ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಟೈಟಲ್ ಸಾಂಗ್ ಹೆಸರಾಂತ ಗಾಯಕ ಕೈಲಾಶ್ ಖೇರ್ ಹಾಡಬೇಕಿತ್ತು ಆದರೆ ಅವರು 25 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರಿಂದ ಕೈಬಿಡಬೇಕಾಯಿತು. ಬೇರೆ ಪ್ರಸಿದ್ಧ ಗಾಯಕರಿಂದ ಹಾಡಿಸಲು ಪ್ರಯತ್ನ ಮುಂದುವರಿದಿದೆ“ ಎಂದರು.

”ಪ್ರೀತೇಶ್ ಬಳ್ಳಾಲ್ ಬಾಗ್ ಇತ್ತೀಚಿನ 70 ಶೋಗಳಲ್ಲಿ ಶಿವದೂತೆ ಗುಳಿಗೆ ನಾಟಕದಲ್ಲಿ ಗುಳಿಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಶಿವಾಜಿ ಪಾತ್ರದಲ್ಲೂ ಅವರೇ ಇರಲಿದ್ದಾರೆ. ಪ್ರಮೋದ್ ಮರವಂತೆ, ಶಶಿರಾಜ್ ಕಾವೂರು ಸಾಹಿತ್ಯ ಬರೆದಿದ್ದಾರೆ. ಶಿವಾಜಿ ಪಾತ್ರಕ್ಕೆ ನಟ ಪೃಥ್ವಿ ಅಂಬರ್ ಕಂಠದಾನ ಮಾಡಿದ್ದರೆ ಗುರು ದಾದಾಜಿ ಪಾತ್ರಕ್ಕೆ ನವೀನ್ ಡಿ ಪಡೀಲ್ ಧ್ವನಿ ನೀಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್ ಹಾಡಿದ್ದು ಹಾಡುಗಳು ಸೊಗಸಾಗಿ ಮೂಡಿಬಂದಿದೆ“ ಎಂದರು.

ಶಿವಾಜಿಯಂತ ರಾಜ ಬೇರೆ ಇಲ್ಲ! : ಶಿವಾಜಿ ಎಲ್ಲ ಜಾತಿ ಧರ್ಮದ ಜನರನ್ನು ಸಮಾನವಾಗಿ ಕಂಡವರು. ಅವರಿಗೆ ಅವರೇ ಸಾಟಿ. ಶಿವಾಜಿ ಒಬ್ಬ ದರೋಡೆಕೋರ ಅನ್ಯಧರ್ಮದ ದ್ವೇಷಿ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ. ಇದು ಖಂಡಿತಾ ಸರಿಯಲ್ಲ. ಶಿವಾಜಿಯ ಬಗ್ಗೆ ಅವರ ಸಾಮ್ರಾಜ್ಯ ಮತ್ತು ಆಡಳಿತದ ಬಗ್ಗೆ ಪಟ್ಟಾಭಿಷೇಕದ ಬಗ್ಗೆ ನಾಟಕದಲ್ಲಿ ವಾಸ್ತವವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ನಾಟಕ ನೋಡಿ”

ಪತ್ರಿಕಾಗೋಷ್ಠಿಯಲ್ಲಿ ಮಣಿಕಾಂತ್ ಕದ್ರಿ, ಶಶಿರಾಜ್ ಕಾವೂರು, ಎ ಕೆ ವಿಜಯ್, ಪ್ರೀತೇಶ್ ಬಳ್ಳಾಲ್ ಭಾಗ್ ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಶಾಸಕ ಕಾಮತ್ ವಿರುದ್ಧ ಎಫ್‌ಐಆರ್ ಖಂಡಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಪ್ರತಿಭಟನೆ

Next Post

ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್​ಗೆ ಸೇರಿದ್ದ 17.29 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ

Related Posts

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ
ಕರಾವಳಿ

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

August 31, 2026
39
ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ
ಕರಾವಳಿ

ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ

August 31, 2026
31
Next Post
ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್​ಗೆ ಸೇರಿದ್ದ 17.29 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ

ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್​ಗೆ ಸೇರಿದ್ದ 17.29 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ

Discussion about this post

Recent News

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

August 31, 2026
39
ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ

ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ

August 31, 2026
21
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ: ಸೆಪ್ಟೆಂಬರ್​ 1 ರಿಂದ ಕನಿಷ್ಠ ದರ 40 ರೂ.ಗೆ ಏರಿಕೆ, ಜಿಲ್ಲಾಧಿಕಾರಿ ಆದೇಶ

August 31, 2026
ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ

ಮಂಗಳೂರು: ಮೊಬೈಲ್ ವಿಚಾರಕ್ಕೆ ಹತ್ಯೆ ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ

August 31, 2026
ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ

ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ

August 31, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d