• About us
  • Contact us
  • Disclaimer
Sunday, April 5, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವಿಟ್ಲದಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ : ಕುಟುಂಬದಿಂದ ಲವ್ ಜಿಹಾದ್ ಆರೋಪ, ಹಿಂದು ಸಂಘಟನೆಗಳಿಂದ ತನಿಖೆಗೆ ಆಗ್ರಹ

Coastal Times by Coastal Times
May 6, 2022
in ಕರಾವಳಿ
ವಿಟ್ಲದಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ : ಕುಟುಂಬದಿಂದ ಲವ್ ಜಿಹಾದ್ ಆರೋಪ, ಹಿಂದು ಸಂಘಟನೆಗಳಿಂದ ತನಿಖೆಗೆ ಆಗ್ರಹ
104
VIEWS
WhatsappTelegramShare on FacebookShare on Twitter

ಮಂಗಳೂರು ಮೇ 6: ದಕ್ಷಿಣಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದ ಬಾಲಕಿ ಆತ್ಮಹತ್ಯೆ ಪ್ರಕರಣ ಈಗ ಲವ್ ಜಿಹಾದ್ ಬಣ್ಣ ಪಡೆದಿದೆ. ಮೇ 4ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರಿನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಲಕಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಅನ್ಯಧರ್ಮದ ಯುವಕ ನೀಡಿದ ಪ್ರಚೋದನೆಯೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಬಾಲಕಿ ಮನೆಯವರಯ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.  ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಕುಟುಂಬ ಕನ್ಯಾನ ಗ್ರಾಮದ ಕಣಿಯೂರು ಮಸೀದಿ ಹಿಂಭಾಗದ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೃತ ಬಾಲಕಿ, ಬಾಲಕಿಯ ಅಣ್ಣ ಮತ್ತು ತಂದೆ-ತಾಯಿ ವಾಸವಿದ್ದರು. ಮೇ 4 ಬುಧವಾರ ಬೆಳಗ್ಗೆ ಎಲ್ಲರೂ ಮನೆಯಿಂದ ಹೊರಗಿದ್ದ ಸಂದರ್ಭದಲ್ಲಿ ಬಾಲಕಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿಗೆ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಕಾರಣ ಅಂತಾ ಬಾಲಕಿ ತಾಯಿ ಆರೋಪಿಸಿದ್ದಾರೆ.

ಸಾಹುಲ್ ಹಮೀದ್ ಮತ್ತು ಮೃತ ಬಾಲಕಿ ಪ್ರೀತಿಸುತ್ತಿದ್ದು, ಇವರಿಬ್ಬರು ಧೀರ್ಘ ಕಾಲ ಫೋನ್ ಸಂಭಾಷಣೆಯಲ್ಲಿದ್ದರು. ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದು ಬಾಲಕಿಗೆ ಬುದ್ಧಿವಾದ ಹೇಳಿದ್ದರು. ಬಾಲಕಿ ಹೆತ್ತವರು ಸಾಹುಲ್ ಹಮೀದ್ ಗೆ ಮಗಳ ವಿಚಾರಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದರು. ಆದರೂ ಸಾಹುಲ್ ಹಮೀದ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪದೇ ಪದೇ ಬಾಲಕಿ ಮನೆಗೆ ಬಂದು ಪ್ರೀತಿ ಸುವಂತೆ ಒತ್ತಾಯಿಸುತ್ತಿದ್ದ. ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ ಅಂತಾ ಒತ್ತಾಯಿಸುತ್ತಿದ್ದ. ಪದೇ ಪದೇ ಮನೆಗ ಬಂದು ಬರೋದಾದರೆ ಬಾ ಇಲ್ಲವಾದರೆ ಸಾಯಿ ಅಂತಾ ಕಿರುಕುಳ ನೀಡುತ್ತಿದ್ದ ಇದರಿಂದ‌ ಮನನೊಂದು ಬಾಲಕಿ ಸಾವನ್ನಪ್ಪಿದ್ದಾಳೆ ಅಂತಾ ಬಾಲಕಿ ತಾಯಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

“ಇದು ಲವ್ ಜಿಹಾದ್ ನಿಂದ ಆದ ಸಾವಾಗಿದೆ. ವ್ಯವಸ್ಥಿತ ಕೊಲೆಯೂ ಆಗಿದೆ. ಲವ್ ಜಿಹಾದ್ ಗೆ ಬಲಿಯಾದವರ ಸಾಲಿಗೆ ಬಾಲಕಿಯೂ ಸೇರಿದ್ದಾಳೆ. ಬಾಲಕಿಯ ಸಾವಿಗೆ ಕಾರಣನಾದ ಸಾಹುಲ್ ಹಮೀದ್ ನನ್ನು ಬಂಧನ ಮಾಡಬೇಕು. ಅವನ ಮೇಲೆ ಕೊಲೆ ಕೇಸ್ ದಾಖಲೆ ಮಾಡಬೇಕು. ಬಾಲಕಿಯ ಸಾವಿಗೆ ಸಾಹುಲ್ ಹಮೀದ್ ನ ಮನೆಯವರೂ ನೇರ ಕಾರಣ ಆಗುತ್ತಾರೆ. ಬಾಲಕಿ ಸಾವಿಗೆ ಪ್ರಚೋದನೆ ನೀಡಿದ್ದಾರೆ. ಆರು ತಿಂಗಳಿನಿಂದ ಬಾಲಕಿಗೆ ಕಿರುಕುಳ ನೀಡಿದ್ದಾರೆ,” ಅಲ್ಲದೇ ಬಾಲಕಿಗೆ ವಾಮಾಚಾರ ಮಾಡಿಸಿದ್ದ. ಬಾಲಕಿಯನ್ನು ವಶೀಕರಣ ಮಾಡಲು ಬಾಲಕಿಯ ಕೂದಲೂ ತೆಗೆದುಕೊಂಡು ಹೋಗಿದ್ದ. ಮಾನಸಿಕವಾಗಿ ಚಿತ್ರ ಹಿಂಸೆ‌ ನೀಡಿದ್ದ ಅಂತಾ ಬಾಲಕಿ ತಾಯಿ ಆರೋಪಿಸಿದ್ದಾರೆ. ಬಾಲಕಿಯ ಮನೆಗೆ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಯ ಪ್ರಮುಖರು ಭೇಟಿ ನೀಡಿದ್ದಾರೆ. ಬಾಲಕಿಯ ಹೆತ್ತವರ ಬಳಿ ಮಾಹಿತಿ ಪಡೆದ ಶರಣ್ ಪಂಪ್ವೆಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಟ್ಲ ಠಾಣೆ ವ್ಯಾಪ್ತಿಯ ಕನ್ಯಾನ ಗ್ರಾಮದ ಕಣಿಯೂರಿನಲ್ಲಿ ಮಸೀದಿ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿದ್ದ ಪರಿಶಿಷ್ಟ ವರ್ಗದ ಕುಟುಂಬದ ಸಂಜೀವ ಎಂಬವರ ಪುತ್ರಿ ಆತ್ಮಿಕಾ ಬುಧವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆ ಬಗ್ಗೆ ವಿಟ್ಲ ಠಾಣೆಯಲ್ಲಿ ಆರೋಪಿ ಸಾಹುಲ್ ಹಮೀದ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರಿಗೆ ಬಂದ ವಿಮಾನಯಾನಿಯ ಗುದದ್ವಾರದಲ್ಲಿ 24 ಕ್ಯಾರೆಟ್​ನ, 43.69 ಲಕ್ಷ ಮೌಲ್ಯದ ಚಿನ್ನ ಪತ್ತೆ

Next Post

ಉಡುಪಿ: ಮಲ್ಪೆ ಬೀಚ್‌ನಲ್ಲಿ ರಾಜ್ಯದ ಮೊದಲ ತೇಲುವ ಸೇತುವೆ, ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ಪ್ರಯತ್ನ

Related Posts

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್
ಕರಾವಳಿ

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

April 5, 2026
7
ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ
ಕರಾವಳಿ

ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

April 4, 2026
24
Next Post
ಉಡುಪಿ: ಮಲ್ಪೆ ಬೀಚ್‌ನಲ್ಲಿ ರಾಜ್ಯದ ಮೊದಲ ತೇಲುವ ಸೇತುವೆ, ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ಪ್ರಯತ್ನ

ಉಡುಪಿ: ಮಲ್ಪೆ ಬೀಚ್‌ನಲ್ಲಿ ರಾಜ್ಯದ ಮೊದಲ ತೇಲುವ ಸೇತುವೆ, ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ಪ್ರಯತ್ನ

Discussion about this post

Recent News

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

April 5, 2026
7
ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

April 4, 2026
24
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

April 5, 2026
ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

April 4, 2026
ಮಿಫ್ಸೆ-ಮಿನ್ನರ್ವ ಕಾಲೇಜಿನಲ್ಲಿ ವಿ.ಟಿ.ಯು (VTU) ಕಾರ್ಯಕ್ರಮಗಳ ಉದ್ಘಾಟನೆ: ಕೌಶಲ್ಯಾಧಾರಿತ ಶಿಕ್ಷಣಕ್ಕೆ ಸ್ಪೀಕರ್ ಯು.ಟಿ. ಖಾದರ್ ಕರೆ

ಮಿಫ್ಸೆ-ಮಿನ್ನರ್ವ ಕಾಲೇಜಿನಲ್ಲಿ ವಿ.ಟಿ.ಯು (VTU) ಕಾರ್ಯಕ್ರಮಗಳ ಉದ್ಘಾಟನೆ: ಕೌಶಲ್ಯಾಧಾರಿತ ಶಿಕ್ಷಣಕ್ಕೆ ಸ್ಪೀಕರ್ ಯು.ಟಿ. ಖಾದರ್ ಕರೆ

April 4, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d