• About us
  • Contact us
  • Disclaimer
Monday, April 13, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಾಂಬ್ ಸ್ಫೋಟ ವೇಳೆ ಕಾಲುಗಳ ಕಳೆದುಕೊಂಡ ಪ್ರಿಯತಮೆ; ಯುದ್ಧಭೂಮಿಯಲ್ಲಿ ಗೆದ್ದ ಅಪೂರ್ವ ಪ್ರೇಮ!. ವೀಡಿಯೊ

Coastal Times by Coastal Times
May 6, 2022
in ವಿದೇಶಿ ಸುದ್ದಿ
ಬಾಂಬ್ ಸ್ಫೋಟ ವೇಳೆ ಕಾಲುಗಳ ಕಳೆದುಕೊಂಡ ಪ್ರಿಯತಮೆ; ಯುದ್ಧಭೂಮಿಯಲ್ಲಿ ಗೆದ್ದ ಅಪೂರ್ವ ಪ್ರೇಮ!. ವೀಡಿಯೊ
66
VIEWS
WhatsappTelegramShare on FacebookShare on Twitter

ಕೀವ್:  ನಿಜವಾದ ಪ್ರೀತಿ ಯಾವತ್ತೂ ಗೆಲ್ಲುತ್ತೆ. ಪ್ರೀತಿಗೆ, ದೇಹ ಸೌಂದರ್ಯಕ್ಕಿಂದ ಮನಸ್ಸಿನ ಸೌಂದರ್ಯವೇ ಮುಖ್ಯ ಎಂಬುದನ್ನ ಈ ಉಕ್ರೇನ್ ನ ಜೋಡಿ ಸಾಬೀತು ಮಾಡಿ ಇಡೀ ವಿಶ್ವಕ್ಕೆ ಪ್ರೇಮದ ಸಂದೇಶ ಸಾರಿದ್ದಾರೆ. ರಷ್ಯಾ ಯುದ್ಧದಿಂದ ಉಕ್ರೇನ್ ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಉಕ್ರೇನ್‌ನ ನರ್ಸ್ ಳನ್ನು ಆಕೆಯ ಪ್ರಿಯಕರ ಆ ಬಳಿಕವೂ ಪ್ರೀತಿಯಿಂದ ಸಂಗಾತಿಯಾಗಿ ಸ್ವೀಕರಿಸಿದ್ದಾನೆ. ಆಕೆ ತಾನು ಪ್ರೀತಿಸಿದ ತನ್ನ ಪತಿಯೊಂದಿಗೆ ತನ್ನ ಮೊದಲ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾಳೆ. ಇಬ್ಬರು ವಿವಾಹವಾದ ಎಲ್ವಿವ್‌ನ ಆಸ್ಪತ್ರೆಯಲ್ಲಿ ಹೃದಯಸ್ಪರ್ಶಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. 23 ವರ್ಷದ ನರ್ಸ್ ಒಕ್ಸಾನಾ, ಮಾರ್ಚ್ 27 ರಂದು ಲುಹಾನ್ಸ್ಕ್ ಪ್ರದೇಶದ ತನ್ನ ತವರು ಲೈಸಿಚಾನ್ಸ್ಕ್ ನಲ್ಲಿ ತನ್ನ ನೂತನ ಪತಿ ವಿಕ್ಟರ್‌ನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಲ್ಯಾಂಡ್‌ಮೈನ್‌ಗೆ ಕಾಲಿಟ್ಟಳು. ಈ ವೇಳೆ ನೆಲಬಾಂಬ್ ಸ್ಫೋಟಗೊಂಡಾಗ ವಧು ತನ್ನ ಕಾಲುಗಳು ಮತ್ತು ಎಡಗೈಯಲ್ಲಿ ನಾಲ್ಕು ಬೆರಳುಗಳನ್ನು ಕಳೆದುಕೊಂಡಳು.

❤️🇺🇦 Very special lovestory.
A nurse from Lysychansk, who has lost both legs on a russian mine, got married in Lviv. On March 27, Victor and Oksana were coming back home, when a russian mine exploded. The man was not injured, but Oksana's both legs were torn off by the explosion. pic.twitter.com/X1AQNwKwyu

— Verkhovna Rada of Ukraine – Ukrainian Parliament (@ua_parliament) May 2, 2022

ಈ ವೇಳೆ ಪತಿ ವಿಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದು ಅವರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಒಕ್ಸಾನಾರನ್ನ ಡ್ನಿಪ್ರೊಗೆ ಸ್ಥಳಾಂತರಿಸಿದ ನಂತರ ನಾಲ್ಕು ಶಸ್ತ್ರಚಿಕಿತ್ಸೆಗೆ ಒಳಗಾದರು.  ಸ್ಕೈ ನ್ಯೂಸ್ ಪ್ರಕಾರ, ಆಕೆಯ ಗಾಯಗಳು ವಾಸಿಯಾದ ನಂತರ ವೈದ್ಯರು ಪ್ರಾಸ್ಥೆಟಿಕ್ಸ್ ಗಾಗಿ ಆಕೆಯ ಅಂಗಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದರು. ಪ್ರಾಸ್ಥೆಟಿಕ್ಸ್ ಅಳವಡಿಸುವ ಪ್ರಕ್ರಿಯೆಗಾಗಿ ಅವರು ನಾಲ್ಕು ದಿನಗಳ ಹಿಂದೆ ಎಲ್ವಿವ್ ತಲುಪಿದರು. ಅಲ್ಲಿ ಇಬ್ಬರೂ ಮದುವೆಯಾದರು. ಆಸ್ಪತ್ರೆಯಲ್ಲಿ ಮದುವೆಯಾದ ಈ ಜೋಡಿಯ  ನೃತ್ಯದ ವಿಡಿಯೋವನ್ನು ಆಸ್ಪತ್ರೆಯ ಸ್ವಯಂಸೇವಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವೀಡಿಯೊವನ್ನು ಉಕ್ರೇನ್‌ನ ಸಂಸತ್ತು ಕೂಡ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದು “ಅತ್ಯಂತ ವಿಶೇಷವಾದ ಪ್ರೇಮಕಥೆಯ” .

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಬುರ್ಖಾ ಧರಿಸಿ ಅಸಭ್ಯ ವರ್ತನೆ ತೋರಿದರೆ ಧರ್ಮದೇಟು: ಎಚ್ಚರಿಕೆಯ ಸಂದೇಶ

Next Post

ಮಂಗಳೂರಿಗೆ ಬಂದ ವಿಮಾನಯಾನಿಯ ಗುದದ್ವಾರದಲ್ಲಿ 24 ಕ್ಯಾರೆಟ್​ನ, 43.69 ಲಕ್ಷ ಮೌಲ್ಯದ ಚಿನ್ನ ಪತ್ತೆ

Related Posts

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ
ವಿದೇಶಿ ಸುದ್ದಿ

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

March 1, 2026
77
ಇರಾನ್ ಮೇಲೆ ಇಸ್ರೇಲ್ ದಾಳಿ; ರಾಜಧಾನಿ ಟೆಹ್ರಾನ್ ಮೇಲೆ ಭೀಕರ ಕ್ಷಿಪಣಿ ದಾಳಿ, ತುರ್ತು ಪರಿಸ್ಥಿತಿ ಘೋಷಣೆ!
ವಿದೇಶಿ ಸುದ್ದಿ

ಇರಾನ್ ಮೇಲೆ ಇಸ್ರೇಲ್ ದಾಳಿ; ರಾಜಧಾನಿ ಟೆಹ್ರಾನ್ ಮೇಲೆ ಭೀಕರ ಕ್ಷಿಪಣಿ ದಾಳಿ, ತುರ್ತು ಪರಿಸ್ಥಿತಿ ಘೋಷಣೆ!

February 28, 2026
103
Next Post
ಮಂಗಳೂರಿಗೆ ಬಂದ ವಿಮಾನಯಾನಿಯ ಗುದದ್ವಾರದಲ್ಲಿ 24 ಕ್ಯಾರೆಟ್​ನ, 43.69 ಲಕ್ಷ ಮೌಲ್ಯದ ಚಿನ್ನ ಪತ್ತೆ

ಮಂಗಳೂರಿಗೆ ಬಂದ ವಿಮಾನಯಾನಿಯ ಗುದದ್ವಾರದಲ್ಲಿ 24 ಕ್ಯಾರೆಟ್​ನ, 43.69 ಲಕ್ಷ ಮೌಲ್ಯದ ಚಿನ್ನ ಪತ್ತೆ

Discussion about this post

Recent News

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಬಹು ಅಂಗಾಂಗ ವೈಫಲ್ಯದಿಂದ ನಿಧನ

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಬಹು ಅಂಗಾಂಗ ವೈಫಲ್ಯದಿಂದ ನಿಧನ

April 13, 2026
0
ಮಂಗಳೂರು ಸಂತ ಅಲೋಶಿಯಸ್ ರೆಕ್ಟರ್ ಫಾ. ಮೆಲ್ವಿನ್ ಜೆ ಪಿಂಟೋ ನಿಧನ

ಮಂಗಳೂರು ಸಂತ ಅಲೋಶಿಯಸ್ ರೆಕ್ಟರ್ ಫಾ. ಮೆಲ್ವಿನ್ ಜೆ ಪಿಂಟೋ ನಿಧನ

April 13, 2026
3
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಬಹು ಅಂಗಾಂಗ ವೈಫಲ್ಯದಿಂದ ನಿಧನ

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಬಹು ಅಂಗಾಂಗ ವೈಫಲ್ಯದಿಂದ ನಿಧನ

April 13, 2026
ಮಂಗಳೂರು ಸಂತ ಅಲೋಶಿಯಸ್ ರೆಕ್ಟರ್ ಫಾ. ಮೆಲ್ವಿನ್ ಜೆ ಪಿಂಟೋ ನಿಧನ

ಮಂಗಳೂರು ಸಂತ ಅಲೋಶಿಯಸ್ ರೆಕ್ಟರ್ ಫಾ. ಮೆಲ್ವಿನ್ ಜೆ ಪಿಂಟೋ ನಿಧನ

April 13, 2026
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ್ಟಿ ಬಂಧಿಸಿದ ಕಾರ್ಕಳ ಪೊಲೀಸರು,

ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ್ಟಿ ಬಂಧಿಸಿದ ಕಾರ್ಕಳ ಪೊಲೀಸರು,

April 12, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d