ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ₹ 43.69 ಲಕ್ಷ ಮೌಲ್ಯದ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಚಿನ್ನ ವಶಪಡಿಸಿಕೊಂಡಿದ್ದಾರೆ. ಗುರುವಾರ ದುಬೈನಿಂದ ಬಂದ ಪ್ರಯಾಣಿಕನಿಂದ ₹ 37,69,800 ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಚಿನ್ನವನ್ನು ಮೂರು ಮಾತ್ರೆಗಳ ಮಾದರಿಯಲ್ಲಿ ಪೇಸ್ಟ್ ರೂಪದಲ್ಲಿ ತನ್ನ ಗುದನಾಳದಲ್ಲಿ ಬಚ್ಚಿಟ್ಟುಕೊಂಡಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ದುಬೈನಿಂದಲೇ ಬಂದ ಮತ್ತೋರ್ವ ಪ್ರಯಾಣಿಕ ಪ್ರತಿಷ್ಠಿತ ಸಂಸ್ಥೆಯ ಬ್ರಾಂಡ್ನ ಡೈರಿ ಕ್ರೀಂ ಟಿನ್ನೊಳಗಡೆ ಇರಿಸಿದ್ದ 24 ಕ್ಯಾರೆಟ್ನ 116.540 ಗ್ರಾಂ ಚಿನ್ನ ದೊರೆತಿದೆ. ಇದರ ಮೌಲ್ಯ 6,00,181 ರೂ. ಅಂದಾಜಿಸಲಾಗಿದೆ. ಈ ಎರಡು ಪ್ರಕರಣದಲ್ಲೂ ಪತ್ತೆಯಾದ ಚಿನ್ನ ಮತ್ತು ಪ್ರಯಾಣಿಕರನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.