• About us
  • Contact us
  • Disclaimer
Saturday, July 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

10 ವರ್ಷಗಳ ಕಾಲ ಪ್ರತಿದಿನ ಮಗಳನ್ನು ಸೊಂಟದಲ್ಲಿ ಹೊತ್ತು ಶಾಲೆಗೆ ಕರೆದೊಯ್ದ ತಾಯಿ; ಎಂ.ಕಾಂ ಪದವೀಧರೆ ದಿವ್ಯಾಂಗ ಯುವತಿ ಭಾಗ್ಯಶ್ರೀ ಕುಲಾಲ್ ಈಗ ಉದ್ಯೋಗದ ನಿರೀಕ್ಷೆಯಲ್ಲಿ

Coastal Times by Coastal Times
July 6, 2026
in ಕರಾವಳಿ
10 ವರ್ಷಗಳ ಕಾಲ ಪ್ರತಿದಿನ ಮಗಳನ್ನು ಸೊಂಟದಲ್ಲಿ ಹೊತ್ತು ಶಾಲೆಗೆ ಕರೆದೊಯ್ದ ತಾಯಿ; ಎಂ.ಕಾಂ ಪದವೀಧರೆ ದಿವ್ಯಾಂಗ ಯುವತಿ ಭಾಗ್ಯಶ್ರೀ ಕುಲಾಲ್ ಈಗ ಉದ್ಯೋಗದ ನಿರೀಕ್ಷೆಯಲ್ಲಿ
155
VIEWS
WhatsappTelegramShare on FacebookShare on Twitter

ಬಂಟ್ವಾಳ : ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದುರ್ಗಾನಗರದ ಭಾಗ್ಯಶ್ರೀ ಕುಲಾಲ್ ಅವರ ಬದುಕು ಕೇವಲ ಒಬ್ಬ ವಿಕಲಚೇತನ ಯುವತಿಯ ವೈಯಕ್ತಿಕ ಕಥೆಯಲ್ಲ. ಅದು ತಾಯಿಯ ಅಚಲ ತ್ಯಾಗ, ಕುಟುಂಬದ ನಿರಂತರ ಹೋರಾಟ ಮತ್ತು ಶಿಕ್ಷಣದ ಮೇಲೆ ಇಟ್ಟ ಅಡಿಗಡಿಗೆಯ ನಂಬಿಕೆಯ ಜೀವಂತ ಸಾಕ್ಷಿಯಾಗಿದೆ. ಹುಟ್ಟಿನಿಂದಲೇ ಸೊಂಟದ ಕೆಳಭಾಗ ಸಂಪೂರ್ಣ ನಿಶಕ್ತಗೊಂಡಿರುವ ಕಾರಣ ಅವರಿಗೆ ಸ್ವತಂತ್ರವಾಗಿ ನಡೆಯಲು ಸಾಧ್ಯವಿಲ್ಲ. ದೈನಂದಿನ ಸಣ್ಣ ಕೆಲಸಕ್ಕೂ ಮತ್ತೊಬ್ಬರ ನೆರವು ಅನಿವಾರ್ಯವಾಗಿದ್ದರೂ, ಅವರ ಕನಸುಗಳು ಎಂದಿಗೂ ಕುಗ್ಗಲಿಲ್ಲ.

ಬಂಟ್ವಾಳದ ಲೊರೆಟ್ಟೋ ಪ್ರಾಥಮಿಕ ಮತ್ತು ಪ್ರೌಢ ಪ್ರೌಢಶಾಲೆಯವರೆಗೆ ಸುಮಾರು 10 ವರ್ಷಗಳ ಕಾಲ ಪ್ರತಿದಿನ ಬೆಳಗ್ಗೆ ತಾಯಿ ರಾಜೀವಿ ಮಗಳನ್ನು ತನ್ನ ಸೊಂಟದಲ್ಲಿ ಎತ್ತಿಕೊಂಡು ಬಾಡಿಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಶಾಲೆಯಲ್ಲಿ ಭಾಗ್ಯಶ್ರೀ ಪಾಠ ಕೇಳುತ್ತಿದ್ದರೆ, ತಾಯಿ ಶಾಲೆಯ ಆವರಣದಲ್ಲಿ ಕುಳಿತು ಬೀಡಿ ಕಟ್ಟುತ್ತಿದ್ದರು. ಸಂಜೆ ಮತ್ತೆ ಅದೇ ಕೈಗಳಲ್ಲಿ ಮಗಳನ್ನು ಮನೆಗೆ ಕರೆತರುತ್ತಿದ್ದರು. ಇದು ಒಂದೆರಡು ದಿನಗಳ ತ್ಯಾಗವಲ್ಲ 10 ವರ್ಷಗಳ ಕಾಲ ನಿರಂತರವಾಗಿ ಸಾಗಿದ ತಾಯಿಯ ಪ್ರೀತಿ, ತ್ಯಾಗ ಮತ್ತು ಸಂಕಲ್ಪದ ಪಯಣ. ಆ ತ್ಯಾಗಕ್ಕೆ ಫಲವೂ ದೊರೆಯಿತು. ಭಾಗ್ಯಶ್ರೀ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 75 ಅಂಕ ಗಳಿಸಿದ್ದರು.

ನಂತರ ಸಂಘ-ಸಂಸ್ಥೆಗಳ ಸಹಕಾರದಿಂದ ಅವರ ಶಿಕ್ಷಣ ಮುಂದುವರಿಯಿತು. ಬಂಟ್ವಾಳ ಎಸ್‌ವಿಎಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಶೇ.78 ಅಂಕ ಮತ್ತು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ, ಪದವಿ ಶಿಕ್ಷಣದಲ್ಲಿ ಶೇಕಡಾ 80 ಅಂಕಗಳೊಂದಿಗೆ ಪೂರ್ಣಗೊಳಿಸಿದರು. ಎಂಆರ್‌ಪಿಎಲ್ ಸಂಸ್ಥೆಯ ಅಮೂಲ್ಯ ವಿದ್ಯಾರ್ಥಿವೇತನದ ಸಹಕಾರದೊಂದಿಗೆ ಬಳಿಕ ವಾಮದಪದವು ಸರ್ಕಾರಿ ಕಾಲೇಜಿನಲ್ಲಿ ಎಂ.ಕಾಂ. ಪದವಿಯನ್ನು ಶೇ.70 ಅಂಕಗಳೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಬಂಟ್ವಾಳ ತಾಲೂಕು ಕುಲಾಲ ಸಂಘ, ದೃತಿ ವಿದ್ಯಾರ್ಥಿವೇತನ, ಪಂಚಮುಖಿ ಕಂಬೈನ್ಸ್ ಬಿ.ಸಿ. ರೋಡ್ ಹೀಗೆ ಹಲವಾರು ಸ್ಥಳೀಯ ಸಂಘಟನೆಗಳ ನೆರವಿನಿಂದ ಈಕೆ ಉನ್ನತ ಶಿಕ್ಷಣ ಪಡೆಯುವಂತಾಯಿತು.

ಈ ಕುಟುಂಬದಲ್ಲಿ ಭಾಗ್ಯಶ್ರೀ ಅವರ ಅಕ್ಕ ವಿದ್ಯಾಶ್ರೀ ಕೂಡ ಉನ್ನತ ವಿದ್ಯಾರ್ಹತೆ ಹೊಂದಿದ್ದಾರೆ. ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅವರು ಕೆ-ಸೆಟ್ ಮತ್ತು ನೆಟ್ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ. ಆದರೆ ಅವರಿಗೂ ಸ್ಥಿರ ಉದ್ಯೋಗ ದೊರೆತಿಲ್ಲ. ಒಂದೇ ಮನೆಯ ಇಬ್ಬರು ಪ್ರತಿಭಾವಂತ ಯುವತಿಯರು ಇಂದು ತಮ್ಮ ಅರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ನಿರೀಕ್ಷೆಯಲ್ಲಿದ್ದಾರೆ.

ಇಷ್ಟೊಂದು ಸಾಧನೆ ಮಾಡಿದರೂ ಭಾಗ್ಯಶ್ರೀ ಇಂದು ಮನೆಯ ನಾಲ್ಕು ಗೋಡೆಗಳ ನಡುವೆ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಉತ್ತಮ ಅಂಕಗಳು, ಉನ್ನತ ವಿದ್ಯಾರ್ಹತೆ ಮತ್ತು ದುಡಿಯುವ ಮನಸ್ಸು ಇದ್ದರೂ ಅವಕಾಶ ಮಾತ್ರ ದೊರೆತಿಲ್ಲ. ಅಂಗವೈಕಲ್ಯವು ಅವರ ಸಾಮರ್ಥ್ಯವನ್ನು ಕಡಿಮೆ ಮಾಡಿಲ್ಲ. ಆದರೆ ಉದ್ಯೋಗಾವಕಾಶಗಳ ಕೊರತೆ ಅವರ ಬದುಕಿನ ಹಾದಿಗೆ ಅಡ್ಡಿಯಾಗುತ್ತಿದೆ.

ಭಾಗ್ಯಶ್ರೀ ಅವರ ಬದುಕು ಒಬ್ಬರ ವೈಯಕ್ತಿಕ ಹೋರಾಟವಲ್ಲ; ಅದು ಶಿಕ್ಷಣದ ಮೇಲೆ ನಂಬಿಕೆ ಇಟ್ಟು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ನೂರಾರು ವಿಕಲಚೇತನ ಯುವತಿಯರ ಪ್ರತಿನಿಧಿ. ಪ್ರತಿಭೆ, ಪರಿಶ್ರಮ ಮತ್ತು ವಿದ್ಯಾರ್ಹತೆ ಇದ್ದರೂ ಅವಕಾಶಗಳ ಕೊರತೆಯಿಂದ ಅವರ ಕನಸುಗಳು ನಿಂತುಹೋಗುತ್ತಿರುವುದು ಇಂದಿನ ಸಮಾಜದ ಕಠಿಣ ವಾಸ್ತವವಾಗಿದೆ.

“ನಮ್ಮಂತಹ ವಿಕಲಚೇತನರಿಗೆ ದಯೆ ಬೇಡ. ನಮ್ಮ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಸಾಕು. ನಾವು ಯಾರಿಗೂ ಹೊರೆಯಾಗದೆ ಸ್ವಾಭಿಮಾನದಿಂದ ಬದುಕಲು ಬಯಸುತ್ತೇವೆ” ಎನ್ನುತ್ತಾರೆ ಭಾಗ್ಯಶ್ರೀ ಕುಲಾಲ್.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್ ; ಪಡುಬಿದ್ರೆಯ ಮಹಿಳೆ ಬಂಧನ

Next Post

ಕಡಬ: ತೂಕ ಹೆಚ್ಚಿಸಿದ ನಕಲಿ ಚಿನ್ನದ ಆಭರಣಗಳನ್ನು ಬ್ಯಾಂಕ್​ನಲ್ಲಿ ಅಡವಿಟ್ಟು ವಂಚಿಸಲು ಯತ್ನ: ಇಬ್ಬರ ಬಂಧನ

Related Posts

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

July 17, 2026
23
ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ
ಕರಾವಳಿ

ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

July 17, 2026
16
Next Post
ಕಡಬ: ತೂಕ ಹೆಚ್ಚಿಸಿದ ನಕಲಿ ಚಿನ್ನದ ಆಭರಣಗಳನ್ನು  ಬ್ಯಾಂಕ್​ನಲ್ಲಿ ಅಡವಿಟ್ಟು ವಂಚಿಸಲು ಯತ್ನ: ಇಬ್ಬರ ಬಂಧನ

ಕಡಬ: ತೂಕ ಹೆಚ್ಚಿಸಿದ ನಕಲಿ ಚಿನ್ನದ ಆಭರಣಗಳನ್ನು ಬ್ಯಾಂಕ್​ನಲ್ಲಿ ಅಡವಿಟ್ಟು ವಂಚಿಸಲು ಯತ್ನ: ಇಬ್ಬರ ಬಂಧನ

Discussion about this post

Recent News

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
11
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

July 18, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

July 18, 2026
ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

July 17, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d