ಮಂಗಳೂರು: ನಗರದ ವಿವಿಧ ಕಡೆಗಳಲ್ಲಿ ಮಹಿಳೆಯರ ಸರ ಸುಲಿಗೆ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಲಿಗೆ ಮಾಡಿದ ಸುಮಾರು 90 ಗ್ರಾಂ ತೂಕದ ಚಿನ್ನಾಭರಣಗಳನ್ನು, 2 ಸ್ಕೂಟರ್ ಮತ್ತು 3 ಮೊಬೈಲ್ ಪೋನ್ ಗಳನ್ನು ಒಟ್ಟು 5 ಲಕ್ಷ ಮೌಲ್ಯ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ‘ಕುಲಶೇಖರ ಕಲ್ಪಣೆಯಲ್ಲಿ ವಾಸವಿರುವ ಪಿಲಿಕುಳದ ಜಗದೀಶ್ ಶೆಟ್ಟಿ (39), ಉರ್ವಸ್ಟೋರ್‌ನ ಸುಜಿತ್ ಶೆಟ್ಟಿ (40), ಪದವಿನಂಗಡಿ, ವಾಸವಿರುವ ಪುತ್ತೂರು ತಾಲ್ಲೂಕು ಪಾಲ್ತಾಡಿಯ ಸುರೇಶ್ ರೈ (39) ಬಂಧಿತರು. ಮಂಗಳೂರು ನಗರದಲ್ಲಿ ಆಗಸ್ಟ್ ತಿಂಗಳಲ್ಲಿ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಸರ ಸುಲಿಗೆ ಪ್ರಕರಣ ಮತ್ತು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ 1 ಸರ ಸುಲಿಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿವರ : ದಿನಾಂಕ: 14-8-2022 ರಂದು ಮಂಗಳೂರು ಕದ್ರಿ ಆಳ್ವಾರಿಸ್ ರಸ್ತೆಯಲ್ಲಿ ಪುಣೆ ಮೂಲದ ಮಹಿಳೆಯ ಸರ ಕಳ್ಳತನ ಆಗಿದ್ದು, ಅನಂತರ ದಿನಾಂಕ: 24-8-2022 ರಂದು ಕದ್ರಿ ಠಾಣೆ ವ್ಯಾಪ್ತಿ ಕುಲಶೇಖರ ಎವರೆಸ್ಟ್ ಪ್ಲಾಸ್ಟಿಕ್ ಪ್ಯಾಕ್ಟರಿಯ ರಸ್ತೆಯಲ್ಲಿ ಮಹಿಳೆಯ ಸರ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ಹಾಗು ದಿನಾಂಕ: 25-8-2022 ರಂದು ಮಂಗಳೂರು ನಗರ ಕಂಕನಾಡಿ ಪೊಲೀಸ್ ಠಾಣೆಯ ಶಕ್ತಿನಗರದ ರಾಜೀವ ನಗರದ ದಲ್ಲಿ ಮಹಿಳೆ ಸರ ಸುಲಿಗೆ ನಡೆದಿತ್ತು. ಈ ಸರ ಸುಲಿಗೆ ಮಾಡಿದ ಆರೋಪಿಗಳು ಪತ್ತೆ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು ಸಿಸಿಬಿ ಅಧಿಕಾರಿ, ಸಿಬ್ಬಂದಿಯವರು ಪತ್ತೆ ಕಾರ್ಯ ನಡೆಸಿ ಮಹಿಳೆಯ ಸರ ಸುಲಿಗೆ ಪ್ರಕರಣದಲ್ಲಿ ಭಾಗಿಯಾದ 3 ಜನ ಆರೋಪಿಗಳನ್ನು ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರವನ್ನು ಮಾರಾಟ ಮಾಡಲು ಬಂದವರನ್ನು ಮಾಹಿತಿ ಮೇರೆಗೆ ದಸ್ತಗಿರಿ ಮಾಡಿರುತ್ತಾರೆ. .ಆರೋಪಿಗಳ ಪೈಕಿ ಜಗದೀಶ್ ನು ರಿಕ್ಷಾ ಚಾಲಕನಾಗಿದ್ದು, ಸುಜಿತ್ ಶೆಟ್ಟಿ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಸುರೇಶ್ ರೈ ಟೆಂಪೋ ಚಾಲಕನಾಗಿರುತ್ತಾನೆ. ಸುಜಿತ್ ಶೆಟ್ಟಿ ಎಂಬಾತನು ಮಂಗಳೂರಿನಲ್ಲಿ 2002 ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯಾಗಿರುತ್ತಾನೆ.
Discover more from Coastal Times Kannada
Subscribe to get the latest posts sent to your email.
Discussion about this post