ಮಂಗಳೂರು : ಯುವತಿಯೊಬ್ಬಳು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾವೂರು ಬಳಿಯ ಆಕಾಶಭವನದಲ್ಲಿ ನಡೆದಿದೆ.
ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿ ಶಿಫಾಲಿ (22) ಮೃತ ಯುವತಿ. ಆಕಾಶಭವನದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಇಂದು ಸಂಜೆ ಎಂದಿನಂತೆ ಮನೆಗೆ ಆಗಮಿಸಿದ್ದಳು. ಆದರೆ ಮನೆಯಲ್ಲಿ ಕೋಣೆಗೆ ತೆರಳಿ, ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ.
ಕೆಲವರು ಪ್ರೇಮ ವೈಫಲ್ಯದ ಕಾರಣ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.